ಕೊಲ್ಲೂರು ಮಠದ ಸ್ವಾಮೀಜಿ ಹೆಸರಿನಲ್ಲಿ ವಂಚನೆ, ಲಕ್ಷಗಟ್ಟಲೆ ಕಿತ್ತ ಕಿರಾತಕರು!
ಖಾವಿ ಕಳ್ಳರ ಕಣ್ಣಾಮುಚ್ಚಾಲೆ ಆಟಕ್ಕೆ ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಸಾಕ್ಷಿ ಆಗಿದೆ. ಕೊಲ್ಲೂರು ಮಠದ ಸ್ವಾಮೀಜಿ ಹೆಸರಿನಲ್ಲಿ ವಂಚನೆ ನಡೆದಿದೆ.
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ಮೇ.6) : ಡಿಸೆಂಬರ್ ಗೆ 100 ಮುಖಬೆಲೆಯ ನೋಟ್ ಬ್ಯಾನ್ ಆಗುತ್ತೆ ಅಂದ್ರು. ನಮ್ಮ ಮಠಕ್ಕೆ ರಾಜಕಾರಗಳಿಂದ 350 ಕೋಟಿ ಫಂಡ್ ಬಂದಿದೆ ಅಂತ ಹೇಳಿ. ಮೂರು ಲಕ್ಷ ಕೊಟ್ರೆ ಹತ್ತು ಲಕ್ಷ ಕೊಡ್ತೀವಿ, ಆರು ತಿಂಗಳಿಗೊಮ್ಮೆ 50 ಸಾವಿರ ಕೊಟ್ರೆ ಸಾಕೆಂದು ಖಾವಿ ತೊಟ್ಟು ಗುತ್ತಿಗೆದಾರರನಿಗೆ ಯಾಮಾರಿಸಿದ್ರು. ಪಾಪ ಗುತ್ತಿಗೆದಾರ ನಂಬಿ ಅಲ್ಲಿ-ಇಲ್ಲಿ ಹೊಂದಿಸಿ 500 ಮುಖಬೆಲೆಯ ಮೂರು ಲಕ್ಷ ತಂದೇಬಿಟ್ಟ. ಮೂರು ಲಕ್ಷ ಕೊಟ್ಟ-ಹತ್ತು ಲಕ್ಷ ಇಸ್ಕೊಂಡೇಬಿಟ್ಟ. ಆಮೇಲೆ, ಕೊಟ್ಟೋನ್ ಕೋಡಂಗಿ, ಇಸ್ಕೊಂಡೋನ್ ವೀರಭದ್ರ ಅನ್ನಂಗಾಯ್ತು.
ಗುತ್ತಿಗೆದಾರ ವಿಜಯ್ ಎನ್ನುವರಿಗೆ 3 ಲಕ್ಷ ವಂಚನೆ: ಖಾವಿ ಕಳ್ಳರ ಕಣ್ಣಾಮುಚ್ಚಾಲೆ ಆಟಕ್ಕೆ ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಸಾಕ್ಷಿ ಆಗಿದೆ. ಮೋಸ ಹೋದವರು ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಹಿರೀಸಾವೆ ಗ್ರಾಮದ ಕೆಇಬಿ ಕಂಟ್ರಾಕ್ಟರ್ ವಿಜಯ್ ಎಂಬುವರು. ಕಲ್ಲೂರು ಮಠ ಸ್ವಾಮೀಜಿ ಎಂದು ನಂಬಿಸಿ ಕೆಇಬಿ ಗುತ್ತಿಗೆದಾರನನ್ನು ಯಾಮಾರಿಸಿ 3 ಲಕ್ಷ ವಂಚಿಸಿದ ಘಟನೆ ನಡೆದಿದ್ದು, ಬಾಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಕೆ.ಇ.ಬಿ ಕಂಟ್ರಕ್ಟರ್ ವಿಜಯ್ ಎಂಬಾತನಿಗೆ ಅಪರಿಚಿತ ವ್ಯಕ್ತಿಗಳು ಕರೆ ಮಾಡಿ ಮಠದಿಂದ ಲೋನ್ ಕೊಡಿಸುತ್ತೇವೆ, ಅಗತ್ಯವಿದ್ದರೇ ಲೋನ್ ಪಡೆಯ ಬಹುದು ಎಂದಿದ್ದರು. ಇದನ್ನ ಸತ್ಯ ಎಂದು ನಂಬಿದ್ದ ವಿಜಯಕುಮಾರ್ ನನಗೂ ಸಂಕಷ್ಟವಿದೆ ಹತ್ತು ಲಕ್ಷ ಲೋನ್ ನೀಡಿ ಎಂದು ಕೇಳಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡ ಕಿರಾತಕರ ಗ್ಯಾಂಗ್ ಪೇಪರ್ ಕಾಗದಗಳನ್ನು ಮರದಬಾಕ್ಸ್ ನಲ್ಲಿ ತುಂಬಿ ಹಣ ಎಂದು ನಂಬಿಸಿ ಯಾಮಾರಿಸಿದ್ದಾರೆ.
ಚಾರ್ಮಾಡಿ ಘಾಟ್ ನಲ್ಲಿ ಕಾರು ಅಪಘಾತ, ಹಣ ಚಿನ್ನ ದೋಚಿದ ದರೋಡೆಕೋರರು!
ಮರದ ಬಾಕ್ಸ್ ನಲ್ಲಿ ಪೇಪರ್ ಕಾಗದವಿಟ್ಟು ಮೋಸ: ಖದೀಮರು ಶಿವಮೊಗ್ಗದಲ್ಲಿ ಕಾವಿ ಬಟ್ಟೆ ಧರಿಸಿ ವಿಜಯಕುಮಾರ್'ನನ್ನು ಭೇಟಿಯಾಗಿ ನಮ್ಮ ಮಠಕ್ಕೆ ರಾಜಕೀಯ ವ್ಯಕ್ತಿಗಳಿಂದ 350ಕೋಟಿ ಫಂಡ್ ಬಂದಿದೆ, ಅದರಲ್ಲಿ ನೂರು ರೂಪಾಯಿ ನೋಟುಗಳು ಹೆಚ್ಚಿದೆ. ಡಿಸೆಂಬರ್ ಅಂತ್ಯಕ್ಕೆ ನೂರು ರೂಪಾಯಿ ನೋಟ್ ಬ್ಯಾನ್ ಆಗುತ್ತದೆ. ನೀವು ನೂರು ರೂ ನೋಟ್ ಪಡೆದುಕೊಳ್ಳಿ, ನಿಮಗೆ ಮೂರು ಲಕ್ಷ ಹಣವನ್ನು ಕ್ಯಾಶ್ ನೀಡಬೇಕು, ಉಳಿದ ಏಳು ಲಕ್ಷ ಹಣವನ್ನು ಆರು ತಿಂಗಳಿಗೊಮ್ಮೆ ಐವತ್ತು ಸಾವಿರದಂತೆ ನೀಡಬೇಕು ಎಂದಿದ್ದರು. ಇದಕ್ಕೆ ಒಪ್ಪಿದ ವಿಜಯ್ ಮೂರು ಲಕ್ಷ ಹಣ ಹೊಂದಿಸಿದ್ದರು.
