ಜೇವರ್ಗಿ(ಸೆ.16):ಕಳೆದ 15 ದಿನಗಳಲ್ಲಿ 4 ಅಪರಿಚಿತ ಶವ ಪತ್ತೆಯಾಗಿದ್ದು, ಮೂರು ಶವ ಜೇವರ್ಗಿ ತಾಲೂಕಿನ ಭೀಮಾತೀರದಲ್ಲಿ ಪತ್ತೆಯಾದರೆ, ಒಂದು ಶವ ಕೃಷ್ಣಾ ಕಾಲುವೆಯಲ್ಲಿ ಪತ್ತೆಯಾಗಿದೆ. ಹೀಗಾಗಿ ಭೀಮಾತೀರದ ಗ್ರಾಮಗಳಲ್ಲಿ ಭಯ ಆವರಿಸಿದೆ.

10 ದಿನಗಳ ಹಿಂದೆ ನರಿಬೋಳ ಗ್ರಾಮದ ಭೀಮಾ ನದಿಯಲ್ಲಿ ಹಗ್ಗ ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು. ನಂತರ ರಾಜವಾಳ ಗ್ರಾಮದ ಭೀಮಾನದಿಯಲ್ಲಿ ಮತ್ತೊಂದು ಶವ ಪತ್ತೆಯಾಗಿದೆ. ಈಗ ತಾಲೂಕಿನ ನೆಲೋಗಿ ಪೊಲೀಸ್‌ ಠಾಣೆಯ ವ್ಯಾಪ್ತಿಯ ಬಳ್ಳುಂಡಗಿ ಸೀಮಾಂತರದ ಭೀಮಾ ನದಿಯಲ್ಲಿ ಶವ ಮಂಗಳವಾರ ಪತ್ತೆಯಾಗಿದೆ. ಶವದ ಗುರುತು ವಿಳಾಸ ಪತ್ತೆಯಾಗಿಲ್ಲ. ಘಟನಾ ಸ್ಥಳಕ್ಕೆ ನೆಲೋಗಿ ಠಾಣೆಯ ಸಬ್‌ ಇನ್ಸಪೆಕ್ಟರ್‌ ಮಲ್ಲಣ್ಣ ಯಲಗೋಡ ಹಾಗೂ ಸಿಬ್ಬಂದಿ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.

ಗಾಂಜಾ ಮಾರಾಟ: ಭಟ್ಕಳ ಜಾಲಿ ಬೀಚ್‌ನಲ್ಲಿ ನಾಲ್ವರ ಬಂಧನ

ಯಡ್ರಾಮಿ ತಾಲೂಕಿನ ಆಲೂರ ಗ್ರಾಮದ ಕೃಷ್ಣಾ ಭಾಗ್ಯ ಜಲ ನಿಗಮದ ಜೇವರ್ಗಿ ಶಾಖಾ ಕಾಲುವೆಯಲ್ಲಿ 35ರಿಂದ 40 ವರ್ಷದ ಅಪರಿಚಿತ ಶವ ಪತ್ತೆಯಾಗಿದೆ. ಒಂದು ವಾರದ ಹಿಂದೆ ಮೃತಪಟ್ಟಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಘಟನಾ ಸ್ಥಳಕ್ಕೆ ಯಡ್ರಾಮಿ ಠಾಣೆಯ ಸಬ್‌ ಇನ್ಸಪೆಕ್ಟರ್‌ ಗಜಾನಂದ ಬಿರಾದಾರ ಹಾಗೂ ಸಿಬ್ಬಂದಿ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.