ನಕಲಿ ಹಾಗೂ ಕಲಬೆರಕೆ ಮದ್ಯ ಸೇವಿಸಿ ಬರೋಬ್ಬರಿ 30 ಮಂದಿ ಮೃತಪಟ್ಟಿದ್ದಾರೆ. ಇಷ್ಟೇ ಅಲ್ಲ 50ಕ್ಕೂ ಹೆಚ್ಚು ಮಂದಿ ತೀವ್ರ ಅಸ್ವಸ್ಥರಾಗಿದ್ದು ಆಸ್ಪತ್ರೆ ದಾಖಲಾಗಿದ್ದಾರೆ.

ಗುಜರಾತ್(ಜು.26): ನಕಲಿ ಹಾಗೂ ಕಲಬೆರೆದ ಮದ್ಯ ಸೇವಿಸಿದ ಗುಜರಾತ್‌ನ ಬಟೋದ ಗ್ರಾಮದ 30 ಮಂದಿ ಮೃತಪಟ್ಟಿದ್ದಾರೆ. ಇನ್ನು 50ಕ್ಕೂ ಹೆಚ್ಚು ಮಂದಿ ಆಸ್ಪತ್ರೆ ದಾಖಲಾಗಿದ್ದು, ಹಲವರ ಸ್ಥಿತಿ ಗಂಭೀರವಾಗಿದೆ. ಅಕ್ರಮವಾಗಿ ನಕಲಿ ಹಾಗೂ ಅಪಾಯಕಾರಿ ಅಲ್ಕೋಹಾಲ್ ಬಳಿಸಿರುವ ಮದ್ಯ ತಯಾರಿಸಲಾಗದೆ. ಈ ಮದ್ಯವನ್ನು ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತಿತ್ತು. ಇದ್ಯಾವುದನ್ನು ಅರಿಯದ ಗ್ರಾಮಸ್ಥರು ಇದೀಗ ಜೀವನ್ಮರಣದ ಹೋರಾಟ ಮಾಡುತ್ತಿದ್ದಾರೆ. ಹಲವರ ಪ್ರಾಣ ಪಕ್ಷಿ ಹಾರಿಹೋಗಿದೆ. ಸೋಮವಾರ(ಜು.26) ರಾತ್ರಿ ರೋಜಿದ್ ಗ್ರಾಮದ ಹಲವರು ಸ್ಥಳೀಯ ಆಸ್ಪತ್ರೆಗೆ ದಾಖಲಾಗಿದ್ದಾರೆ. ತೀವ್ರ ಅಸ್ವಸ್ಥಗೊಂಡು ಒಬ್ಬರ ಹಿಂದೊಬ್ಬರು ದಾಖಲಾಗುತ್ತಿದ್ದಂತೆ ಅಪಾಯದ ಎಚ್ಚರಿಕೆ ಸಿಕ್ಕಿದೆ. ಇದೇ ವೇಳೆ ಹಲವರು ಮೃತಪಟ್ಟಿದ್ದಾರೆ. ತುರ್ತು ಚಿಕಿತ್ಸೆ ಹಾಗೂ ತಪಾಸಣೆ ನಡೆಸಿದಾಗ ಅಪಾಯಕಾರಿ ಹಾಗೂ ನಕಲಿ ಮದ್ಯ ಸೇವಿಸಿರುವುದು ಪತ್ತೆಯಾಗಿದೆ. ಸೋಮವಾರ ರಾತ್ರಿಯಿಂದ ಇದುವರೆಗೆ 30 ಮಂದಿ ಮೃತಪಟ್ಟಿದ್ದಾರೆ. ಘಟನೆ ತಿಳಿಯುತ್ತಿದ್ದಂತೆ ಪೊಲೀಸರು ಆಸ್ಪತ್ರೆ ಧಾವಿಸಿದ್ದಾರೆ. ಒಂದು ಕಂಡ ನಕಲಿ ಮದ್ಯ ಮಾರಾಟ ಮಾಡುತ್ತಿದ್ದ ಸ್ಥಳಕ್ಕೆ ತೆರಳಿ ಹಲವರನ್ನು ವಶಕ್ಕೆ ಪಡೆದಿದೆ. ಇತ್ತ ಸ್ಥಳೀಯ ಜಿಲ್ಲಾಡಳಿ ಸ್ಥಳಕ್ಕೆ ಆಗಮಿಸಿದ್ದು, ಆಸ್ಪತ್ರೆ ದಾಖಲಾಗಿರುವವರಿಗೆ ಸೂಕ್ತ ಚಿಕಿತ್ಸೆಗೆ ಸಹಕಾರ ನೀಡಿದೆ.

