ಮೃತ ಮಹಿಳೆ ಹೆಸರು ಸೇರಿದಂತೆ ಪೂರ್ವಪರ ಮಾಹಿತಿ ಸಿಕ್ಕಿದೆ. ಮೃತಳು ಕಲಾಸಿಪಾಳ್ಯದ ನಿವಾಸಿಯಾಗಿದ್ದು, ವಿವಾಹಿತೆ ಆಗಿದ್ದಾಳೆ. ಕೌಟುಂಬಿಕ ಕಾರಣಕ್ಕೆ ಪತಿಯಿಂದ ದೂರವಾಗಿ ತನ್ನ ಮಕ್ಕಳ ಜತೆ ಆಕೆ ನೆಲೆಸಿದ್ದಳು. ಎರಡು ದಿನಗಳ ಹಿಂದೆ ಗೆಳೆಯನ ಜತೆ ಹೊರ ಬಂದಿದ್ದ ಆಕೆ ಕೊಲೆಯಾಗಿದ್ದಾಳೆ. 

ಬೆಂಗಳೂರು(ಮಾ.16): ಇತ್ತೀಚೆಗೆ ಬೈಯಪ್ಪನಹಳ್ಳಿ ರೈಲ್ವೆ ನಿಲ್ದಾಣದಲ್ಲಿ ಪತ್ತೆಯಾಗಿದ್ದ ಅಪರಿಚಿತ ಮಹಿಳೆ ನಿಗೂಢ ಕೊಲೆ ಪ್ರಕರಣ ಬೇಧಿಸುವಲ್ಲಿ ರೈಲ್ವೆ ಪೊಲೀಸರು ಯಶಸ್ಸು ಕಂಡಿದ್ದಾರೆ. ಈ ಸಂಬಂಧ ಮೃತಳ ಸ್ನೇಹಿತ ಸೇರಿದಂತೆ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಗುರುವಾರ ನ್ಯಾಯಾಲಯಕ್ಕೆ ಹಾಜರುಪಡಿಸಿ ಬಂಧನ ಪ್ರಕ್ರಿಯೆಗೆ ಒಳಪಡಿಸಲಿದ್ದಾರೆ ಎನ್ನಲಾಗಿದೆ.

ಮೃತ ಮಹಿಳೆ ಹೆಸರು ಸೇರಿದಂತೆ ಪೂರ್ವಪರ ಮಾಹಿತಿ ಸಿಕ್ಕಿದೆ. ಮೃತಳು ಕಲಾಸಿಪಾಳ್ಯದ ನಿವಾಸಿಯಾಗಿದ್ದು, ವಿವಾಹಿತೆ ಆಗಿದ್ದಾಳೆ. ಕೌಟುಂಬಿಕ ಕಾರಣಕ್ಕೆ ಪತಿಯಿಂದ ದೂರವಾಗಿ ತನ್ನ ಮಕ್ಕಳ ಜತೆ ಆಕೆ ನೆಲೆಸಿದ್ದಳು. ಎರಡು ದಿನಗಳ ಹಿಂದೆ ಗೆಳೆಯನ ಜತೆ ಹೊರ ಬಂದಿದ್ದ ಆಕೆ ಕೊಲೆಯಾಗಿದ್ದಾಳೆ ಎಂದು ಮೂಲಗಳು ಹೇಳಿವೆ.

ಬೆಂಗಳೂರು: ರೈಲು ನಿಲ್ದಾಣ ಬಳಿ ಡ್ರಮ್‌ನಲ್ಲಿ ಮಹಿಳೆ ಶವ ಪತ್ತೆ, ತನಿಖೆಗೆ 3 ತಂಡ

ಈ ಹತ್ಯೆಗೆ ನಿಖರ ಕಾರಣ ಗೊತ್ತಾಗಿಲ್ಲ. ವೈಯಕ್ತಿಕ ಕಾರಣಕ್ಕೆ ಸ್ನೇಹಿತೆಯನ್ನು ಕೊಂದು ಬಳಿಕ ಮೃತದೇಹವನ್ನು ಡ್ರಮ್‌ನಲ್ಲಿ ತುಂಬಿ ಬೈಯಪ್ಪನಹಳ್ಳಿ ರೈಲ್ವೆ ನಿಲ್ದಾಣ ಬಳಿ ಬಿಸಾಡಿ ಮೃತಳ ಸ್ನೇಹಿತ ಪರಾರಿಯಾಗಿದ್ದ. ಸಿಸಿಟಿವಿ ಕ್ಯಾಮೆರಾ ಸೇರಿದಂತೆ ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಗಳನ್ನು ಪತ್ತೆ ಹಚ್ಚಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೂರು ದಿನಗಳ ಹಿಂದೆ ಬೈಯಪ್ಪನಹಳ್ಳಿ ರೈಲ್ವೆ ನಿಲ್ದಾಣದ ಬಳಿ ಡ್ರಮ್‌ನಲ್ಲಿ ಅಪರಿಚಿತ ಮಹಿಳೆ ಮೃತದೇಹ ಪತ್ತೆಯಾಗಿ ಆತಂಕ ಸೃಷ್ಟಿಸಿತ್ತು.