ಬೆಂಗಳೂರು(ಡಿ.10): ರಾಮಮೂರ್ತಿ ನಗರದ ಸಮೀಪ ಮನೆಯೊಂದರ ಮೇಲೆ ದಾಳಿ ನಡೆಸಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ವಿದೇಶಿ ಮಹಿಳೆ ಸೇರಿದಂತೆ ಇಬ್ಬರನ್ನು ಬಂಧಿಸಿ, ನಾಲ್ವರು ಮಹಿಳೆಯರನ್ನು ಸಿಸಿಬಿ ಪೊಲೀಸರು ರಕ್ಷಿಸಿದ್ದಾರೆ.

ಉಗಾಂಡ ದೇಶದ ನಕ್ಕಾಜಿ ಫೈನಾಹ ಹಾಗೂ ಆಕೆಯ ಸ್ನೇಹಿತ ರಾಮಮೂರ್ತಿ ನಗರದ ಫೈಜಲ್‌ ಅಹ್ಮದ್‌ ಬಂಧಿತರು. ವೇಶ್ಯಾವಾಟಿಕೆ ಜಾಲದಲ್ಲಿ ವಿದೇಶಿ ಮಹಿಳೆ ಸಕ್ರಿಯವಾಗಿರುವ ಬಗ್ಗೆ ಖಚಿತ ಮಾಹಿತಿ ಪಡೆದು ದಾಳಿ ನಡೆಸಲಾಯಿತು ಎಂದು ಸಿಸಿಬಿ ಅಧಿಕಾರಿಗಳು ಹೇಳಿದ್ದಾರೆ.

ಹೊರಗೆ ಸ್ಪಾ.. ಒಳಗೆ.. ರಾಶಿ ರಾಶಿ ವಯಾಗ್ರ.. ಮಹಿಳೆಯರೆ ಕಿಂಗ್ ಪಿನ್!

ವರ್ಷದ ಹಿಂದೆ ಫೈಜಲ್‌ ಮನೆ ಬಾಡಿಗೆ ಪಡೆದು ವಿದೇಶಿ ಮಹಿಳೆಯರ ಜತೆ ನೆಲೆಸಿದ್ದ. ಪ್ರವಾಸಿ ವೀಸಾದಡಿ ನಗರಕ್ಕೆ ಬಂದಿದ್ದ ನಕ್ಕಾಜಿ, ವೇಶ್ಯಾವಾಟಿಕೆ ದಂಧೆಗೆ ಸಾಥ್‌ ಕೊಟ್ಟಿದ್ದಳು. ಈ ದಾಳಿ ವೇಳೆ ನಾಲ್ವರು ವಿದೇಶಿ ಮಹಿಳೆಯರನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.