ಹಾವೇರಿಯಲ್ಲಿ ನಡೆದಿದ್ದು ನೈತಿಕ ಪೊಲೀಸ್‌ಗಿರಿಯಲ್ಲ, ಸಾಮೂಹಿಕ ಅತ್ಯಾಚಾರ; ಇಲ್ಲಿದ್ದಾರೆ ನೋಡಿ ಗ್ಯಾಂಗ್ ರೇಪಿಸ್ಟ್‌?

ಹಾವೇರಿ ಜಿಲ್ಲೆಯ ಹಾನಗಲ್‌ನಲ್ಲಿ ಮುಸ್ಲಿಂ ಯುವಕರಿಂದ ನಡೆದಿದ್ದು ನೈತಿಕ ಪೊಲೀಸ್‌ಗಿರಿಯಲ್ಲ, ಅದೊಂದು 7 ಯುವಕರ ಗ್ಯಾಂಗ್‌ ರೇಪ್‌ ಪ್ರಕರಣ ಎಂದು ಕೇಳಿಬಂದಿದೆ.

Haveri district Hangal muslim youth Moral policing on Couples and they gang raped on woman sat

ಹಾವೇರಿ (ಜ.11): ಹಾವೇರಿ ಜಿಲ್ಲೆಯ ಹಾನಗಲ್‌ ಲಾಡ್ಜ್‌ನಲ್ಲಿ ಹಿಂದೂ ವ್ಯಕ್ತಿಯೊಂದಿಗೆ ಕಾಣಿಸಿಕೊಂಡಿದ್ದ ಮುಸ್ಲಿಂ ಮಹಿಳೆಯ ಮೇಲೆ ನಡೆದಿದ್ದು, ನೈತಿಕ ಪೊಲೀಸ್‌ಗಿರಿಯಲ್ಲ. ಇದೊಂದು 7 ಜನ ಮುಸ್ಲಿಂ ಯುವಕರು ಸೇರಿಕೊಂಡು ಮಹಿಳೆಯ ಮೇಲೆ ಮಾಡಿದ ಗ್ಯಾಂಗ್‌ರೇಪ್‌ ಪ್ರಕರಣ. ನೈತಿಕ ಪೊಲೀಸ್‌ಗಿರಿ ಹೆಸರಲ್ಲಿ ಮಹಿಳೆಯನ್ನು ಕಾರಿನಲಲಿ ಕಾಡಿಗೆ ಕರೆದೊಯ್ದು ಮೀಸೆಯೂ ಬಾರದ 7 ಮುಸ್ಲಿಂ ಯುವಕರು ವೀಡಿಯೋ ಮಾಡಿಕೊಳ್ಳುತ್ತಾ, ಅತ್ಯಾಚಾರ ಮಾಡಿ ಆಕೆಯನ್ನು ರಸ್ತೆಯಲ್ಲಿ ಬಿಟ್ಟು ಹೋಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಹೌದು, ಕಳೆದೆರಡು ದಿನಗಳಿಂದ ಹಿಂದೂ ವ್ಯಕ್ತಿಯೊಂದಿಗೆ ಲಾಡ್ಜ್‌ನಲ್ಲಿದ್ದ ಮುಸ್ಲಿಂ ಮಹಿಳೆಯ ಮೇಲೆ 7 ಜನ ಮುಸ್ಲಿಂ ಯುವಕರು ಹಲ್ಲೆ ಮಾಡಿದ್ದಾರೆ. ನಂತರ ಅವರನ್ನು ಕಾಡಿನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಥಳಿಸಿದ್ದಾರೆ. ಪುನಃ ಹಿಂದೂ ವ್ಯಕ್ತಿಯನ್ನು ಅಲ್ಲಿಂದ ಹೊಡೆದು ಓಡಿಸಿ, ಮಹಿಳೆಯೊಬ್ಬಳನ್ನೇ ನದಿ ತೀರದ ಪ್ರದೇಶ ಹಾಗೂ ಕಾಡಿನ ಪ್ರದೇಶದೊಳಗೆ ಕರೆದೊಯ್ದು ನಿರಂತರವಾಗಿ ಅತ್ಯಾಚಾರ ಮಾಡಿದ್ದಾರಂತೆ. ನಂತರ, ಆಕೆಯನ್ನು ಹಿಂದೂಗಳೊಂದಿಗೆ ಕಾಣಿಸಿಕೊಂಡರೆ ಹೀಗೆಯೇ ಆಗುತ್ತದೆ ಎಂದು ವಾರ್ನಿಂಗ್‌ ಕೊಟ್ಟಿದ್ದಾರೆ. ಜೊತೆಗೆ, ಅತ್ಯಾಚಾರ ನಡೆದ ವಿಚಾರ ಯಾರ ಬಳಿಯಾದರೂ ಹೇಳಿದರೆ, ವಿಡಿಯೋ ಸೋಷಿಯಲ್‌ ಮೀಡಿಯಾಗೆ ಹಂಚುವುದಾಗಿ ಹೇಳಿಕೊಂಡಿದ್ದಾರೆ.