ಗುಜರಾತ್‌ನಲ್ಲಿ ಮದ್ಯ ಉತ್ಪಾದನೆ ಹಾಗೂ ಮಾರಾಟ ನಿಷೇಧ. ಹೀಗಾಗಿ ಹಲವು ಗ್ರಾಮಗಳಲ್ಲಿ ಅಕ್ರಮ ಹಾಗೂ ನಕಲಿ ಮದ್ಯ ತಯಾರಿಕೆ ದಂಧೆ ನಡೆಯುತ್ತಿದೆ. ಇದು ಮತ್ತೊಂದು ದುರಂತಕ್ಕೆ ಕಾರಣಾಗಿದೆ. ಅಕ್ರಮ ಮದ್ಯ ಸೇವಿಸಿದ ಪರಿಣಾಮ 30 ಮಂದಿ ಮೃತಪಟ್ಟಿದ್ದಾರೆ. ಹಲವರು ಅಸ್ಪಸ್ಥಗೊಂಡಿದ್ದಾರೆ. ಈ ಪ್ರಕರಣದ ಕುರಿತು ತನಿಖೆ ನಡೆಯುತ್ತಿದೆ. ಗ್ರಾಮಸ್ಥರು ಅಕ್ರಮ ಹಾಗೂ ನಕಲಿ ಮದ್ಯಕ್ಕೆ ಬಲಿಯಾಗಬೇಡಿ ಎಂದು ಇನ್ಸ್‌ಪೆಕ್ಟರ್ ಜನರಲ್ ಅಶೋಕ್ ಕುಮಾರ್ ಹೇಳಿದ್ದಾರೆ. ಅಸ್ವಸ್ಥರಾಗಿರುವ 50ಕ್ಕೂ ಹೆಚ್ಚು ಮಂದಿಯನ್ನು ಭವನಗರದ ಜಿಲ್ಲಾಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. 

ಈ ರಾಜ್ಯದಲ್ಲಿ ಮದ್ಯ ಶೇ. 20ರಷ್ಟು ಅಗ್ಗ, ಹೊಸ ನಿಯಮಕ್ಕೆ ಶೀಘ್ರವೇ ಕ್ಯಾಬಿನೆಟ್‌ ಅನುಮತಿ?

ಚುನಾವಣೆ ಹಿನ್ನಲೆಯಲ್ಲಿ ಗುಜರಾತ್ ಪ್ರವಾಸದಲ್ಲಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಸರ್ಕಾರದ ವಿರುದ್ದ ಆಕ್ರೋಶ ಹೊರಹಾಕಿದ್ದಾರೆ. ಇದು ಬಿಜೆಪಿ ಸರ್ಕಾರದ ಆಡಳಿತ ಎಂದಿದ್ದಾರೆ. ಸಾಮಾನ್ಯ ಜನರು ಬಲಿಯಾಗುತ್ತಿದ್ದಾರೆ. ಇಂತಹ ಕೊಳಕು ರಾಜಕೀಯ ಪಕ್ಷವನ್ನು ದೂರವಿಡಿ ಎಂದಿದ್ದಾರೆ. ಆಸ್ಪತ್ರೆಗೆ ಭೇಟಿ ನೀಡಿರುವ ಅರವಿಂದ್ ಕೇಜ್ರಿವಾಲ್, ಆರೋಗ್ಯ ವಿಚಾರಿಸಿದ್ದಾರೆ. 

ಬಿಹಾರದಲ್ಲಿ ಕಳ್ಳಭಟ್ಟಿಗೆ 40 ಜನರ ಸಾವು
ಕಳೆದ ವರ್ಷ ಬಿಹಾರದಲ್ಲಿ ಕಳ್ಳಭಟ್ಟಿಸೇವಿಸಿ ಒಟ್ಟು 40 ಮಂದಿ ಮೃತಪಟ್ಟಿದ್ದರು. ಬಿಹಾರದಲ್ಲಿ ಸಂಪೂರ್ಣ ಮದ್ಯ ನಿಷೇಧ ಜಾರಿಯಲ್ಲಿದೆ. ಹೀಗಾಗಿ ಜನರು ಕಳ್ಳಭಟ್ಟಿಗೆ ಮುಗಿಬೀಳುತ್ತಿದ್ದಾರೆ. ಬಿಹರದ ಪಶ್ಚಿಮ ಚಂಪಾರಣ್ಯ ಜಿಲ್ಲೆಯ ಗ್ರಾಮವೊಂದರಲ್ಲಿ ಕಳ್ಳಭಟ್ಟಿಸೇವೆನೆಯಿಂದ 16 ಮಂದಿ ಸಾವಿಗೀಡಾಗಿದ್ದರು. ದೇವುರಾ ಎಂಬ ಗ್ರಾಮದಲ್ಲಿ 8 ಮಂದಿ ಸಾವಿಗೀಡಾಗಿದ್ದರೆ, ಪಕ್ಕದ ಗ್ರಮಾದಲ್ಲಿ 8 ಮಂದಿ ಸಾವಿಗೀಡಾಗಿದ್ದಾರೆ. ಸಾವಿಗೂ ಮುನ್ನ ಮದ್ಯ ಸೇವನೆ ಮಾಡಿರುವ ಸಂಗತಿ ದೃಢಪಟ್ಟಿದೆ. ಇದೇ ವೇಳೆ ಅಕ್ರಮವಾಗಿ ಕಳ್ಳಭಟ್ಟಿಪೂರೈಕೆ ಮಾಡಿದ ಆರೋಪದ ಮೇಲೆ ಐವರನ್ನು ಪೊಲೀಸರು ಬಂಧಿಸಿದ್ದಾರೆ.