ಟೋಪಿ ಹಾಕಿ ಕಾಲೇಜ್ ಗೆ ಬಂದಿದ್ದ ವಿದ್ಯಾರ್ಥಿಗೆ ಥಳಿತ ಪ್ರಕರಣ ಬಾಗಲಕೋಟೆ ಜಿಲ್ಲೆಯ ತೇರದಾಳ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜನಲ್ಲಿ ನಡೆದಿದ್ದ ಘಟನೆ ಘಟನೆ ಬೆನ್ನಲ್ಲೆ ನ್ಯಾಯಾಲಯಕ್ಕೆ ಮೊರೆ ಹೋಗಿದ್ದ ವಿದ್ಯಾರ್ಥಿ ನವೀದ್ ಜೂನ್ 30ಕ್ಕೆ ವಿಚಾರಣೆ ನಡೆಸಲು ಆದೇಶಿಸಿರೋ ಕೋರ್ಟ್
ಬಾಗಲಕೋಟೆ (ಮೇ.30): ಕಾಲೇಜ್ ಗೆ (College) ವಿದ್ಯಾರ್ಥಿಯೊಬ್ಬ (Student) ಟೋಪಿ (skull cap) ಧರಿಸಿ ಬಂದ ವಿಚಾರದಲ್ಲಿ ವಿವಾದವೊಂದು ನಡೆದು ಪ್ರಕರಣದಲ್ಲಿ ಕಾಲೇಜ್ ಪ್ರಿನ್ಸಿಪಾಲ್ (Principle), ಠಾಣಾ ಪಿಎಸ್ಐ (PSI) ಮತ್ತು ಪೋಲಿಸ್ ಸಿಬ್ಬಂದಿ ಸೇರಿ 7 ಜನರ ಮೇಲೆ ದೂರು ದಾಖಲಿಸಲು ಕೋರ್ಟ್ ಆದೇಶ ನೀಡಿರೋ ಘಟನೆ ಬಾಗಲಕೋಟೆ (Bagalkote) ಜಿಲ್ಲೆಯ ತೇರದಾಳದಲ್ಲಿ ನಡೆದಿದೆ.
ಕಳೆದ ಫೆ.18ರಂದು ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ವಿದ್ಯಾರ್ಥಿ ನವೀದ್ ಟೋಪಿ ಧರಿಸಿ ಬಂದಿದ್ದ. ಇದೇ ಸಮಯದಲ್ಲಿ ಹಿಜಾಬ್ (Hijab) ವಿವಾದ ಸಹ ಸಾಕಷ್ಟು ವಿವಾದ ಸೃಷ್ಟಿಸಿತ್ತು. ಈ ವೇಳೆ ನವೀದ ಟೋಪಿ ಧರಿಸಿ ಬಂದ ಪರಿಣಾಮ ವಾದ ನಡೆದು ಕಾಲೇಜ ಪ್ರಾಚಾರ್ಯ ನವೀದ ಮೇಲೆ ಕೇಸ್ ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ತೇರದಾಳ ಪೋಲಿಸರು ನವೀದನನ್ನ ವಶಕ್ಕೆ ಪಡೆದಿದ್ದರು. ಈ ವೇಳೆ ತನ್ನ ಮೇಲೆ ಪೋಲಿಸರಿಂದ ಹಲ್ಲೆಯಾಗಿದೆ ಎಂದು ನವೀದ ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಪಡೆದುಕೊಂಡಿದ್ದ.