ಖದೀಮರು ಬಾಳೆಹೊನ್ನೂರಿನ ರಂಭಾಪುರಿ ಮಠಕ್ಕೆ ಬನ್ನಿ ಎಂದು ಹೇಳಿದ್ದರಿಂದ ವಿಜಯ್ ಬಾಳೆಹೊನ್ನೂರಿಗೆ ಬಂದು ಅವರಿಗೆ ಕರೆ ಮಾಡಿದರು, ಮಠದ ಸಮೀಪ ವ್ಯವಹಾರ ಮುಗಿಸಿದ ಇವರು ಪೇಪರ್ ತುಂಬಿದ್ದ ಮರದ ಬಾಕ್ಸ್ ನೀಡಿ ಹಣ ಎಣಿಸಿಕೊಳ್ಳಿ ಎಂದು ಹೊರಟು ಹೋಗಿದ್ದಾರೆ. ವಿಜಯ್ ಬಾಕ್ಸ್ ತೆರೆದು ನೋಡಿದರೇ 1800ರೂ ಹಣ ಇದ್ದದ್ದು ಬಿಟ್ಟರೇ ಮತ್ತೆ ಇದ್ದದ್ದು ಪೇಪರ್ ಮಾತ್ರ. ಇದನ್ನು ಕಂಡು ವಿಜಯ್ ಹಣ ನೀಡಿದವರಿಗೆ ಕಾಲ್ ಮಾಡಿದ್ದಾರೆ. ಆಗ ಆ ಕಳ್ಳರು ಮಠದ ಒಳ ಭಾಗಕ್ಕೆ ಬನ್ನಿ ಎಂದು ಹೇಳಿ ಎಸ್ಕೇಪ್ ಆಗಿದ್ದಾರೆ. ವಿಜಯ್ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
MTBಯಿಂದ ಅಧಿಕಾರ ದುರ್ಬಳಕೆ ಶರತ್ ಬಚ್ಚೇಗೌಡ ಬೆಂಬಲಿಗರ ಆರೋಪ
ಸಿಸಿಟಿವಿ ವಿಡಿಯೋ ಬಿಟ್ಟು ಬೇರೆನೂ ಸುಳಿಯುವು ಇಲ್ಲ: ಒಟ್ಟಾರೆ, ಸದ್ಯಕ್ಕೆ ಪೊಳೀಸರಿಗೆ ಒಂದು ಸಿಸಿಟಿವಿ ವಿಡಿಯೋ ಬಿಟ್ಟು ಬೇರೆನೂ ಸಿಕ್ಕಿಲ್ಲ. ವಿಜಯ್ ಜೊತೆ ಮಾತನಾಡಿದ ಎರಡು ಮೊಬೈಲ್ಗಳು ಸ್ವಿಚ್ ಆಫ್ ಆಗಿವೆ. ಆ ನಂಬರ್ಗಳು ಯಾರದ್ದೋ ಹೆಸರಿನಲ್ಲಿವೆ. ಆದ್ರೆ, ಯಾರೋ ಯಾವ್ದೆ ರೀತಿಯ ದಾಖಲೆಗಳ ವ್ಯವಹಾರವಿಲ್ಲದೆ ಮೊಬೈಲ್ನಲ್ಲಿ ಮಾತನಾಡಿ ಪುಕ್ಕಟೆಯಾಗಿ ಹಣ ನೀಡ್ತಾರೆ ಅಂದ್ರೆ ಒಮ್ಮೆ ಯೋಚಿಸಬೇಕಲ್ವಾ. ಇಲ್ಲದಿದ್ರೆ ಈ ರೀತಿ ಮೋಸ ಹೋಗೋ ಸಾಧ್ಯತೆಯೇ ಹೆಚ್ಚು. ಮೋಸ ಹೋಗೋರ್ ಇರೋವರ್ಗೂ ಮಾಡೋರು ಇದ್ದೇ ಇರ್ತಾರೆ. ಎನ್ ಮಾಡೋಕಾಗುತ್ತೆ. ಜನ ಬುದ್ಧಿ ಕಲೀಬೇಕಷ್ಟೆ.ಸಿಸಿಟಿವಿ ದ್ರಶ್ಯವಿಟ್ಟುಕೊಂಡು ಪೊಲೀಸ್ರು ತನಿಖೆ ಆರಂಭಿಸಿದ್ದಾರೆ.