ದುಬೈನಲ್ಲಿ ವ್ಯಾಪಾರ ಮಾಡಲು ಮುಂದಾದ ಸ್ನೇಹಿತನಿಗೆ ಲಕ್ಷ ಲಕ್ಷ ದೋಖಾ: ವಂಚಕರ ಬಂಧನಕ್ಕೆ ಲುಕೌಟ್ ನೋಟಿಸ್
ದುಡಿಯುವುದಕ್ಕಾಗಿ ದುಬೈಗೆ ಹೋದ ವ್ಯಕ್ತಿ ಆರು ತಿಂಗಳ ಸ್ನೇಹಿತರನ್ನು ನಂಬಿ ವಂಚನೆಗೆ ಒಳಗಾಗಿ ಲಕ್ಷಾಂತರ ರೂಪಾಯಿ ಕಳೆದುಕೊಂಡ ಪ್ರಕರಣ ಕೊಡಗು ಜಿಲ್ಲೆಯ ಕುಂಜಿಲ ಗ್ರಾಮದಲ್ಲಿ ನಡೆದಿದೆ. ಮಡಿಕೇರಿ ತಾಲ್ಲೂಕಿನ ಕುಂಜಿಲ ಗ್ರಾಮದ ನಾಸೀರ್ ಮೋಸಕ್ಕೆ ಒಳಗಾದ ವ್ಯಕ್ತಿ.
ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಸೆ.21): ದುಡಿಯುವುದಕ್ಕಾಗಿ ದುಬೈಗೆ ಹೋದ ವ್ಯಕ್ತಿ ಆರು ತಿಂಗಳ ಸ್ನೇಹಿತರನ್ನು ನಂಬಿ ವಂಚನೆಗೆ ಒಳಗಾಗಿ ಲಕ್ಷಾಂತರ ರೂಪಾಯಿ ಕಳೆದುಕೊಂಡ ಪ್ರಕರಣ ಕೊಡಗು ಜಿಲ್ಲೆಯ ಕುಂಜಿಲ ಗ್ರಾಮದಲ್ಲಿ ನಡೆದಿದೆ. ಮಡಿಕೇರಿ ತಾಲ್ಲೂಕಿನ ಕುಂಜಿಲ ಗ್ರಾಮದ ನಾಸೀರ್ ಮೋಸಕ್ಕೆ ಒಳಗಾದ ವ್ಯಕ್ತಿ. ಕುಂಜಿಲ ಗ್ರಾಮದ ನಾಸೀರ್ ಒಂದು ವರ್ಷದ ಹಿಂದೆ ದುಬೈಗೆ ಹೋಗಿದ್ದರು. ಆರು ತಿಂಗಳ ಕಾಲ ಅಲ್ಲಿಯೇ ಇದ್ದ ಅವರು ಬಳಿಕ ದುಬೈನಲ್ಲೇ ಏನಾದರೂ ವ್ಯಾಪಾರ ಮಾಡುವ ಚಿಂತನೆ ನಡೆಸಿದ್ದರು. ಆ ವೇಳೆಗೆ ಆರು ತಿಂಗಳ ಹಿಂದೆಯೇ ರಾಜ್ಯದ ಉಡುಪಿ ಜಿಲ್ಲೆಯ ಸರ್ಕಾರಿ ಗುಡ್ಡೆ ಎಂಬಲ್ಲಿನ ಅಕ್ಬರ್, ಸಲೀಂ ಮತ್ತು ಶಮೀರ್ ಎಂಬ ಮೂವರು ಸಹೋದರರು ನಾಸೀರ್ ಅವರಿಗೆ ಆಪ್ತ ಸ್ನೇಹಿತರಾಗಿದ್ದರು.
