ಚಿಕ್ಕಬಳ್ಳಾಪುರ, (ಸೆ.22): ಜಿಲ್ಲೆಯ ಗೌರಿಬಿದನೂರು: ನಗರ ಠಾಣೆ ಪೊಲೀಸರು ಯಶಸ್ವಿ ಕಾರ್ಯಾಚರಣೆ ನಡೆಸಿ ಆಂಧ್ರ ಮೂಲದ ಇಬ್ಬರು ಕುಖ್ಯಾ ಬೈಕ್ ಕಳ್ಳರಿಬ್ಬರು ಸೇರಿ ನಾಲ್ವರು ಕಳ್ಳರನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ನೆರೆಯ ಆಂಧ್ರಪ್ರದೇಶದ ಹಿಂದೂಪುರದ ನಿವಾಸಿ ಜಬೀವುಲ್ಲಾ ಅಲಿಯ್ ಕಾಲಿಯಾ, ಕೃಷ್ಣಪ್ಪ ಹಾಗು ಬಾಗೇಪಲ್ಲಿ ತಾಲೂಕಿನ ಘಂಟಂವಾರಲ್ಲಿ ನಿವಾಸಿ ಸಿಂಹಾದ್ರಿ, ಗೌರಿಬಿದನೂರು ತಾಲೂಕಿನ ನಗರಗೆರೆ ಹೋಬಳಿ ವೇದಲವಣಿ ನಿವಾಸಿ ನಂದೀಶ್ ಕುಮಾರ್.

ಮಾಲ್ ಇದ್ಯಾ ಪ್ಲೀಸ್ ಎಂದ ದೀಪಿಕಾ, ಭಾರಿ ಮಳೆ ಭೀತಿಯಲ್ಲಿ ಕರ್ನಾಟಕ: ಸೆ.22ರ ಟಾಪ್ 10 ಸುದ್ದಿ!

ಬಂಧಿತರಿಂದ 2.50 ಲಕ್ಷ ಹಣ, 9 ಬೈಕ್‌ಗಳನ್ನ ವಶ ಪಡಿಸಿಕೊಂಡು ಆರೋಪಿಗಳನ್ನ ವಿಚಾರಣೆ ಮುಂದುವರಿಸಿದ್ದಾರೆ.

ಗೌರಿಬಿದೂರು ಪಟ್ಟಣದಲ್ಲಿ ಪದೇ ಪದೇ ಸಾರ್ವಜನಿಕ ಸ್ಥಳಗಳಲ್ಲಿ ದ್ವಿಚಕ್ರ ವಾಹನಗಳು ಕಳವು ಪ್ರಕರಣಗಳು ನಡೆಯುತ್ತಿದ್ದವು. ಬಗ್ಗೆ ಮಾಲೀಕರಿಂದ ಬಂದ ದೂರುಗಳ ಹಿನ್ನಲೆಯಲ್ಲಿ ಎಸ್ಪಿ ಮಿಥುನ್ ಕುಮಾರ್, ಡಿವೈಎಸ್‌ಪಿ ರವಿಶಂಕರ್ ಮಾರ್ಗದರ್ಶನದಲ್ಲಿ  ಗೌರಿಬಿದನೂರು ತಾಲೂಕಿನ ಸಿಪಿಐ ಎಸ್.ರವಿ ನೇತೃತ್ವದಲ್ಲಿ ನಗರ ಠಾಣೆ ಪಿಎಸ್‌ಐ ಚಂದ್ರಕಲಾ ತಂಡ ಕಾರ್ಯಚರಣೆ ನಡೆಸಿದೆ.

ಈ ವೇಳೆ ಆರೋಪಿಗಳು ಬಲೆಗೆ ಬಿದ್ದಿದ್ದಾರೆ. ಕಾರ್ಯಚರಣೆಯಲ್ಲಿ ಶಿವಶಂಕರ್, ಲೋಕೇಶ್, ದೇವರಾಜ, ಸುರೇಶ್ ಮತ್ತಿತರರು ಇದ್ದರು.