ನಾಗ್ಪುರ(ಆ.  30) ಕೊರೋನಾ ಎಲ್ಲರಿಗೂ ಸಂಕಷ್ಟ ತಂದಿಟ್ಟಿದೆ. ಲಾಕ್ ಡೌನ್ ಎಲ್ಲುವುದು ಪರಿಸ್ಥಿತಿಯ ಘೋರ ಕತೆ ಹೇಳುತ್ತಿದೆ. ಇಬ್ಬರು ಉದ್ಯಮಿಗಳು ಬೈಕ್ ಕಳ್ಳತನಕ್ಕೆ ಇಳಿದ ಪ್ರಸಂಗ ಇದು.

ಕೆಲ ತಿಂಗಳ ಹಿಂದೆ ತಮ್ಮ ಉದ್ಯಮವನ್ನು ಹೇಗೆ ವಿಸ್ತರಿಸಬೇಕು ಎಂದು ಯೋಚನೆ ಮಾಡುತ್ತಿದ್ದ ಉದ್ಯಮಿಗಳು ಕಳ್ಳರಾಗಿ ಬದಲಾದ ಕತೆ ಇದು.  ಮೊನೀಶ್ ದದ್ಲಾನಿ(27)    ಮತ್ತು ವಿವೇಕ್ ಸೇವಕ್(22)  ಎಂಬುವರನ್ನು ಶನಿವಾರ  ನಾಗ್ಪುರ ಪೊಲೀಸರು ಬಂಧಿಸಿದ್ದಾರೆ.  ಬಂಧಿತರಿಂದ ಕಳ್ಳತನವಾಗಿದ್ದ  ಹತ್ತು ದ್ವಿಚಕ್ರ ವಾಹನ ವಶಕ್ಕೆ ಪಡೆಯಲಾಗಿದೆ.

ಗಾಂಜಾ ಮತ್ತಲ್ಲಿ ಬೆಂಗಳೂರು 'ಬುಲೆಟ್ ಬಸ್ಯರು' ಟ್ರಾಫಿಕ್ ಪೊಲೀಸ್ ಮೇಲೆ ಹಲ್ಲೆ!

ವಿಚಾರಣೆ ವೇಳೆ ಅಂಶವೊಂದು ಒಂದಾಗಿದ್ದು ಮೊನೀಶ್ ಬಟ್ಟೆ ಉದ್ಯಮ ನಡೆಸುತ್ತಿದ್ದ, ವಿವೇಕ್ ಟೂರ್ ಆಂಡ್ ಟ್ರಾವೆಲ್ಸ್ ನಡೆಸುತ್ತಿದ್ದ. ಲಾಕ್ ಡೌನ್ ಪರಿಣಾಮ ಉದ್ಯಮ ನಷ್ಟವಾಗಿದ್ದು ಯುವಕರು ದ್ವಿಚಕ್ರ ವಾಹನ ಕಳ್ಳತನದಂತಹ ಕೆಲಸಕ್ಕೆ ಇಳಿದಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.