ಮೊಬೈಲ್ ಅಂಗಡಿಗೆ ಕನ್ನ/ ಮಾಸ್ಟರ್ ಪ್ಲಾನ್ ಮಾಡಿ 40 ಲಕ್ಷ ರೂ.ಗಳ ಫೋನ್‌ಗಳನ್ನು ಕದ್ದು ಪರಾರಿಯಾಗಿದ್ದರು/ ಕಾರಿನ ನಂಬರ್ ಕೊಟ್ಟ ಮಾಹಿತಿ ಆಧಾರದಲ್ಲಿ ಸಿಕ್ಕಿಬಿದ್ದರು/
ಮುಂಬೈ(ಡಿ. 09) ಮೊಬೈಲ್ ಗಳನ್ನು ಹೊತ್ತು ಸಾಗುತ್ತಿದ್ದ ಟ್ರಕ್ ಗಳನ್ನೇ ಅಪಹರಣ ಮಾಡಿದ್ದು ತಮಿಣುನಾಡಿನಿಂದ ಸುದ್ದಿಯಾಗಿತ್ತು. ಮೊಬೈಲ್ ಅಂಗಡಿಗೆ ಕನ್ನ ಕೊರೆದು ನುಗ್ಗಿದ ಚಾಲಾಕಿಗಳು 40 ಲಕ್ಷ ರೂ.ಗಳ ಫೋನ್‌ಗಳನ್ನು ಕದ್ದು ಪರಾರಿಯಾಗಿದ್ದರು. ಕಾರ್ಯಾಚರಣೆ ನಡೆಸಿದ ಮುಂಬೈ ಪೊಲೀಸರು ಐವರನ್ನು ವ್ಯಕ್ತಿಗಳನ್ನು ಮುಂಬೈನಲ್ಲಿ ಬಂಧಿಸಿದ್ದಾರೆ.
ಆರೋಪಿಗಳು ಸೈಬರಾಬಾದ್‌ನ ಅಂಗಡಿಯೊಂದಕ್ಕೆ ನುಗ್ಗಿ ದರೋಡೆ ಮಾಡಿದ್ದರು . ಬಂಧಿತರಿಂದ ಪೊಲೀಸರು 38 ಲಕ್ಷ ರೂ.ಗಳ ಮೊಬೈಲ್ ಫೋನ್ ವಶಕ್ಕೆ ಪಡೆದುಕೊಂಡಿದ್ದಾರೆ.
ಹೊರಗೆ ಸ್ಪಾ.. ಒಳಗೆ.. ರಾಶಿ ರಾಶಿ ವಯಾಗ್ರ.. ಮಹಿಳೆಯರೆ ಕಿಂಗ್ ಪಿನ್!
ಬಂಧಿತರನ್ನು ಫರ್ಹಾನ್ ಅಲಿ ಶೇಖ್, ಮೊಹಮ್ಮದ್ ತಬ್ರೆಜ್ ಶೇಖ್, ರಾಜು ಅಮೆಕರ್, ಮೊಹಮ್ಮದ್ ಶೇಖ್ ಅಲಿಯಾಸ್ ದಾಸ್ ಬಂಗೂರ್ ಮತ್ತು ರಶೀದ್ ಶೇಖ್ ಎಂದು ಗುರುತಿಸಲಾಗಿದೆ. 103 ಹೊಸ ಮೊಬೈಲ್ ಫೋನ್ ಬಾಕ್ಸ್ ಗಳನ್ನು ವಶಕ್ಕೆ ಪಡೆಯಲಾಗಿದೆ.
ನವೆಂಬರ್ 13 ರಂದು ಆರೋಪಿಗಳು ಸೈಬರಾಬಾದ್‌ನ ಮದಿನಗುಡ ಮುಖ್ಯ ರಸ್ತೆಯಲ್ಲಿರುವ ರಿಲಯನ್ಸ್ ಡಿಜಿಟಲ್ ಮಾಲ್ ಗೆ ಕನ್ನ ಹಾಕಿದ್ದರು. 40 ಲಕ್ಷ ರೂ.ಗಳ ಮೌಲ್ಯದ 119 ಮೊಬೈಲ್ ಫೋನ್‌ಗಳನ್ನು ಕಳ್ಳತನ ಮಾಡಿದ್ದರು. ಈ ಬಗ್ಗೆ ಮಾಲೀಕ ಮಿಯಾಪುರ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದರು.
ನಂತರ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಆರೋಪಿಗಳು ಬಳಸಿದ ಇನ್ನೋವಾ ಕಾರಿನ ನೋಂದಣಿ ಸಂಖ್ಯೆಯನ್ನು ಸಂಗ್ರಹಿಸಲಾಗಿದೆ. ಮಹಾರಾಷ್ಟ್ರ ಪಾಸಿಂಗ್ ಕಾರು ಆಗಿದ್ದರಿಂದ ಸುಲಭವಾಗಿ ಮಾಹಿತಿ ಪತ್ತೆ ಮಾಡಿ ಆರೋಪಿಗಳನ್ನು ಬಂಧಿಸಲಾಗಿದೆ.
ಮುಂಬೈ ಪೊಲೀಸರು ಕಾರಿನ ಮಾಲೀಕರನ್ನು ವಿಲೇ ಪಾರ್ಲೆ ಎಂಬಾತನನ್ನು ಮೊದಲು ಪತ್ತೆ ಮಾಡಿದ್ದಾರೆ. ಚಾಲಕ ಫರ್ಹಾನ್ ಶೇಖ್ ಕೆಲವು ಪ್ರಯಾಣಿಕರನ್ನು ಸೂರತ್‌ಗೆ ಕರೆದೊಯ್ದಿದ್ದಾನೆ ಎಂದು ಮಾಲೀಕರು ಪೊಲೀಸರಿಗೆ ತಿಳಿಸಿದ್ದಾರೆ. ಆದರೆ, ಕಾಲ್ ಡಿಟೇಲ್ ರೆಕಾರ್ಡ್ಸ್ (ಸಿಡಿಆರ್) ಯನ್ನು ನೋಡಿದಾಗ ಚಾಲಕ ಸೈಬರಾಬಾದ್‌ನಲ್ಲಿದ್ದಾನೆ, ಸೂರತ್ ಗೆ ಹೋಗಿಲ್ಲ ಎಂಬುದು ಗೊತ್ತಾಗಿದೆ ನಂತರ ಪೊಲೀಸರು ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದಾಗ ಸತ್ಯ ಹೊರಕ್ಕೆ ಬಂದಿದೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Dec 9, 2020, 4:58 PM IST