Asianet Suvarna News Asianet Suvarna News

ಸಿಂಧನೂರು: ಮನನೊಂದು ಅತಿಥಿ ಉಪನ್ಯಾಸಕ ಆತ್ಮಹತ್ಯೆ, ಕಾರಣ?

ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತ ಶಿವಪುತ್ರಪ್ಪ ಗುಂಡಸಾಗರ ಅವರ ಪತ್ನಿ ಶಶಿಕಲಾ ನೀಡಿದ ದೂರಿನನ್ವಯ ಪ್ರಕರಣ ದಾಖಲು. 

Guest Lecturer Commits Suicide at Sindhanur in Raichur grg
Author
First Published Oct 13, 2023, 1:40 PM IST

ಸಿಂಧನೂರು(ಅ.13): ನಗರದಲ್ಲಿ ಅತಿಥಿ ಉಪನ್ಯಾಸಕರೊಬ್ಬರು ಕೌಟುಂಬಿಕವಾಗಿ ಮನನೊಂದು ನೇಣಿಗೆ ಶರಣಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುರುವಾರ ನಡೆದಿದೆ. ನಗರದ ವಾರ್ಡ್ ನಂ.17ರ ಗಂಗಾನಗರ ನಿವಾಸಿ ಶಿವಪುತ್ರಪ್ಪ ಗುಂಡಸಾಗರ (47) ಮೃತ ದುರ್ದೈವಿ. 

ಈತನಿಗೆ ಪತ್ನಿ ಸೇರಿದಂತೆ ಇಬ್ಬರು ಪುತ್ರಿಯರಿದ್ದಾರೆ. ಆತ್ಮಹತ್ಯೆ ವಿಷಯ ತಿಳಿಯುತ್ತಿದ್ದಂತೆ ಶಹರ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟ್‌ರ್ ದುರುಗಪ್ಪ ಡೊಳ್ಳಿನ್, ಸಬ್ ಇನ್ಸಪೆಕ್ಟ್‌ರ್ ಬಸವರಾಜ ಸ್ಥಳಕ್ಕೆ ಖುದ್ದಾಗಿ ಭೇಟಿ ನೀಡಿ ಪರಿಶೀಲಿಸಿದರು. 

ಎರಡು ತಿಂಗಳಿಂದ ವೇತನ ನೀಡದೆ ಕಿರುಕುಳ; ಪೌರಕಾರ್ಮಿಕ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ

ನಂತರ ಮೃತದೇಹವನ್ನು ತಾಲೂಕಾಸ್ಪತ್ರೆಗೆ ತಂದು ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತ ಶಿವಪುತ್ರಪ್ಪ ಗುಂಡಸಾಗರ ಅವರ ಪತ್ನಿ ಶಶಿಕಲಾ ನೀಡಿದ ದೂರಿನನ್ವಯ ಪ್ರಕರಣ ದಾಖಲಾಗಿದೆ. ಸಂಜೆ ನಗರದ ಹಿರೇಹಳ್ಳ ಪಕ್ಕದಲ್ಲಿರುವ ವೀರಶೈವ ರುದ್ರಭೂಮಿಯಲ್ಲಿ ಮೃತರ ಅಂತ್ಯಕ್ರಿಯೆ ನಡೆಯಿತು.

Follow Us:
Download App:
  • android
  • ios