Asianet Suvarna News Asianet Suvarna News

Tumakuru: ಅನೇಕ ವರ್ಷಗಳಿಂದ ತಲೆಮರೆಸಿಕೊಂಡಿದ್ದ ಮಾಜಿ ನಕ್ಸಲ್ ಚಂದ್ರ ಬಂಧನ!

ದಶಕಕ್ಕೂ ಹೆಚ್ಚು ದಿನಗಳಿಂದ ತಲೆ ಮರೆಸಿಕೊಂಡಿದ್ದ ಮಾಜಿ ನಕ್ಸಲ್ ಚಂದ್ರ ಎಂಬಾತನನ್ನು ತುಮಕೂರು ಪೊಲೀಸರು ಬಂಧಿಸಿದ್ದಾರೆ.

Former Naxal Chandra who was in hiding for many years arrested at tumakuru gvd
Author
First Published Jul 3, 2024, 8:47 PM IST

ತುಮಕೂರು (ಜು.03): ದಶಕಕ್ಕೂ ಹೆಚ್ಚು ದಿನಗಳಿಂದ ತಲೆ ಮರೆಸಿಕೊಂಡಿದ್ದ ಮಾಜಿ ನಕ್ಸಲ್ ಚಂದ್ರ ಎಂಬಾತನನ್ನು ತುಮಕೂರು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನಲ್ಲಿ ತಲೆ ಮರೆಸಿಕೊಂಡಿದ್ದ ಚಂದ್ರ, 2005ರಲ್ಲಿ ವೆಂಕಟಮ್ಮನಹಳ್ಳಿಯ ಕೆಎಸ್ಆರ್ಪಿ ಕ್ಯಾಂಪ್ ಮೇಲೆ ದಾಳಿ ನಡೆಸಿದ ಆರೋಪಿಯಾಗಿದ್ದಾನೆ. ಓರ್ವ ಸಾರ್ವಜನಿಕ ಸೇರಿ 7 ಜನ ಪೊಲೀಸರನ್ನ ಹತ್ಯೆ ಮಾಡಲಾಗಿತ್ತು, ಹತ್ಯೆ ಮಾಡಿ ಶಸ್ತ್ರಾಸ್ತ್ರಗಳ ದೋಚಲಾಗಿತ್ತು.‌ 

ಈ ಸಂಬಂಧ ತಿರುಮಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಂಧಿತ ಚಂದ್ರ, ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯ ಕೇಶಾವಾಪುರಂ ಗ್ರಾಮದ ನಿವಾಸಿಯಾಗಿದ್ದಾನೆ. ಈತನ ವಿರುದ್ಧ ಪಾವಗಡ  ಜೆಎಂಎಫ್ಸಿ ನ್ಯಾಯಲಯವು ಜಾಮೀನು ರಹಿತ ವಾರಂಟ್ ಜಾರಿ ಮಾಡಿತ್ತು.‌ ಎಸ್ಪಿ ಕೆ.ವಿ ಅಶೋಕ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ  ಮಾಜಿ ನಕ್ಸಲ್ ಚಂದ್ರನ ಬಂಧನ ಮಾಡಲಾಗಿದೆ.

ಸಾಗರದ ಬಳಿ ನಕ್ಸಲ್‌ ನೆರಳು: ನಕ್ಸಲ್‌ ಚಟುವಟಿಕೆಯ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಸಾಗರ ತಾಲ್ಲೂಕಿನ ಎಸ್.ಎಸ್.ಭೋಗ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರಾಠಿ ಹಾಗೂ ಮುರಳ್ಳಿ ಗ್ರಾಮಗಳಿಗೆ ನಕ್ಸಲ್ ನಿಗ್ರಹಪಡೆಯ ತಂಡವೊಂದು ಭೇಟಿ ನೀಡಿ ಪರಿಶೀಲನೆ ನಡೆಸಿತು. ತಂಡವು ಮೂವರು ಶಂಕಿತರನ್ನು ವಶಕ್ಕೆ ಪಡೆದು ಕರೆದೊಯ್ದಿರುವುದಾಗಿ ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ. ಆದರೆ ಪೊಲೀಸರು ಇದನ್ನು ಖಚಿತಪಡಿಸಿಲ್ಲ. ಮರಾಠಿ ಹಾಗೂ ಮುರಳ್ಳಿ ಗ್ರಾಮಗಳು ಮೂಕಾಂಬಿಕಾ ಅಭಯಾರಣ್ಯಕ್ಕೆ ಹೊಂದಿಕೊಂಡಂತಿವೆ. ಗಡಿಯಂಚಿನ ಈ ಗ್ರಾಮಗಳಲ್ಲಿ ಈಚೆಗೆ ಅನುಮಾನಾಸ್ಪದ ವ್ಯಕ್ತಿಗಳು ಕಂಡು ಬಂದಿದ್ದರು. ಈ ಹಿನ್ನೆಲೆಯಲ್ಲಿ ತಂಡ ಭೇಟಿ ನೀಡಿ ಗ್ರಾಮಸ್ಥರಿಂದ ಮಾಹಿತಿ ಕಲೆ ಹಾಕಿದೆ.

ರಾಜ್ಯದ ಚಾರಣ ಪಥಗಳ ಆನ್‌ಲೈನ್ ಬುಕ್ಕಿಂಗ್‌ ಶೀಘ್ರ: ಸಚಿವ ಈಶ್ವರ ಖಂಡ್ರೆ

2009ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲೆಯ ಹೊಸ ನಗರ ತಾಲೂಕಿನ ವೇಳೆ ಸುಳಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂಬ್ರಿಬೈಲು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಗೋಡೆಗಳ ಮೇಲೆ ಶಂಕಿತ ನಕ್ಸಲರು ಚುನಾವಣೆ ಬಹಿಷ್ಕರಿಸುವಂತೆ ಗ್ರಾಮಸ್ಥರಲ್ಲಿ ಭಿತ್ತಿಪತ್ರಗಳನ್ನು ಅಂಟಿಸಿ ದ್ದರು. ಈಗಲೂ ಕೂಡ ಲೋಕಸಭಾ ಚುನಾವಣೆ ವೇಳೆಯೇ ಅನುಮಾನಾಸ್ಪದ ವ್ಯಕ್ತಿಗಳು ಕಂಡು ಬಂದಿರುವುದರಿಂದ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ. ಸಮೀಪದ ನಾಗೋಡಿ ಚೆಕ್‌ಪೋಸ್ಟ್‌ನಲ್ಲಿ ಸಮರ್ಪಕ ತಪಾಸಣೆ ನಡೆಯುತ್ತಿಲ್ಲ ಎಂದು ಗ್ರಾಮದ ಶಶಿ ಜೈನ್ ದೂರಿದ್ದಾರೆ.

Latest Videos
Follow Us:
Download App:
  • android
  • ios