ಬೆಂಗಳೂರು: ಹೊಟ್ಟೆಯೊಳಗೆ ₹9 ಕೋಟಿಯ ಕೊಕೇನ್‌ ಇರಿಸಿದ್ದ ವಿದೇಶಿಗ..!

ಆರೋಪಿ ವೆನಿಜುವಲಾ ದೇಶದ ಪ್ರಜೆ ಆಗಿದ್ದು, ಕೆಲ ದಿನಗಳ ಹಿಂದೆ ಕೆಐಎಗೆ ದುಬೈ ಮೂಲಕ ಆಗಮಿಸಿದ ಶಂಕೆ ಮೇರೆಗೆ ಆರೋಪಿಯನ್ನು ವಶಪಡೆದು ತಪಾಸಣೆಗೆ ಒಳಪಡಿಸಿದಾಗ ಡ್ರಗ್ಸ್ ರಹಸ್ಯ ಬಯಲಾಗಿದೆ. 

Foreign Citizen Arrested For Who Has Cocaine worth 9 crore inside the Stomach in Bengaluru grg

ಬೆಂಗಳೂರು(ಫೆ.18):  ತನ್ನ ದೇಹದೊಳಗೆ ₹9.2 ಕೋಟಿ ಮೌಲ್ಯದ ಕೊಕೇನ್ ಅಡಗಿಸಿಕೊಂಡು ಆಗಮಿಸಿದ್ದ ವಿದೇಶಿ ಪ್ರಜೆಯೊಬ್ಬನನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಂದಾಯ ಜಾರಿ ನಿರ್ದೇಶನಾಲಯ (ಡಿಆರ್‌ಐ)ದ ಅಧಿಕಾರಿಗಳು ಬಂಧಿಸಿದ್ದಾರೆ.

ಆರೋಪಿ ವೆನಿಜುವಲಾ ದೇಶದ ಪ್ರಜೆ ಆಗಿದ್ದು, ಕೆಲ ದಿನಗಳ ಹಿಂದೆ ಕೆಐಎಗೆ ದುಬೈ ಮೂಲಕ ಆಗಮಿಸಿದ ಶಂಕೆ ಮೇರೆಗೆ ಆರೋಪಿಯನ್ನು ವಶಪಡೆದು ತಪಾಸಣೆಗೆ ಒಳಪಡಿಸಿದಾಗ ಡ್ರಗ್ಸ್ ರಹಸ್ಯ ಬಯಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಬೆಂಗಳೂರು: 20 ಕೋಟಿಯ ಕೊಕೇನ್‌ ಮಾತ್ರೆ ನುಂಗಿದ್ದವನ ಸೆರೆ

ದುಬೈ ವಿಮಾನದಲ್ಲಿ ಪ್ರಯಾಣಿಕ ಡ್ರಗ್ಸ್ ಸಾಗಾಣಿಕೆ ಬಗ್ಗೆ ಡಿಆರ್‌ಐ ಅಧಿಕಾರಿಗಳಿಗೆ ಮಾಹಿತಿ ಸಿಕ್ಕಿತು. ಕೂಡಲೇ ಕಾರ್ಯಪ್ರವೃತ್ತರಾದ ಅಧಿಕಾರಿಗಳು, ಫೆ.9ರಂದು ರಾತ್ರಿ ದುಬೈನಿಂದ ಆಗಮಿಸಿದ ವಿಮಾನದ ಪ್ರಯಾಣಿಕರ ಮೇಲೆ ನಿಗಾವಹಿಸಿದ್ದರು. ಆಗ ವೆನಿಜುವಲಾ ದೇಶದ ಪ್ರಜೆ ನಡವಳಿಕೆಯಿಂದ ಅನುಮಾನಗೊಂಡ ಅಧಿಕಾರಿಗಳು, ತಕ್ಷಣವೇ ಆತನನ್ನು ವಶಕ್ಕೆ ಪಡೆದು ತಪಾಸಣೆಗೆ ಒಳಪಡಿಸಿದಾಗ ಡ್ರಗ್ಸ್ ಪತ್ತೆಯಾಗಿದೆ. ನಂತರ ವೈದ್ಯರ ಮೂಲಕ ದೇಹದೊಳಗೆ ಅಡಗಿಸಿಟ್ಟಿದ್ದ ₹9.2 ಕೋಟಿ ಮೌಲ್ಯದ 920 ಗ್ರಾಂ ಡ್ರಗ್ಸ್ ಹೊರ ತೆಗೆಯಲಾಗಿದೆ. ಆರೋಪಿ ಸುರಕ್ಷಿತವಾಗಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Latest Videos
Follow Us:
Download App:
  • android
  • ios