Asianet Suvarna News Asianet Suvarna News

ಐಸ್‌ಕ್ರೀಮ್‌ಗಾಗಿ ಕಾಯುತ್ತಿದ್ದ 31 ಶಾಲಾ ಮಕ್ಕಳ ಮೇಲೆ ಹರಿದ ಲಾರಿ, ಮೈಜುಮ್ಮೆನಿಸುವ ವಿಡಿಯೋ !

ಮೈದಾನದಲ್ಲಿ ಮಕ್ಕಳ ಕಾರ್ಯಕ್ರಮ ಆಯೋಜಿಸಲಾಗಿತ್ತು. ಪೋಷಕರು ಸೇರಿದಂತೆ ನೂರಾರು ಮಂದಿ ನೆರೆದಿದ್ದರು. ಫೋಟೋ ಸೆಶನ್ ಮುಗಿದಿತ್ತು. ಐಸ್‌ಕ್ರೀಮ್ ವಿತರಣೆ ಮಾಡಬೇಕಿತ್ತು. ಆದರೆ ಚಾಲಕನ ನಿರ್ಲಕ್ಷ್ಯದಿಂದ ಐಸ್‌ಕ್ರೀಮ್ ತಂದ ಲಾರಿ ಏಕಾಏಕಿ ಚಲಿಸಿದೆ. ಏನು ಅರಿಯದೆ ಕಾಯುತ್ತಿದ್ದ ಪುಟಾಣಿ ಮಕ್ಕಳ ಮೇಲೆ ಲಾರಿ ಹರಿದಿದೆ. ಈ ಘಟನೆಯ ವಿಡಿಯೋ ಮೈ ಜುಮ್ಮೆನಿಸುವಂತಿದೆ.

Ice cream truck rams into school children fest Many injured at Kyrgyzstan ckm
Author
First Published May 3, 2024, 5:50 PM IST

ಕ್ರೈಗಿಸ್ತಾನ್ (ಮೇ.03) ಶಾಲಾ ಮಕ್ಕಳ ಎಪಿಕ್ ಮನಾಸ್ ಕಾರ್ಯಕ್ರಮದಲ್ಲಿ ದುರಂತ ನಡೆದು ಹೋಗಿದೆ. ಇಳಿಜಾರಿನ ಮೈದಾನದಲ್ಲಿ ಶಾಲಾ ಮಕ್ಕಳಿಗೆ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಪುಟಾಣಿ ಮಕ್ಕಳು ಹಾಜರಾಗಿದ್ದರು. ಕಾರ್ಯಕ್ರಮದಲ್ಲಿ ಹಲವು ಸಾಂಸ್ಕೃತಿ ಸೇರಿದಂತೆ ವಿಶೇಷ ಕಾರ್ಯಮಗಳನ್ನು ಆಯೋಜಿಸಲಾಗಿತ್ತು. ಇದೇ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮಕ್ಕಳಿಗೆ ವಿತರಿಸಲು ಐಸ್‌ಕ್ರೀಮ್ ತಂದಿದ್ದ ಲಾರಿ, ಚಾಲಕನ ನಿರ್ಲಕ್ಷ್ಯದಿಂದ ಏಕಾಏಕಿ ಚಲಿಸಿದೆ. ಪರಿಣಾಮ 31 ಮಕ್ಕಳ ಮೇಲೆ ವಾಹನ ಹರಿದಿದ್ದು, ಹಲವರು ಗಂಭೀರವಾಗಿರುವ ಘಟನೆ ಕಜಕಿಸ್ತಾನದಲ್ಲಿ ನಡೆದಿದೆ. ಮೈಜುಮ್ಮೆನಿಸುವ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಆಗಿದೆ.