ಲಾಡ್ಜ್‌ನಲ್ಲಿ ಮುಸ್ಲಿಂ ಯುವತಿ ಜೊತೆ ಸಿಕ್ಕಿಬಿದ್ದ ಯುವಕ, ರಾಜ್ಯದಲ್ಲಿ ಇದೆಂಥಾ ನೈತಿಕ ಪೊಲೀಸ್‌ಗಿರಿ!

ಹಾವೇರಿಯ ಹಾನಗಲ್ ನಲ್ಲಿ ನೈತಿಕ ಪೊಲೀಸ್ ಗಿರಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಸಂತ್ರಸ್ತ ಮಹಿಳೆ ಹೇಳಿದಂತೆ ಹೋಟೆಲ್‌ನಲ್ಲಿ ಹಲ್ಲೆ ಮಾಡಿದ ಬಳಿಕ ಯುವಕರು ನನ್ನನ್ನು ಕಾಡಿಗೆಗೆ ಕರೆದೊಯ್ದು ರೇಪ್ ಮಾಡಿದ್ದಾರೆ. ಜಂಗಲ್ ನಲ್ಲಿ 7 ಮುಸ್ಲಿಂ ಯುವಕರಿಂದ ಗ್ಯಾಂಗ್ ರೇಪ್ ಮಾಡಲಾಗಿದ್ದು, ಈ ವೇಳೆ ವಿರೋಧಿಸಿದ್ದಕ್ಕೆ ಮನಸ್ಸೋ ಇಚ್ಛೆ ಜೀವ ಹೋಗುವ ಹಾಗೆ ಥಳಿಸಿದ್ದಾರೆ. ನಂತರ, ಒಬ್ಬರಾದ ಮೇಲೆ ಒಬ್ಬರು ನನ್ನ ರೇಪ್ ಮಾಡಿದ್ದಾರೆ ಎಂದು ಸಂತ್ರಸ್ಥ ಮಹಿಳೆ ದೂರು ನೀಡಿದ್ದಾಳೆ. ಜೊತೆಗೆ, ಆಕೆಯ ಪತಿಯೂ ಕೂಡ ತನ್ನ ಪತ್ನಿ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಲಾಗಿದ್ದು, ಜಂಗಲ್ ನಲ್ಲಿ ರೇಪ್ ಮಾಡಿದ್ದ ವಿಡಿಯೋ ನನ್ನ ಬಳಿಯಿದ್ದು ಪೊಲೀಸರಿಗೆ ಕೊಟ್ಟಿದ್ದೇನೆ ಎಂದಿದ್ದಾರೆ.