ಇವರೆಲ್ಲರೂ ಸೇರಿ ದುಬೈನಲ್ಲೇ ಸೂಪರ್ ಮಾರ್ಕೆಟ್ ಆರಂಭಿಸಲು ಚಿಂತಿಸಿದ್ದಾರೆ. ಅಷ್ಟರಲ್ಲಿ ನಾಸೀರ್ ಅವರಿಗೆ ಆರೋಗ್ಯದ ಸಮಸ್ಯೆ ಎದುರಾಗಿದ್ದರಿಂದ ತಮ್ಮ ಕೈಯಲ್ಲಿದ್ದ ಬರೋ 50 ಸಾವಿರ ದಿರಂ ಅನ್ನು ತಮ್ಮ ಸ್ನೇಹಿತರಿಗೆ ಕೊಟ್ಟು ಬಂದಿದ್ದರಂತೆ. 50 ಸಾವಿರ ದಿರಂ ಅಂದರೆ ಅದು ಭಾರತದ ರೂಪಾಯಿಯಲ್ಲಿ ಹೇಳುವುದಾದರೆ ಬರೋಬ್ಬರಿ 11. 5 ಲಕ್ಷ ರೂಪಾಯಿ. ಇಂಡಿಯಾಕ್ಕೆ ಬಂದ ಕೆಲವೇ ದಿನಗಳಲ್ಲಿ ನಾಸೀರ್ ಗೆ ಈ ಸಹೋದರು ಕರೆ ಮಾಡಿ ಇಲ್ಲಿ ಸೂಪರ್ ಮಾರ್ಕೆಟ್ ಒಂದು ಸೇಲಿಗೆ ಇದೆ. ಅದರ ಬೆಲೆ 1 ಕೋಟಿ ರೂಪಾಯಿ ಇದ್ದು ನಾಲ್ವರು ಸೇರಿ ತಲಾ 25 ಲಕ್ಷದಂತೆ ಹಾಕಿ ಇದನ್ನು ಖರೀದಿಸೋಣ.
ಬೆಂವಿವಿಯಲ್ಲಿ ಕ್ಯಾಂಪಸ್ ಕವಿಗೋಷ್ಠಿ: ಕಾವ್ಯ ಆಂತರ್ಯದ ಅಳಲಿನ ಗಟ್ಟಿ ಭಾಷೆ ಎಂದ ಕೆ.ಷರೀಫಾ
ನೀನು ಇನ್ನು 14 ಲಕ್ಷ ಹಾಕು ಎಂದು ಕರೆ ಮಾಡಿದ್ದರಂತೆ. ದುಬೈನಲ್ಲಿ ವ್ಯಾಪಾರ ಮಾಡುವುದಕ್ಕೆ ಚಿಂತಿಸುತ್ತಿದ್ದ ನಾಸೀರ್ ಕೂಡಲೇ ತಮ್ಮ ಹೇಗೋ ಹಣವನ್ನು ಹೊಂದಿಸಿ ತಮ್ಮ ಬ್ಯಾಂಕ್ ಖಾತೆ ಹಾಗೂ ಸ್ನೇಹಿತನ ಖಾತೆಗಳಿಂದ ದುಬೈನಲ್ಲಿ ಇರುವ ಸ್ನೇಹಿತರ ಖಾತೆಗೆ ವರ್ಗಾವಣೆ ಮಾಡಿದ್ದಾರೆ. ನಾಸೀರ್ ಹಣವನ್ನು ಹಾಕುತ್ತಿದ್ದಂತೆ ಮೂವರು ದುಬೈನಲ್ಲಿ ವಾಸವಿದ್ದ ಮನೆಯನ್ನು ಖಾಲಿ ಮಾಡಿ ಅಲ್ಲಿಂದ ಎಸ್ಕೇಪ್ ಆಗಿದ್ದಾರೆ. ಆದರೆ ಈ ವಿಷಯ ನಾಸೀರ್ ಅವರಿಗೆ ಗೊತ್ತೇ ಆಗಿಲ್ಲ. ಆರೋಗ್ಯ ಸರಿಹೋಗಿದೆ ಎಂದು ದುಬೈಗೆ ಹೋಗಿ ಬ್ಯುಸಿನೆಸ್ ಪಾರ್ಟನರ್ ಆಗಬೇಕಾಗಿದ್ದ ಮೂವರಿಗೆ ಕರೆ ಮಾಡಿದರೆ ಅವರ ಪೋನ್ ಕನೆಕ್ಟ್ ಆಗಿಲ್ಲ.
