ಹಾಡಹಗಲೇ ಮಾಜಿ ಸಚಿವ ಹೆಚ್.ಡಿ.ರೇವಣ್ಣನ ಆಪ್ತ ಗ್ರ್ಯಾನೈಟ್‌ ಕೃಷ್ಣೇಗೌಡನ ಭೀಕರ ಕೊಲೆ

ಮಾಜಿ ಸಚಿವ ಹೆಚ್.ಡಿ. ರೇವಣ್ಣ ಅವರ ಆಪ್ತನಾಗಿರುವ ಗ್ರ್ಯಾನೈಟ್‌ ಉದ್ಯಮಿ ಕೃಷ್ಣೇಗೌಡನನ್ನು ಹಾಡ ಹಗಲೇ ರೌಡಿಗಳು ಕೊಚ್ಚಿ ಕೊಲೆ ಮಾಡಿರುವ ದುರ್ಘಟನೆ ಹಾಸನದಲ್ಲಿ ನಡೆದಿದೆ.

Former minister HD Revanna close friend Granite Krishnegowda was brutal murder in hassan sat

ಹಾಸನ (ಆ.09): ಮಾಜಿ ಸಚಿವ ಹೆಚ್.ಡಿ. ರೇವಣ್ಣ ಅವರ ಆಪ್ತನಾಗಿರುವ ಗ್ರ್ಯಾನೈಟ್‌ ಉದ್ಯಮಿ ಕೃಷ್ಣೇಗೌಡನನ್ನು ಹಾಡ ಹಗಲೇ ರೌಡಿಗಳು ಕೊಚ್ಚಿ ಕೊಲೆ ಮಾಡಿರುವ ದುರ್ಘಟನೆ ಹಾಸನದಲ್ಲಿ ನಡೆದಿದೆ.

ರಾಜ್ಯದ ರಾಜಧಾನಿ ಬೆಂಗಳೂರು, ಕರಾವಳಿ ತೀರದ ಮಂಗಳೂರು, ವಿಜಯಪುರದ ಭೀಮಾತೀರ, ಮಲೆನಾಡು ಹೆಬ್ಬಾಗಿಲು ಶಿವಮೊಗ್ಗದಲ್ಲಿ ಹೆಚ್ಚಾಗಿದ್ದ ಹಾಡಹಗಲೇ ಮಚ್ಚು ಬೀಸಿ ಕೊಲೆ ಮಾಡುವ ಪ್ರಕರಣ ಈಗ ಹಾಸನಕ್ಕೂ ಕಾಲಿಟ್ಟಿದೆ. ಪ್ರಧಾನಿ ಹೆಚ್.ಡಿ. ದೇವೇಗೌಡರ ತವರು ಕ್ಷೇತ್ರ ಹಾಸನದಲ್ಲಿ ರೌಡಿಗಳ ಅಟ್ಟಹಾಸವಿರಲಿಲ್ಲ. ಆದರೆ, ಈಗ ಹಾಡುಹಗಲೇ ಹಾಸನ ನಗರದ ಹೊರವಲಯದ ಕೈಗಾರಿಕಾ ಪ್ರದೇಶದಲ್ಲಿ ಗ್ರ್ಯಾನೈಟ್ ಉದ್ಯಮಿ ಹತ್ಯೆ ಮಾಡಲಾಗಿದೆ. ತಮ್ಮ ಸ್ವಂತ ಗ್ರ್ಯಾನೈಟ್‌ ಫ್ಯಾಕ್ಟರಿಗೆ ಬೆಳಗ್ಗೆ ಪ್ರತಿನಿತ್ಯದ ಮಾದರಿಯಲ್ಲಿ ಹೋಗಿದ್ದಾರೆ. ಆಗ, ರಸ್ತೆಯ ಬದಿಯಲ್ಲಿ ಕಾರನ್ನು ನಿಲ್ಲಿಸಿದ, ಕಾರಿನಿಂದ ಇಳಿದ ಕೃಷ್ಣೇಗೌಡ( 53)ನನ್ನು ಏಕಾಏಕಿ ಧಾಳಿ ಮಾಡಿ ಭೀಕರವಾಗಿ ಕೊಚ್ಚಿ ಕೊಲೆ ಮಾಡಿದ್ದಾರೆ.

ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ತಂದ ಕೆಂಪಣ್ಣನ ಸ್ಥಿತಿ ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಿದೆ; ಎಚ್‌ಡಿಕೆ ಟೀಕೆ

ತಮ್ಮ ಗ್ರ್ಯಾನೈಟ್ ಫ್ಯಾಕ್ಟರಿಯ ಎದುರಲ್ಲೇ ಕೃಷ್ಣೇಗೌಡನ ಭೀಕರ ಕೊಲೆ ಮಾಡಲಾಗಿದ್ದು, ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಮನಸೋ ಇಚ್ಛೆ ಕೊಚ್ಚಿ ಹಾಕಲಾಗಿದೆ ಎಂದು ತಿಳಿದುಬಂದಿದೆ. ಈ ಘಟನೆ ಹಾಸನ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಘಟನೆಯ ಬೆನ್ನಲ್ಲೇ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ಮಾಡಿದ್ದಾರೆ. ಇನ್ನು ಈ ರಸ್ತೆಯನ್ನು ಬಂದ್‌ ಮಾಡಲಾಗಿದ್ದು, ನಾಶವಾಗದಂತೆ ಬ್ಯಾರಿಕೇಡ್‌ ಹಾಕಿದ್ದಾರೆ. ಇನ್ನು ಪೊಲೀಸರು ಕೊಲೆಗಾರರಿಗೆ ಬಲೆ ಬೀಸಿದ್ದಾರೆ.