ಕ್ರೈಗಿಸ್ತಾನ ಇತಿಹಾಸದಲ್ಲಿ ಏಪಿಕ್ ಮನಾಸ್ ಸಾಂಪ್ರದಾಯಿಕ ಕಾವ್ಯ ಅತ್ಯಂತ ಮಹತ್ವದ ಪಾತ್ರವಹಿಸಿದೆ. 19ನೇ ಶತಮಾನದ ಈ ಕಾವ್ಯ ಕ್ರೈಗಿಸ್ತಾನ ಇತಿಹಾಸ, ಸಂಸ್ಕೃತಿ, ಭಾಷಣೆ, ಉಡುಗು ತೊಡುಗೆ, ಆಹಾರ ಸೇರಿದಂತೆ ಹಲವು ವಿಚಾರಗಳ ಕುರಿತು ಬೆಳಕು ಚೆಲ್ಲುತ್ತಿದೆ. ಈ ಏಪಿಕ್ ಮಾನಸ್ ಕುರಿತು ಕಜಕಿಸ್ತಾನದ ಬಹುತೇಕ ಶಾಲಾ ಕಾಲೇಜುಗಳಲ್ಲಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಇದರಂತೆ ಖಾಸಿಗಿ ಶಾಲೆಯಲ್ಲಿ ಏಪಿಕ್ ಮನಾಸ್ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಶಾಲೆಗೆ ಹೋಗುತ್ತಿದ್ದ ಮಕ್ಕಳ ಗುಂಪಿನ ಮೇಲೆ ಹರಿದ ಖಾಸಗಿ ಬಸ್: ಇಬ್ಬರ ಸ್ಥಿತಿ ಗಂಭೀರ

ಪುಟಾಣಿ ಮಕ್ಕಳು ಅತ್ಯಂತ ಸಂಭ್ರಮದಿಂದ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಶಾಲಾ ಸಿಬ್ಬಂದಿ, ಆಡಳಿತ ಮಂಡಳಿ, ಭದ್ರತಾ ಸಿಬ್ಬಂದಿ ಸೇರಿದಂತೆ ಹಲವರು ಈ ಪುಟಾಣಿಗಳ ಜೊತೆ ಪಾಲ್ಗೊಂಡಿದ್ದರು. ಇಳಿಜಾರಿನ ಬಯಲು ಪ್ರದೇಶದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದೇ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಹಂಚಲು ಐಸ್‌ಕ್ರೀಮ್ ಕೂಡ ತರಿಸಲಾಗಿತ್ತು. 

 

 

ಐಸ್ ಕ್ರೀಮ್ ತಂದ ಲಾರಿಯನ್ನು ಮಕ್ಕಳ ಕಾರ್ಯಕ್ರಮದಿಂದ ಕೆಲ ದೂರದಲ್ಲಿ ನಿಲ್ಲಿಸಲಾಗಿತ್ತು. ಆದರೆ ಚಾಲನಕ ಹ್ಯಾಂಡ್ ಬ್ರೇಕ್ ಹಾಕಲು ಮರೆತು ಹೋಗಿದ್ದಾನೆ. ಇಳಿಜಾರು ಪ್ರದೇಶವಾಗಿದ್ದ ಕಾರಣ ಮಿನಿ ಲಾರಿ ಚಾಲಕನಿಲ್ಲದೆ ಏಕಾಏಕಿ ಚಲಿಸಲು ಆರಂಭಿಸಿದೆ. ಒಂದೇ ಸಮನೆ ಮಕ್ಕಳಿರುವ ಮೈದಾನಕ್ಕೆ ನುಗ್ಗಿದ ಲಾರಿ ಇದೇ ಐಸ್‌ಕ್ರೀಮ್‌ಗಾಗಿ ಕಾಯುತ್ತಿದ್ದ ಮಕ್ಕಳ ಮೇಲೆ ಹರಿದಿದೆ. 31 ಮಕ್ಕಳ ಮೇಲೆ ಹರಿದ ಲಾರಿ ಸಂಭ್ರಮದ  ಸ್ಥಳದಲ್ಲಿ ಮಹಾ ದುರ್ಘಟನೆ ನಡೆಸಿ ಬಿಟ್ಟಿದೆ.

ಅಪಹರಣಕಾರರಿಂದ ಮಕ್ಕಳನ್ನು ರಕ್ಷಿಸಲು ಪೋಷಕರು ಹೀಗೆ ಪಾಸ್ವರ್ಡ್ ಬಳಸಿ!

ಈ ಘಟನೆಯಲ್ಲಿ ಒಟ್ಟು31 ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಈ ಪೈಕಿ 18 ಶಾಲಾ ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಇದರಲ್ಲಿ 8 ಶಾಲಾ ಮಕ್ಕಳಿಗೆ ತೀವ್ರ ನಿಘಾಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 

 

Latest Videos
Follow Us:
Download App:
  • android
  • ios