ಮದುವೆ ಮನೆಯಲ್ಲಿ ಭೀಕರ ಅವಘಡ, ಸಿಲಿಂಡರ್ ಸ್ಫೋಟಕ್ಕೆ ಐವರು ಸಾವು, 52 ಮಂದಿ ಗಾಯ!
ಮದುವೆ ಮನೆಯ ಸಂಭ್ರಮ ಒಂದು ಕ್ಷಣಕ್ಕೆ ಅಂತ್ಯವಾಗಿದೆ. ಇನ್ನೇನು ಮಧುಮಗನ ಮೆರವಣಿಗೆ ಹೊರಡಬೇಕು. ಆಪ್ತರು ಸಂಬಂಧಿಕರು, ಮಕ್ಕಳು ಮನೆಯಲ್ಲಿ ತುಂಬಿ ತುಳುಕುತ್ತಿದ್ದಾರೆ. ಇದೇ ವೇಳೆ ಮನೆಯಲ್ಲಿದ್ದ ಸಿಲಿಂಡರ್ ಸ್ಫೋಟಗೊಂಡಿದೆ.
ಜೈಪುರ(ಡಿ.09): ಮಧುಮಗನ ಮನೆಯಲ್ಲಿ ಸಂಭ್ರಮ ಮನೆ ಮಾಡಿತ್ತು. ಅದ್ಧೂರಿ ಮದುವೆಗೆ ಎಲ್ಲಾ ತಯಾರಿಗಳು ನಡೆದಿತ್ತು. ಮಧಮಗನ ಮನೆಯಿಂದ ಮಂಟಪಕ್ಕೆ ಮೆರವಣಿಗೆ ಮೂಲಕ ತೆರಳಲು ಹುಡುಗ ರೆಡಿಯಾಗಿದ್ದ. ಆಪ್ತರು, ಸಂಬಂಧಿಕರು, ಗೆಳೆಯರು ಎಲ್ಲಾ ಮನೆಯಲ್ಲಿ ಸೇರಿದ್ದರು. ಬ್ಯಾಂಡ್ ವಾದ್ಯಗಳು ಮೊಳಗಿತ್ತು. ಡಿಜೆ ಮ್ಯೂಸಿಕ್, ಲೈಟಿಂಗ್ಸ್, ಕ್ಯಾಮರಾ ಫ್ಲಾಶ್ ನಡುವೆ ಈ ಮನೆಯ ಸಂಭ್ರಮ ಹಾಗೂ ಸಂತಸಕ್ಕೆ ಪಾರವೇ ಇರಲಿಲ್ಲ. ಆದರೆ ಇದೇ ವೇಳೆ ಮದುವೆ ಮನೆಯಲ್ಲಿ ಭೀಕರ ಅವಘಡ ಸಂಭವಿಸಿದೆ. ಮನೆಯಲ್ಲಿದ್ದ ಸಿಲಿಂಡರ್ ಸ್ಫೋಟಗೊಂಡಿದೆ. ಸ್ಥಳದಲ್ಲೇ ಐವರು ಮೃತಪಟ್ಟಿದ್ದಾರೆ. 52 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಇದರಲ್ಲಿ 21 ಮಂದಿಯ ಸ್ಥಿತಿ ಚಿಂತಾಜನಕವಾಗಿದೆ. ಈ ಘಟನೆ ನಡೆದಿರಿವುದು ರಾಜಸ್ಥಾನದ ಜೋಧಪುರ ಸಮೀಪದ ಭುಂಗ್ರ ಗ್ರಾಮದಲ್ಲಿ.
ಈ ಘಟನೆಗೆ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಆಘಾತ ವ್ಯಕ್ತಪಡಿಸಿದ್ದಾರೆ. ಸಿಲಿಂಡರ್ ಸ್ಫೋಟದಿಂದ ಮೃತರಾದವರಿಗೆ ಸಂತಾಪ ಸೂಚಿಸಿದ್ದಾರೆ. ಇದೇ ವೇಳೆ ಗಾಯಗೊಂಡವರಿಗೆ 1 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಇದೇ ವೇಳೆ ಗ್ಯಾಸ್ ಎಜೆನ್ಸಿ ತಮ್ಮ ತಮ್ಮ ಗ್ರಾಹಕರ ಮನೆಗೆ ತೆರಳಿ ನಿರ್ವಹಣೆಯನ್ನು ಮಾಡಬೇಕು. ಇದರಲ್ಲಿ ನಿರ್ಲಕ್ಷ್ಯ ಸಲ್ಲದು ಎಂದು ಸೂಚಿಸಿದ್ದಾರೆ. ಗ್ಯಾಸ್ ಎಜೆನ್ಸಿ ಗ್ರಾಹಕರಿಗೆ ವಿಮೆಯನ್ನು ಒದಗಿಸಬೇಕು ಎಂದಿದ್ದಾರೆ. ಇದೇ ವೇಳೆ ಎಲ್ಲಾ ಜಿಲ್ಲಾಧಿಕಾರಿಗಳು ಆಯಾ ಜಿಲ್ಲೆಯ ಗ್ಯಾಸ್ ಸಿಲಿಂಡರ್ ನಿರ್ವಹಣೆ ಮಾಡಲಾಗಿದೆಯಾ ಅನ್ನೋದನ್ನು ಪರಿಶೀಲಿಸಬೇಕು ಎಂದು ಅಶೋಕ್ ಗೆಹ್ಲೋಟ್ ಸೂಚಿಸಿದ್ದಾರೆ.