ಸಾಕಷ್ಟು ಪ್ರಯತ್ನಿಸಿದ ಬಳಿಕ ತಮಗೆ ಮೋಸವಾಗಿದೆ ಎನ್ನುವುದು ನಾಸೀರ್ ಅವರಿಗೆ ಗೊತ್ತಾಗಿದೆ. ಅಲ್ಲಿಂದ ಭಾರತಕ್ಕೆ ತಿರುಗಿ ಬಂದ ನಾಸೀರ್ ಉಡುಪಿ ಜಿಲ್ಲೆಯ ಸರ್ಕಾರಿ ಗುಡ್ಡೆಯಲ್ಲಿರುವ ಅಕ್ಬರ್, ಸಲೀಂ ಮತ್ತು ಶಮೀರ್ ಈ ಮೂವರು ಸಹೋದರರ ಮನೆಯನ್ನು ಹುಡುಕಿಕೊಂಡು ಹೋದಾಗ ಇವರು ದುಬೈನಿಂದ ಬಾಂಗ್ಲಾ ದೇಶಕ್ಕೆ ಎಸ್ಕೇಪ್ ಆಗಿರುವುದು ಗೊತ್ತಾಗಿದೆ. ತಮ್ಮ ಹಣವನ್ನು ವಾಪಸ್ ಹಿಂದಿರುಗಿಸುವಂತೆ ಎಷ್ಟೇ ಕೇಳಿದರೂ ಹಣವನ್ನು ವಾಪಸ್ ಮಾಡಿಲ್ಲ. ಕೇಳಿ ಕೇಳಿ ಸುಸ್ತಾದ ನಾಸೀರ್ ಮಡಿಕೇರಿ ತಾಲ್ಲೂಕಿನ ನಾಪೋಕ್ಲು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ನಾನು ಯಾರೊಂದಿಗೂ ರಾಜಿ ಮಾಡಿಕೊಂಡಿಲ್ಲ, ಭ್ರಷ್ಟರ ವಿರುದ್ಧ ಹೋರಾಡುವೆ: ವಕೀಲ ದೇವರಾಜೇಗೌಡ
ಸದ್ಯ ಮೂವರ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದೆ. ಅಲ್ಲದೆ ದೇಶಬಿಟ್ಟು ಬೇರೆಡೆಗೆ ಹೋಗದಂತೆ ತಡೆಯಲು ಮೂವರ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿ ಮಾಡಲಾಗಿದೆ. ಆದರೆ ಈ ಖದೀಮರು ಇಂಡಿಯಾದಿಂದ ನೇಪಾಳಕ್ಕೆ ತೆರಳಿ ಅಲ್ಲಿಂದ ಬಾಂಗ್ಲಾಕ್ಕೆ ಹಾರಿದ್ದಾರೆ ಎನ್ನಲಾಗುತ್ತಿದೆ. ಒಟ್ಟಿನಲ್ಲಿ ದುಬೈನಲ್ಲಿ ವ್ಯಾಪಾರ ಮಾಡಿ ಸಕತ್ತಾಗಿ ದುಡಿಯಬೇಕು ಎಂದು ಯಾರನೋ ನಂಬಿ ಹೋಗಿದ್ದ ನಾಸೀರ್ ಲಕ್ಷ ಲಕ್ಷ ಕಳೆದುಕೊಂಡು ಬಾಯಿ ಬಡಿಕೊಳ್ಳುವಂತೆ ಆಗಿದೆ.