Asianet Suvarna News Asianet Suvarna News

ಅಂಕೋಲಾ: ಪ್ರೇಯಸಿಯ ಹುಟ್ಟುಹಬ್ಬಕ್ಕೆ ಚಿನ್ನದ ಉಂಗುರ ಕೊಡಿಸಲು ಕಳ್ಳನಾದ..!

ಕಳ್ಳತನದ ಆರೋಪಿಗಳ ಬಂಧನ| ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಮನೆಗಳನ್ನೇ ವಿಶೇಷವಾಗಿ ಹೊಂಚು ಹಾಕುತ್ತಿದ್ದ ಕಳ್ಳತನದ ಆರೋಪಿಗಳು| ಕಿರಿಯ ವಯಸ್ಸಿನಲ್ಲಿಯೇ ಕಳ್ಳತನದ ದಂಧೆಕ್ಕೆ ಇಳಿದ ಆರೋಪಿಗಳು| 

Four Accused Arrested for Theft Cases in Ankola in Uttara Kannada District grg
Author
Bengaluru, First Published Oct 18, 2020, 11:29 AM IST
  • Facebook
  • Twitter
  • Whatsapp

ಅಂಕೋಲಾ(ಅ.18): ಪಟ್ಟಣದ ಹುಲಿದೇವರವಾಡದ ರಿಯಾ ನಿಲಯದಲ್ಲಿ ನಡೆದ ಕಳ್ಳತನದ ಆರೋಪಿಗಳನ್ನು ಶುಕ್ರವಾರ ತಡರಾತ್ರಿ ಬಂಧಿಸುವಲ್ಲಿ ಅಂಕೋಲಾ ಪೊಲೀಸರು ಯಶಸ್ವಿಯಾಗಿದ್ದಾರೆ.

ಹಾನಗಲ್ಲದವರಾದ ಇಮ್ರಾನ್‌ ಮಕ್ಬುಲ್‌ ಬ್ಯಾಡಗಿ (23), ಮುಬಾರಕ್‌ ಶಾರುಖ್‌ ತಂದೆ ಅಬ್ದುಲ್‌ ಮುನಾಫ್‌ ಸಾಬ್‌ ಶೇಖ್‌ ಸನದಿ (21), ಬಸವರಾಜು ಆಕಾಶ ತಂದೆ ನಾಗಪ್ಪ ಒಡ್ಡರ (23), ಮಲ್ಲಿಕಾರ್ಜುನ್‌ ಮಲ್ಲಿಕ್‌ ತಂದೆ ಅಬ್ದುಲ್‌ ರಜಾಕ್‌ ದೊಡ್ಮನಿ (19) ಬಂಧಿತ ಆರೋಪಿಗಳಾಗಿದ್ದಾರೆ. ಈ ನಾಲ್ವರಲ್ಲಿ ಇಬ್ಬರ ಮೇಲೆ ಈ ಹಿಂದೆಯೂ ಬೇರೆ ಬೇರೆ ಠಾಣೆಗಳಲ್ಲಿ ಕಳ್ಳತನದ ಪ್ರಕರಣಗಳು ದಾಖಲಾಗಿವೆ.

ಈ ಕಳ್ಳತನದ ಆರೋಪಿಗಳು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಮನೆಗಳನ್ನೆ ವಿಶೇಷವಾಗಿ ಹೊಂಚು ಹಾಕುತ್ತಾರೆ ಎನ್ನಲಾಗಿದೆ. ಅತ್ಯಂತ ಕಿರಿಯ ವಯಸ್ಸಿನಲ್ಲಿಯೇ ಕಳ್ಳತನದ ದಂಧೆಯಲ್ಲಿ ತೊಡಗಿಸಿಕೊಂಡಿರುವ ಇವರು ಹಣಕ್ಕಾಗಿ ಹೊಂಚು ಹಾಕಿದ್ದಾರೆ ಎನ್ನಲಾಗಿದೆ. ಈ ನಾಲ್ವರು ಆರೋಪಿಗಳಿಂದ ಎನ್‌ಎಕ್ಸ್‌ಟಿ ಪೈರ್‌ ಮಶಿನ್‌, ಜಿಯೋ ವೈಫೈ, ಕಳ್ಳತನಕ್ಕೆ ಬಳಸಿರುವ ಕಾರು, 20,500 ನಗದು ಸೇರಿದಂತೆ ಒಟ್ಟು 3,72,100 ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ಆರೋಪಿಗಳಿಗೆ ಅ. 29ರ ವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಅವನಾಗೆ ಬಂದು ಪೊಲೀಸರಿಗೆ ಸಿಕ್ಕಾಕೊಂಡ 33 ಬೈಕ್ ಕಳ್ಳ