ನ್ಯಾಯಾಲಯದ ಮುಂದೆ ಸಂತ್ರಸ್ತೆ ಹೇಳಿಕೆ: ಇನ್ನು ಮ್ಯಾಜಿಸ್ಟ್ರೇಟ್ ಮುಂದೆ ಸಂತ್ರಸ್ಥೆ ಹೇಳಿಕೆಯನ್ನು ಹಾನಗಲ್ ಪೋಲೀಸರು ಆಧರಿಸಿ ತನಿಖೆ ಮುಂದುವರಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಹಾವೇರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಂಶು ಕುಮಾರ್ ಅವರು, ಸಂತ್ರಸ್ತೆಯು 164 ಸ್ಟೇಟಮೆಂಟ್ ನ್ಯಾಯಾಲಯದಲ್ಲಿ ನ್ಯಾಯದೀಶರು ಮುಂದೆ ನೀಡಿದ್ದಾಳೆ. ಸ್ಟೇಟಮೆಂಟ್ ಪ್ರಕಾರ 376D ಸೆಕ್ಷನ್ ಆ್ಯಡ್ ಮಾಡಿದ್ದೇವೆ. ಇನ್ನು ಸ್ಟೇಟಮೆಂಟ್ ನಲ್ಲಿ 7 ಜನರ ಮೇಲೆ ಆರೋಪ ಇದೆ. 3 ಜನ ಈಗಾಗಲೇ ಅರೆಸ್ಟ್ ಆಗಿದಾರೆ, ಒಬ್ಬರು ಹಾಸ್ಪಿಟಲ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಮೂರು ಜನ ಹಾಗೂ ಮತ್ಯಾರು ಈ ಪ್ರಕರಣದಲ್ಲಿದಾರೆ ಅವರನ್ನು ಅರೆಸ್ಟ್ ಮಾಡ್ತೀವಿ. ಮಹಿಳೆಗೆ ಸಹ ಪೊಲೀಸ್ ಸೂಕ್ತ ರಕ್ಷಣೆ ನೀಡುತ್ತೇವೆ‌.376 D ಅಂದರೆ ಗ್ಯಾಂಗ್ ರೇಪ್ ಸೆಕ್ಷನ್ ಆಗಿದೆ. ಸೂಕ್ತ ತನಿಖೆ ನಡೆಸುತ್ತೇವೆ ಎಂದು ಹೇಳಿದರು.

ಹೈಸ್ಕೂಲ್ ಹುಡ್ಗೀರಿಗೆ ಹೆಡ್‌ ಮೇಷ್ಟ್ರಿಂದಲೇ ಲೈಂಗಿಕ ಕಿರುಕುಳ: ಸರ್ಕಾರದ ಶಿಕ್ಷೆಗೆ ಬೆಚ್ಚಿಬಿದ್ದ ಶಿಕ್ಷಕ!

ಇಲ್ಲಿದ್ದಾರೆ ನೋಡಿ ಗ್ಯಾಂಗ್ ರೇಪಿಸ್ಟ್‌ಗಳು: ಹಾನಗಲ್‌ ಪಟ್ಟಣದಲ್ಲಿ ನೈತಿಕ ಪೊಲೀಸ್‌ಗಿರಿ ಹೆಸರಲ್ಲಿ ಮುಸ್ಲಿಂ ಮಹಿಳೆ ಕರೆದೊಯ್ದು ಗ್ಯಾಂಗ್ ರೇಪ್ ಮಾಡಿದ ಪ್ರಕರಣದಲ್ಲಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಅಪ್ತಾಬ್ ಚಂದನಕಟ್ಟಿ , ಮದರಸಾಬ್ ಮಂಡಕ್ಕಿ, ಅಬ್ದುಲ್ ಖಾದರ್ ಬಂಧಿತರಾಗಿದ್ದಾರೆ. ಇನ್ನೊಬ್ಬ ಆರೋಪಿ ಮೊಹಮ್ಮದ್ ಸೈಪ್ ಗಾಯಾಳುವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇನ್ನುಳಿದ ಆರೋಪಿಗಳ ಬಂಧನಕ್ಕೆ ಎರಡು ತಂಡ ರಚಿಸಿಸಲಾಗಿದೆ ಎಂದು ಎಸ್‌ಪಿ ಅಂಶುಕುಮಾರ ಹೇಳಿದರು. 

Latest Videos
Follow Us:
Download App:
  • android
  • ios