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಕುಸಿದು ಬಿದ್ದು ಸಾವು: ಚಾಮರಾಜನಗರ (ಆ.09): ರಾಜ್ಯದಲ್ಲಿ ಸ್ಪಂದನಾ ವಿಜಯ್‌ ರಾಘವೇಂದ್ರ ಅವರ ಹೃದಯಾಘಾತದ ಸಾವಿನಿಂದ ಕಂಬನಿ ಮಿಡಿಯುತ್ತಿರುವ ಸಂದರ್ಭದಲ್ಲಿಯೇ ರಾಜ್ಯದ ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಎಸ್‌ಎಸ್‌ಎಲ್‌ಸಿ ಅಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿನಿ ಶಾಲೆಯಲ್ಲಿ ಕುಸಿದು ಬಿದ್ದು ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ. ಇಡೀ ರಾಜ್ಯವೇ ಹರೆಯದ ವಯಸ್ಸಿನಲ್ಲಿಯೇ ಬ್ಯಾಂಕಾಕ್‌ನಲ್ಲಿ ವಿಜಯ್‌ ರಾಘವೇಂದ್ರ ಪತ್ನಿ ಸ್ಪಂದನಾ ಸಾವಿಗೆ ಕಂಬನಿ ಮಿಡಿಯುತ್ತಿದೆ. ಇಂತಹ ವೇಳೆಯಲ್ಲಿ ರಾಜ್ಯದ ಗಡಿಜಿಲ್ಲೆ ಚಾಮರಾಜನಗರದ ಪ್ರೌಢಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ಅಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಕುಸಿದುಬಿದ್ದು ಸಾವನ್ನಪ್ಪಿದ ದುರ್ಘಟನೆ ನಡೆದಿದೆ.

ಸ್ಪಂದನಾ ವಿಜಯ್‌ ಬೆನ್ನಲ್ಲೇ, ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಕುಸಿದು ಬಿದ್ದು ಸಾವು

ಗುಂಡ್ಲುಪೇಟೆ ನಿರ್ಮಲ ಪ್ರೌಢಶಾಲೆಯಲ್ಲಿ ದುರ್ಘಟನೆ: ಮೃತ ಬಾಲಕಿಯನ್ನು ಪೆಲಿಸಾ (15) ಎಂದು ಗುರುತಿಸಲಾಗಿದೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯ ನಿರ್ಮಲ ಪ್ರೌಢ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ (10ನೇ ತರಗತಿ) ಅಭ್ಯಾಸ ಮಾಡುತ್ತಿದ್ದರು. ಇಂದು ಬೆಳಗ್ಗೆ ಶಾಲೆಗೆ ಹೋದ ನಂತರ ಶಾಲೆಯ ಆವರಣದಲ್ಲಿಯೇ ಕುಸಿದು ಬಿದ್ದಿದ್ದಾಳೆ, ಶಿಕ್ಷಕರು ಬಂದು ನೋಡುವಷ್ಟರಲ್ಲಿಯೇ ವಿದ್ಯಾರ್ಥಿನಿಯ ಪ್ರಾಣಪಕ್ಷಿ ಹಾರಿ ಹೋಗಿದೆ. ಕೂಡಲೇ ಶಿಕ್ಷಕರು ವಿದ್ಯಾರ್ಥಿನಿಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಾಷ್ಟರಲ್ಲಾಗಲೇ ವಿದ್ಯಾರ್ಥಿನಿ ಸಾವನ್ನಪ್ಪಿದ್ದಾಳೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಸಾಯಬಾರದ ವಯಸ್ಸಿನಲ್ಲಿ ಮಧ್ಯ ವಯಸ್ಕರು ಸಾವನ್ನಪ್ಪಿದ ಬಗ್ಗೆ ರಾಜ್ಯದಲ್ಲಿ ಚರ್ಚೆ ನಡೆಯುತ್ತಿದ್ದು, ಈಗ ಕೇವಲ 15 ವರ್ಷ ಬಾಲಕಿ ಕುಸಿದುಬಿದ್ದು ಸಾವನ್ನಪ್ಪಿರುವುದು ಆತಂಕವನ್ನು ಉಂಟುಮಾಡಿದೆ.

Latest Videos
Follow Us:
Download App:
  • android
  • ios