Shocking news: ಮುದ್ದಾದ ಹೆಂಡ್ತಿ ಇದ್ರೂ ಗೌಪ್ಯವಾಗಿ ಐವರು ಮಹಿಳೆಯರನ್ನ ಮದುವೆಯಾದ ಸಾಫ್ಟವೇರ್ ಗಂಡ!
ವಿವಾಹಿತ ಸಾಫ್ಟ್‌ವೇರ್ ಎಂಜಿನಿಯರ್ ಒಬ್ಬ, ವಿವಾಹದ ಬಳಿಕವೂ ಇತರೆ ಐವರು ಮಹಿಳೆಯರನ್ನು ಗೌಪ್ಯವಾಗಿ ವಿವಾಹವಾದ ಅಚ್ಚರಿ ಮತ್ತು ಆಘಾತಕಾರಿ ಘಟನೆ ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ನಡೆದಿದೆ. ಇನ್ನೂ ಆತಂಕದ ವಿಷಯವೆಂದರೆ ಆತನ ಈ ಕೃತ್ಯಕ್ಕೆ ಆತನ ಕುಟುಂಬ ಸದಸ್ಯರೇ ಬೆಂಬಲವಾಗಿ ನಿಂತಿದ್ದಾರೆ.
ಗ್ವಾಲಿಯರ್ (ಸೆ.21): ವಿವಾಹಿತ ಸಾಫ್ಟ್‌ವೇರ್ ಎಂಜಿನಿಯರ್ ಒಬ್ಬ, ವಿವಾಹದ ಬಳಿಕವೂ ಇತರೆ ಐವರು ಮಹಿಳೆಯರನ್ನು ಗೌಪ್ಯವಾಗಿ ವಿವಾಹವಾದ ಅಚ್ಚರಿ ಮತ್ತು ಆಘಾತಕಾರಿ ಘಟನೆ ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ನಡೆದಿದೆ. ಇನ್ನೂ ಆತಂಕದ ವಿಷಯವೆಂದರೆ ಆತನ ಈ ಕೃತ್ಯಕ್ಕೆ ಆತನ ಕುಟುಂಬ ಸದಸ್ಯರೇ ಬೆಂಬಲವಾಗಿ ನಿಂತಿದ್ದಾರೆ.
ಸಿಂಗ್ ಶೇಖರ್ ಎಂಬಾತ 2018ರಲ್ಲಿ ಮಮತಾ ಎಂಬಾಕೆಯನ್ನು ಮದುವೆಯಾಗಿದ್ದ. ಮದುವೆಯಾದ ಬಳಿಕ ಸಿಂಗ್, ಕೆಲಸದ ಕಾರಣ ಹೇಳಿ ಪದೇ ಪದೇ ಸುದೀರ್ಘ ಅವಧಿಗೆ ಮನೆ ಬಿಟ್ಟು ಹೋಗುತ್ತಿದ್ದ. ಸಂಶಯ ಬಂದು ಮಮತಾ ಈ ಬಗ್ಗೆ ಪರಿಶೀಲಿಸಿದಾಗ ಪತಿ, ತಾನು ಅವಿವಾಹಿತ ಎಂದು ಹೇಳಿ ಇನ್ನೂ ಐವರು ಮಹಿಳೆಯರನ್ನು ಮದುವೆಯಾಗಿದ್ದ ವಿಷಯ ಬೆಳಕಿಗೆ ಬಂದಿದೆ.
ಬಾಬ್ರಿ ಮಸೀದಿಗೆ ಪರ್ಯಾಯವಾಗಿ ಇನ್ನೊಂದು ನಿರ್ಮಾಣಕ್ಕೆ ಹಣದ ಕೊರತೆ : ದೇಣಿಗೆ ಹಣ ಕೇವಲ 1 ಕೋಟಿ ರು. ಮಾತ್ರ!