ಡಿಕ್ಕಿ ಹೊಡೆದು ಮಹಿಳೆಯನ್ನು ರಸ್ತೆ ಮೇಲೆ ಎಳೆದೊಯ್ದ ಐಷಾರಾಮಿ ಕಾರು: ಬಲಿಯಾದ ರಿಸೆಪ್ಷನಿಸ್ಟ್
ಭುಂಗ್ರಾ ಗ್ರಾಮದಲ್ಲಿ ನಡೆದ ಈ ಘಟನೆ ಅತ್ಯಂತ ಗಂಭೀರ ಅವಘಡವಾಗಿದೆ. 52ಕ್ಕೂ ಹೆಚ್ಚು ಮಂದಿಗೆ ಗಾಯವಾಗಿದೆ. 5 ಮಂದಿ ಮೃತಪಟ್ಟಿದ್ದಾರೆ. ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆ ನೀಡಲು ಎಲ್ಲಾ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಹಿಮಾಂಶು ಗುಪ್ತ ಹೇಳಿದ್ದಾರೆ.
ಮಧುಮಗನ ಮೆರವಣಿಗೆ ಹೊರಡಲು ಇನ್ನೇನು ಕೆಲವೇ ನಿಮಿಷಗಳು ಬಾಕಿ ಇರುವಾಗಲೇ ಸಿಲಿಂಡರ್ ಸ್ಫೋಟಗೊಂಡಿದೆ. ಮದುವೆ ಮನೆಯಾದ ಕಾರಣ ಹಲವರು ಸೇರಿದ್ದರು. ಗಾಯಗೊಂಡವರ ಪೈಕಿ ಹೆಚ್ಚಿನವರು ಮಹಿಳೆಯರು ಹಾಗೂ ಮಕ್ಕಳಾಗಿದ್ದಾರೆ. ಮನೆಯೊಳಗಿದ್ದ ಸಿಲಿಂಡರ್ ಸ್ಫೋಟಗೊಂಡಿದೆ. ಸ್ಫೋಟಕ್ಕೆ ಗ್ಯಾಸ್ ಲೀಕ್ ಕಾರಣ ಎಂದು ಹೇಳಲಾಗುತ್ತಿದೆ. ಸ್ಫೋಟದ ತೀವ್ರತೆಗೆ ಮನೆಯ ಮೇಲ್ಜಾವಣಿ ಕುಸಿದಿದೆ. ಮನೆ ಗೋಡೆಗಳು ಬಿರುಕು ಬಿಟ್ಟಿದೆ. ಮನೆ ಒಂದು ಭಾಗ ಸಂಪೂರ್ಣ ಕುಸಿದು ಬಿದ್ದಿದೆ.
ಆಂಧ್ರದ ರೌಡಿ ಮೇಲೆ ನಗರದಲ್ಲಿ ಶೂಟೌಟ್
ಆಸ್ಪತ್ರೆ ದಾಖಲಾಗರುವ ಗಾಯಾಳುಗಳ ಪೈಕಿ 21 ಮಂದಿ ತೀವ್ರ ನಿಘಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಶೇಕಡಾ 80 ರಷ್ಟು ದೇಹದ ಭಾಗಗಳು ಸುಟ್ಟಿದೆ. 29 ಮಂದಿ ಸಾಮಾನ್ಯ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಭುಂಗ್ರಾ ಗ್ರಾಮ ಜೋಧಪುರದಿಂದ 60 ಕಿಲೋಮೀಟರ್ ದೂರದಲ್ಲಿದೆ. ಈ ಘಟನೆಯಿಂದ ರಾಜಸ್ಥಾನದಲ್ಲಿ ಎಲ್ಲಾ ಮನೆಗಳಲ್ಲಿ ಗ್ಯಾಸ್ ಸಿಲಿಂಡರ್ ನಿರ್ವಹಣೆ ಮಾಡಲು ಜಿಲ್ಲಾಧಿಗಳು ಖಡಕ್ ಸೂಚನೆ ನೀಡಿದ್ದಾರೆ. ಸುರಕ್ಷತೆಗೆ ಬೇಕಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದ್ದಾರೆ.