CHITRADURGA; ಒಂದೇ ವೇದಿಕೆಯಲ್ಲಿ ಐದು ಜನ ಮಹನೀಯರ ಜಯಂತಿ ಆಚರಣೆ
ಈ ಮದ್ಯೆ ತನಗೆ ನ್ಯಾಯ ನೀಡುವಂತೆ ಕೋರಿ ವಿದ್ಯಾರ್ಥಿ ನವೀದ್, 2022ರ ಮಾರ್ಚ್ 29ರಂದು ಬನಹಟ್ಟಿಯ ಜೆಎಂಎಫ್ ಸಿ ನ್ಯಾಯಾಲಯದಲ್ಲಿ ಅಜಿ೯ ಸಲ್ಲಿಸಿ, ಕಾಲೇಜು ಪ್ರಾಚಾರ್ಯ ಎ.ಎಸ್.ಪೂಜಾರ, ಠಾಣಾಧಿಕಾರಿ ರಾಜು ಬೀಳಗಿ ಮತ್ತು 7 ಜನ ಪೋಲಿಸರ ವಿರುದ್ಧ FIR ದಾಖಲಿಸುವಂತೆ ಅರ್ಜಿ ಸಲ್ಲಿಸಿದ್ದ. ಇದರ ಬೆನ್ನಲ್ಲೆ ವಿಚಾರಣೆ ನಡೆಸಿದ ಜೆಎಂಎಫ್ ಸಿ ನ್ಯಾಯಾಲಯ ಎಪ್ರಿಲ್ 4 ರಂದು 7 ಜನರ ವಿರುದ್ಧ ಪ್ರಕರಣ ದಾಖಲಿಸುವಂತೆ ಆದೇಶಿಸಿತ್ತು. ಇದರಿಂದ ಮೇ 24ರಂದು 7 ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆಯ ಜವಾಬ್ದಾರಿಯನ್ನು ಜಮಖಂಡಿ ಡಿವೈಎಸ್ಪಿ ಅವರಿಗೆ ವಹಿಸಲಾಗಿದೆ. ಈ ಮಧ್ಯೆ ಜೂ.30ಕ್ಕೆ ನ್ಯಾಯಾಲಯ ಪ್ರಕರಣ ಸಂಭಂದ ವಿಚಾರಣೆ ನಡೆಸಲು ಮುಂದಾಗಿದೆ.
ಹೊಸಪೇಟೆ ಸರ್ಕಾರಿ ಪದವಿ ಕಾಲೇಜಲ್ಲಿ ಹಣದ ಗೋಲ್‌ಮಾಲ್?: ವಿಜಯನಗರ ಜಿಲ್ಲಾ ಕೇಂದ್ರ ಹೊಸಪೇಟೆಯ ‘ಶಂಕರ ಆನಂದ ಸಿಂಗ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿ’ನಲ್ಲಿ ಹಣದ ಗೋಲ್‌ಮಾಲ್ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಕಾಲೇಜಿನ 16 ಬ್ಯಾಂಕ್ ಖಾತೆಗಳಿಂದ ಅಂದಾಜು 3 ಕೋಟಿ ತೆಗೆಯಲಾಗಿದ್ದು, ಈ ಹಣ ಎಲ್ಲೆಲ್ಲಿ ಖರ್ಚು ಮಾಡಲಾಗಿದೆ. ಯಾವ ಉದ್ದೇಶಕ್ಕೆ ಬಿಡಿಸಲಾಗಿದೆ ಎಂಬುದು ಸ್ಪಷ್ಟವಾಗಬೇಕಿದೆ. ಈ ಬಗ್ಗೆ ಲೆಕ್ಕ ಪರಿಶೋಧನೆಯಿಂದಲೇ ಖಚಿತವಾಗಲಿದ್ದು, ಇದಕ್ಕಾಗಿ ಉನ್ನತ ಶಿಕ್ಷಣ ಇಲಾಖೆಯ ಕಾಲೇಜು ಶಿಕ್ಷಣ ಇಲಾಖೆ ಶೀಘ್ರವೇ ಲೆಕ್ಕ ಪರಿಶೋಧನೆಗೆ ತಂಡ ಕಳುಹಿಸಲಿದೆ ಎಂದು ಕಾಲೇಜಿನ ಮೂಲಗಳು ಕನ್ನಡಪ್ರಭಕ್ಕೆ ತಿಳಿಸಿವೆ.
