Asianet Suvarna News Asianet Suvarna News

ಕೋಲಾರ: ಕೇವಲ 10 ಇಂಚು ಜಾಗಕ್ಕೆ ನಡೆದ ಜಗಳ, ಕೊಲೆಯಲ್ಲಿ ಅಂತ್ಯ!

ರಾಜ್ಯದಲ್ಲಿ ಕೊಲೆ, ದರೋಡೆ, ಬೆದರಿಕೆ ಎಷ್ಟು ಸಾಮಾನ್ಯವಾಗಿಬಿಟ್ಟಿವೆ ಎಂದರೆ ಸಣ್ಣಪುಟ್ಟ ಕಾರಣಗಳಿಗೆ ಕೊಲೆ ಪ್ರಕರಣಗಳು ದಿನನಿತ್ಯ ವರದಿಗಳಾಗುತ್ತಿವೆ. ಕ್ಷುಲ್ಲಕ ಕಾರಣಗಳಿಗೆ ಹತ್ಯೆಯಾದ ಪ್ರಕರಣಗಳ ಸಾಲಿಗೆ ಮತ್ತೊಂದು ಸೇರ್ಪಡೆಯಾಗಿದೆ. ಕೇವಲ 10 ಇಂಚು ಜಾಗಕ್ಕೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಕೋಲಾರ ಜಿಲ್ಲೆಯಲ್ಲಿ ನಡೆದಿದೆ.

fight over a trivial reason ended in murder at kolar district rav
Author
First Published Sep 19, 2023, 10:00 AM IST

ಕೋಲಾರ (ಸೆ.19): ರಾಜ್ಯದಲ್ಲಿ ಕೊಲೆ, ದರೋಡೆ, ಬೆದರಿಕೆ ಎಷ್ಟು ಸಾಮಾನ್ಯವಾಗಿಬಿಟ್ಟಿವೆ ಎಂದರೆ ಸಣ್ಣಪುಟ್ಟ ಕಾರಣಗಳಿಗೆ ಕೊಲೆ ಪ್ರಕರಣಗಳು ದಿನನಿತ್ಯ ವರದಿಗಳಾಗುತ್ತಿವೆ. ಕ್ಷುಲ್ಲಕ ಕಾರಣಗಳಿಗೆ ಹತ್ಯೆಯಾದ ಪ್ರಕರಣಗಳ ಸಾಲಿಗೆ ಮತ್ತೊಂದು ಸೇರ್ಪಡೆಯಾಗಿದೆ. ಕೇವಲ 10 ಇಂಚು ಜಾಗಕ್ಕೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಕೋಲಾರ ಜಿಲ್ಲೆಯಲ್ಲಿ ನಡೆದಿದೆ.

ಮುಜುಮಿಲ್ ಪಾಷಾ ಕೊಲೆಯಾದ ದುರ್ದೈವಿ. ಕೋಲಾರನಗರದ ಇದ್ರೀಸ್ ಸಾಬ್ ಬಡಾವಣೆ ನಿವಾಸಿಯಾಗಿರುವ ಮುಜುಮಿಲ್ ಪಾಷಾ. ಮುಜುಮಿಲ್ ಪಾಷಾ ತಂದೆ ಮನೆ ನಿರ್ಮಾಣ ವೇಳೆ 10  ಇಂಚಿನಷ್ಟು ಕಿಟಕಿ ಸರ್ಜಾ‌ ಹೆಚ್ಚಾಗಿ ನಿರ್ಮಿಸಿದ್ದರು. ಇದೇ ಕಾರಣಕ್ಕೆಆರೋಪಿಗಳೊಂದಿಗೆ ಮಾತಿನ ಚಕಮಕಿ ನಡೆದಿದೆ. ಕಿಟಕಿ ನಿರ್ಮಾಣದಿಂದ ಓಡಾಡೋಕೆ ತೊಂದರೆಯಾಗ್ತಿದೆ ಎಂದು ಪಕ್ಕದಮನೆ ರೋಷನ್, ನಬಿವುಲ್ಲಾ, ಜಮೀರ್, ಫಿರ್ದೋಸ್‌ ತಕರಾರು ತೆಗೆದಿದ್ದಾರೆ.

ಇಂದಿನಿಂದ ಮೂರು ದಿನ ಮತ್ತೆ ಮಳೆ; ಹವಾಮಾನ ಇಲಾಖೆ ಮುನ್ಸೂಚನೆ

ಮೊದಲು ಮಾತಿನ ಚಕಮಕಿ ನಡೆದಿದೆ. ಬಳಿಕ ವಿಕೋಪಕ್ಕೆ ತಿರುಗಿ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಈ ವೇಳೆ ಆರೋಪಿಗಳು ಮುಜುಮಿಲ್ ಪಾಷಾ ಮೇಲೆ ಗಂಭೀರವಾಗಿ ಹಲ್ಲೆ ನಡೆಸಿದ ಪರಿಣಾಮ ಅಸುನೀಗಿದ್ದಾರೆ. ಘಟನೆ ನಡೆದ ಬಳಿಕ ಆರೋಪಿಗಳು ಕುಟುಂಬ ಸಮೇತ ಬಡಾವಣೆಯಿಂದ ನಾಪತ್ತೆಯಾಗಿದ್ದಾರೆ. ಸದ್ಯ ಈ ಘಟನೆ ಸಂಬಂಧ ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

Follow Us:
Download App:
  • android
  • ios