ಈ ಕುರಿತು ಇದೀಗ ಮಮತಾ ದೂರು ನೀಡಿದ್ದು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಅಲ್ಲದೆ ಸಿಂಗ್, ವಿದೇಶಕ್ಕೆ ಪರಾರಿಯಾಗುವ ಸಾಧ್ಯತೆ ಇದೆ ಎಂದು ಮಮತಾ ದೂರಿರುವ ಹಿನ್ನೆಲೆಯಲ್ಲಿ ಶೇಖರ್‌ನ ಪಾಸ್ಪೋರ್ಟ್ ವಶಪಡಿಸಿಕೊಳ್ಳಲಾಗಿದೆ. ಪ್ರಾಥಮಿಕ ತನಿಖೆ ವೇಳೆ ಆತನ ಈ ಕೃತ್ಯಕ್ಕೆ ಆತನ ಕುಟುಂಬವೂ ಸಹಕರಿಸಿದ್ದು ಗೊತ್ತಾಗಿದೆ.
ಗ್ವಾಲಿಯರ್ ಡಿಎಸ್ಪಿ ಕ್ರಮದ ಭರವಸೆ
ಆರೋಪಿ ಸಿಂಗ್ ಶೇಖರ್ ತನ್ನ ಮೊದಲ ಹೆಂಡತಿಯನ್ನು 13 ಮೇ 2018 ರಂದು ವಿವಾಹವಾಗಿದ್ದ ಎಂದು ವರದಿಗಳು ತಿಳಿಸಿವೆ. ಆದರೂ ಕೆಲಸದ ನೆಪದಲ್ಲಿ ದಿನಗಟ್ಟಲೆ ನಾಪತ್ತೆಯಾಗಿದ್ದ ಆಸಾಮಿ. ಘಟನೆ ಬೆಳಕಿಗೆ ಬಂದ ಬಳಿಕ ಡಿಎಸ್‌ಪಿ ನೇತೃತ್ವದ ಗ್ವಾಲಿಯರ್ ಮಹಿಳಾ ಅಪರಾಧ ವಿಭಾಗವು ತನಿಖೆ ನಡೆಸಿದ್ದು, ಆಕೆಯ ಪತಿ ಮತ್ತು ಭಾಗಿಯಾಗಿರುವ ಇತರರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ವರದಿಗಳ ಪ್ರಕಾರ, ಆಕೆ ಈಗಾಗಲೇ 2022 ರಲ್ಲಿ ಆರೋಪಿ ವಿರುದ್ಧ ವರದಕ್ಷಿಣೆ ಕಿರುಕುಳದ ಪ್ರಕರಣವನ್ನು ದಾಖಲಿಸಿದ್ದಳು, ಅದು ಇನ್ನೂ ನ್ಯಾಯಾಲಯದಲ್ಲಿ ತೀರ್ಪಿಗೆ ಕಾಯುತ್ತಿದೆ. ಕಳೆದ ಎರಡು ವರ್ಷಗಳಲ್ಲಿ ಆರೋಪಿ ವಿರುದ್ಧ ವಾರೆಂಟ್ ಜಾರಿಯಾಗಿದ್ದರೂ, ಸಿಂಗ್ ಅವರನ್ನು ಇನ್ನೂ ಯಾಕೆ ಕಸ್ಟಡಿಗೆ ತೆಗೆದುಕೊಂಡಿಲ್ಲ ಎಂಬುದೇ ಯಕ್ಷ ಪ್ರಶ್ನೆಯಾಗಿದೆ.
ಸದ್ಯ ಪ್ರಕರಣ ಸಂಬಂಧ ತನಿಖೆ ನಡೆಯುತ್ತಿದೆ. ಈ ಪ್ರಕರಣದಿಂದ ಭಾರತದಲ್ಲಿ ವೈವಾಹಿಕ ವಂಚನೆ ಮತ್ತು ಕಾನೂನು ತೊಡಕುಗಳ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ, ಮಹಿಳೆಯರ ಹಕ್ಕುಗಳು ಮತ್ತು ಅಂತಹ ವಿಷಯಗಳಲ್ಲಿ ತಕ್ಷಣದ ನ್ಯಾಯದ ಅಗತ್ಯತೆಯ ಬಗ್ಗೆ ಸಾರ್ವಜನಿಕ ಚರ್ಚೆಯನ್ನು ಹುಟ್ಟುಹಾಕಿದೆ.