ಸಭಾಪತಿ ಆಗಬಹುದೆಂಬ ಆಸೆಯಿಂದ Basavaraj Horatti ಕೋಮುವಾದಿಪಕ್ಷಕ್ಕೆ ಶಿಫ್ಟ್
ಯಾವ್ಯಾವ ಖಾತೆಗಳು: ಕಾಲೇಜು ಅಭಿವೃದ್ಧಿ ಸಮಿತಿ, ಕಾಲೇಜು ಅಭಿವೃದ್ಧಿ ಹಣಕಾಸು ಸಮಿತಿ, ಗ್ರಂಥಾಲಯ, ಎನ್‌ಎಸ್‌ಎಸ್, ಕ್ರೀಡಾ ಘಟಕಗಳು ಸೇರಿದಂತೆ 16 ಖಾತೆಗಳಿಂದ ಹಣ ಡ್ರಾ ಮಾಡಲಾಗಿದೆ. 2015-16ನೇ ಸಾಲಿನಿಂದ ಪೊ›. ಬಿ.ಜಿ. ಕನಕೇಶಮೂರ್ತಿ ಕಾಲೇಜಿನ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸಿದ್ದು, 2022ರ ಏಪ್ರಿಲ್ 30ರಂದು ಸೇವಾ ನಿವೃತ್ತಿ ಹೊಂದಿದ್ದಾರೆ.
ಮೇ 1ರಿಂದ ನಟರಾಜ ಪಾಟೀಲ್ ಕಾಲೇಜಿನ ಪ್ರಾಚಾರ್ಯರಾಗಿದ್ದಾರೆ. ಕನಕೇಶಮೂರ್ತಿ ನಿವೃತ್ತಿ ಹೊಂದಿದಾಗ ಪ್ರತ್ಯೇಕವಾಗಿ ಕಾಲೇಜಿನ ಲೆಕ್ಕದ ಬಗ್ಗೆ ವಿವರ ನೀಡಿದ್ದಾರೆ. ಜತೆಗೆ .9.60 ಲಕ್ಷ ಬ್ಯಾಂಕ್ ಖಾತೆಗಳಲ್ಲಿ ಉಳಿದಿರುವ ಬಗ್ಗೆ ಮಾಹಿತಿಯನ್ನೂ ನೀಡಿದ್ದಾರೆ ಎಂದು ಕಾಲೇಜಿನ ಪ್ರಾಚಾರ್ಯ ನಟರಾಜ ಪಾಟೀಲ್ ಕನ್ನಡಪ್ರಭಕ್ಕೆ ಮಾಹಿತಿ ನೀಡಿದರು.
ನ್ಯಾಕ್ ಮಾನ್ಯತೆ ಉದ್ದೇಶಕ್ಕಾಗಿ ಕಾಲೇಜಿನ ಬೆಳವಣಿಗೆಗೆ ಹಣ ಖರ್ಚು ಮಾಡಲಾಗಿದೆ. ಪ್ರತಿಯೊಂದು ವಿವರವೂ ಇದೆ. ಲೆಕ್ಕ ಪರಿಶೋಧನಾ ವರದಿಯಲ್ಲಿ ಇದೆಲ್ಲ ಸಾಬೀತಾಗಲಿದೆ ಎಂದು ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರೊಬ್ಬರು ತಿಳಿಸಿದರು.
ಈ ಮಧ್ಯೆ ನಿವೃತ್ತ ಪ್ರಾಚಾರ್ಯ ಪೊ›. ಬಿ.ಜಿ. ಕನಕೇಶಮೂರ್ತಿ ಅವರಿಗೆ ಈ ಬಗ್ಗೆ ವಿವರಣೆ ಪಡೆಯಲು ಫೋನಾಯಿಸಿದರೆ ಕರೆ ಸ್ವೀಕರಿಸಲಿಲ್ಲ. ಕಾಲೇಜ್‌ನ ಬ್ಯಾಂಕ್ ಖಾತೆಗಳಲ್ಲಿನ ಹಣ ಡ್ರಾ ಆಗಿರುವ ಕುರಿತು ಕಾಲೇಜು ಅಭಿವೃದ್ಧಿ ಸಮಿತಿ ಶನಿವಾರ ಸಭೆ ನಡೆಸಿ ಚರ್ಚಿಸಿದೆ ಎಂದು ಮೂಲಗಳು ಕನ್ನಡಪ್ರಭಕ್ಕೆ ಖಚಿತಪಡಿಸಿವೆ.
