ಕಾನ್ಪುರ(ನ.17): ಉತ್ತರ ಪ್ರದೇಶದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ತಡೆಯಲು ಕಠಿಣ ಕ್ರಮಗಳನ್ನು ಜಾರಿಗೊಳಿಸಲಾಗಿದೆಯಾದರೂ ದುಷ್ಕರ್ಮಿಗಳ ಅಟ್ಟಹಾಸ ಮಿತಿ ಮೀರಿದೆ. ಅತ್ಯಾಚಾರ ಪ್ರಕರಣಗಳು ಸಾಮಾನ್ಯವಾಗಿವೆ. ಸದ್ಯ ಇಲ್ಲಿನ ಅರಣ್ಯ ಪ್ರದೇಶದಲ್ಲಿ ಆರು ವರ್ಷದ ಬಾಲಕಿ ಮೃತದೇಹ ಪತ್ತೆಯಾಗಿದೆ. ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ ಕಾಮುಕರು ಬಳಿಕ ಆಕೆಯನ್ನು ಕೊಲೆಗೈದು ಆಕೆಯ ಶ್ವಾಸಕೋಶಗಳನ್ನು ಹೊರ ತೆಗೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 

ಕೊನೆಗೂ ಸಂಪತ್‌ರಾಜ್ ಅರೆಸ್ಟ್, ಎಲ್ಲಿ ಅಡಗಿ ಕುಳಿತಿದ್ದರು?

ಉತ್ತರ ಪ್ರದೇಶದ ಕಾನ್ಪುರದ ಘಟಮ್‌ಪುರ್ ಪ್ರದೇಶದಿಂದ ದೀಪಾವಳಿಯಂದು ರಾತ್ರಿ ಈ ಬಾಲಕಿ ನಾಪತ್ತೆಯಾಗಿದ್ದಳು. ಬಾಲಕಿಯ ಶ್ವಾಸಕೋಶಗಳನ್ನು ಮಾಟ ಮಂತ್ರ ಮಾಡುವ ಸಲುವಾಗಿ ತೆಗೆಯಲಾಗಿದೆ ಎನ್ನಲಾಗಿದ್ದು, ಮಗು ಇಲ್ಲದ ಮಹಿಳೆಯನ್ನು ಗರ್ಭಿಣಿಯಾಗಿಸಲು ಹಿಗೆ ಮಾಡಲಾಗಿದೆ ಎಂಬುವುದು ಹಲವರ ಅನುಮಾನವಾಗಿದೆ. 

ಸದ್ಯ ಪೊಲೀಸರು ಈ ದುಷ್ಕೃತ್ಯವೆಸಗಿದ ಅಂಕುಲ್ ಕುರ್ಲಿ(20) ಹಾಗೂ ಬೀರನ್ (31) ಎಂಬ ಇಬ್ಬರು ಆರೋಪಿಗಳನ್ನು ಭಾನುವಾರ ಬಂಧಿಸಿದ್ದಾರೆ. ಬಾಲಕಿಯ ಶ್ವಾಸಕೋಶಗಳನ್ನು ತೆಗೆದಿದ್ದ ಇವರು ಬಳಿಕ ಇದನ್ನು ಮಾಟ ಮಂತ್ರಕ್ಕಾಗಿ ಪರಶುರಾಮ್‌ ಎಂಬವರಿಗೆ ಹಸ್ತಾಂತರಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ಬಲೆಗೆ ಬಿದ್ದ ಸುರೇಶ್-ರಮೇಶ್.. ಪಾಪಣ್ಣನ ಹಪ್ತಾ ಗ್ಯಾಂಗ್!

ಇನ್ನು ಪ್ರಕರಣದ ಮಾಹಿತಿ ಇದ್ದರೂ ಈ ಬಗ್ಗೆ ಬಾಯಿ ಬಿಡದ ಪರಶುರಾಮ್ ಹಾಗೂ ಆತನ ಹೆಂಡತಿಯನ್ನೂ ಸೋಮವಾರ ಬಂಧಿಸಲಾಗಿದೆ. ಆರಂಭದಲ್ಲಿ ಪರಶುರಾಮ್ ಪೊಲೀಸರನ್ನು ಹಾದಿ ತಪ್ಪಿಸುವ ಯತ್ನ ನಡೆಸಿದರಾದರೂ ಬಳಿಕ ಭಯದಿಂದ ತಾವು ಎಸಗಿದ ಕುಕೃತ್ಯದ ಮಾಹಿತಿ ನೀಡಿದ್ದಾರೆ.