ಮುಂಬೈ(ಏ. 15)   ದೇಶದಲ್ಲಿ ಒಂದು ಕಡೆ ಕೊರೋನಾ ಅಬ್ಬರ ಮುಂದುವರಿದಿದೆ.  ಇದನ್ನೇ ಅವಕಾಶ ಮಾಡಿಕೊಂಡ ಕಾಮಾಂಧರಿಗೂ ಕಡಿಮೆ ಇಲ್ಲ.

 ಮುಂಬೈ ಅಂಧೇರಿಯ ಹೋಟೆಲ್‌ವೊಂದರಲ್ಲಿ  ಕೊರೋನಾ ಸೋಂಕಿನ ಕಾರಣಕ್ಕೆ ಕ್ವಾರಂಟೈನ್ ನಲ್ಲಿದ್ದ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಮುಂದಾಗಿದ್ದ ಸಿಬ್ಬಂದಿಯನ್ನು ಬಂಧಿಲಾಗಿದೆ.

ವಧು, ಪೋಷಕರು, ಪೂಜಾರಿ..ಎಲ್ಲರೂ ನಕಲಿ..ನಕಲಿ ಮದುವೆ

ಮಹಿಳೆ ಸಹಾಯವಾಣಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ. ಮಾಹಿತಿ ಕಲೆಹಾಕಿದ ಪೊಲೀಸರುಮಹಿಳೆಗೆ  ತೊಂದರೆ ಕೊಡುತ್ತಿದ್ದ ಆಸಾಮಿ ಲೈಂಗಿಕವಾಗಿ ಸಹಕರಿಸಬೇಕು ಎಂದು ಒತ್ತಡ ಹೇರುತ್ತಿದ್ದ. ನೊಂದ ಮಹಿಳೆ ಪೊಲೀಸರ  ಮೊರೆ ಹೋಗಿದ್ದಾರೆ. 

ಸಂತ್ರಸ್ತೆಯ ದೂರಿನ ಆಧಾರದ ಮೇಲೆ, ಆರೋಪಿ ವಿರುದ್ಧ  ಐಪಿಸಿಯ ಸೆಕ್ಷನ್ 354 (ಮಹಿಳೆಯ ಮೇಲೆ ಹಲ್ಲೆ ಅಥವಾ ಕ್ರಿಮಿನಲ್ ಫೋರ್ಸ್) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು,14 ದಿನಗಳ ಪೊಲೀಸ್ ಕಸ್ಟಡಿಯಲ್ಲಿ ಕಳುಹಿಸಲಾಗಿದೆ.