ಪೊಲೀಸ್‌ ಅಧೀಕ್ಷಕ ಶಿವಪ್ರಕಾಶ ದೇವರಾಜು, ಅಪರ ಪೊಲೀಸ್‌ ಅಧೀಕ್ಷಕ ಎಸ್‌. ಭದರಿನಾಥ, ಉಪಅಧೀಕ್ಷಕ ಅರವಿಂದ ಕಲಗುಜ್ಜಿ ಮಾರ್ಗದರ್ಶನದಲ್ಲಿ ಅಂಕೋಲಾ ಠಾಣೆಯ ಪಿಎಸೈ ಈ.ಸಿ. ಸಂಪತ್‌ ಅವರು ಮತ್ತು ಪೊಲೀಸ್‌ ಸಿಬ್ಬಂದಿ ವಿಶೇಷ ಕಾರ್ಯಾಚರಣೆಯಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ.

ಎಎಸ್‌ಐ ಅಶೋಕ ತಳದಪ್ಪನವರ, ಪೊಲೀಸ್‌ ಸಿಬ್ಬಂದಿ ಮಂಜುನಾಥ ಲಕ್ಮಾಪುರ, ಶ್ರೀಕಾಂತ, ಮನೋಜ, ಸಂತೋಷ, ಆಶೀಫ್‌ ಕುಂಕೂರ, ಸುರೇಶ ಬೆಳ್ಳುಳ್ಳಿ, ಚಾಲಕರಾದ ಜಗದೀಶ ಮತ್ತು ಸತೀಶ, ಯಲ್ಲಾಪುರ ಠಾಣೆಯ ಪೊಲೀಸ್‌ ಸಿಬ್ಬಂದಿ ಮಹಮ್ಮದ ಶಫಿ ಶೇಖ, ಶಿರಸಿ ನಗರ ಠಾಣೆಯ ಕೋಟೇಶ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಪ್ರೇಯಸಿಯ ಹುಟ್ಟುಹಬ್ಬಕ್ಕೆ ಚಿನ್ನದ ಉಂಗುರ ಕೊಡಿಸಲು ಕಳ್ಳನಾದ

ಬಂಧಿತ ಆರೋಪಿಯಲ್ಲಿ ಒಬ್ಬಾತ ಪ್ರೇಯಸಿಯ ಹುಟ್ಟು ಹಬ್ಬಕ್ಕೆ ಚಿನ್ನದ ಉಂಗುರು ಕೊಡಲು ಹುಮ್ಮಸ್ಸು ತೋರಿದ್ದ ಎನ್ನಲಾಗಿದೆ. ಆದರೆ, ಉಂಗುರು ನೀಡಲು ಕಳ್ಳತನಕ್ಕೆ ಇಳಿದ ಈತ ಈಗ ಜೈಲು ಸೇರುವಂತಾಗಿದೆ. ಅತ್ತ ಪ್ರೇಯಸಿ ಮಾತ್ರ ತನಗೆ ಇಂಥ ಕಳ್ಳ ಪ್ರೇಮಿ ಮಾತ್ರ ಬೇಡಾ ಎಂದು ತನ್ನ ಸಂಬಂಧ ಮುರಿದುಕೊಂಡಿದ್ದಾಳೆ ಎಂದು ತಿಳಿದುಬಂದಿದೆ. ಅಂತೂ ಕುರುಡು ಪ್ರೀತಿಗೆ ಉಡುಗರೆ ಕೊಡಲು ಹೋಗಿ ತಾನೇ ಜೈಲು ಪಾಲಾಗಿದ್ದಾನೆ.
 

Follow Us:
Download App:
  • android
  • ios