ಹೆಂಡತಿ ಮೇಲಿನ ಕೋಪಕ್ಕೆ ಅವಳಿ ಮಕ್ಕಳನ್ನು ಕತ್ತುಹಿಸುಕಿ ಕೊಂದ ಪಾಪಿ ತಂದೆ
ಹೆಂಡತಿಯ ಮೇಲಿನ ಕೋಪಕ್ಕೆ ತಾನೇ ಜನ್ಮ ನೀಡಿದ ಇಬ್ಬರು ಅವಳಿ ಮಕ್ಕಳನ್ನು ತಂದೆಯೇ ಉಸಿರುಗಟ್ಟಿಸಿ ಕೊಲೆ ಮಾಡಿರುವ ದುರ್ಘಟನೆ ದಾವಣಗೆರೆಯಲ್ಲಿ ನಡೆದಿದೆ.
ದಾವಣಗೆರೆ (ಜೂ.1): ಗಂಡ-ಹೆಂಡತಿ ಜಗದಳಲ್ಲಿ ಕೂಸು ಬಡವಾಯ್ತು ಎನ್ನುವುದು ಗಾದೆಯಾಗಿದೆ. ಆದರೆ, ಇಲ್ಲಿ ತಂದೆ-ತಾಯಿ ಜಗಳದಲ್ಲಿ ಕೂಸುಗಳು ಬಡವಾಗುವ ಬದಲು ಪ್ರಾಣವನ್ನೇ ಕಳೆದುಕೊಂಡಿವೆ. ಅದು ಕೂಡ ಜನ್ಮ ಕೊಟ್ಟ ತಂದೆಯೇ ತನ್ನಿಬ್ಬರು ಅವಳಿ ಮಕ್ಕಳ ಕತ್ತು ಹಿಸುಕಿ ಕೊಲೆ ಮಾಡಿರುವ ದುರ್ಘಟನೆ ದಾವಣಗೆರೆಯಲ್ಲಿ ನಡೆದಿದೆ.
ಜೀವನದಲ್ಲಿ ಸಂಸಾರ ಎಂಬ ಬಂಡಿಯನ್ನು ಗಂಡ- ಹೆಂಡತಿ ಸೇರಿ ಎರಡು ಎತ್ತುಗಳಂತೆ ಸರಿಸಮಾನವಾಗಿ ಎಳೆದುಕೊಂಡು ಹೋಗಬೇಕು. ಇಲ್ಲವೆಂದರೆ ಎತ್ತು ಏರಿಗೆ, ಕೋಣ ನೀರಿಗೆ ಎಂಬಂತೆ ಇಬ್ಬರೂ ಒಂದೊಂದು ದಿಕ್ಕಿಗೆ ಎಳೆದುಕೊಂಡು ಹೋದರೆ ಕೂಸು ಬಡವಾಯ್ತು ಎನ್ನುವಂತೆ ಮಕ್ಕಳು ಅನಾಥವಾಗುತ್ತವೆ. ಆದರೆ, ಇಲ್ಲಿ ಗಂಡ-ಹೆಂಡತಿ ಜಗರಳಲ್ಲಿ ಕೂಸು ಬಡವಾಗುವ ಬದಲು ಪ್ರಾಣವನ್ನೇ ಕಳೆದುಕೊಂಡಿವೆ. ಅದು ಕೂಡ ಜನ್ಮ ಕೊಟ್ಟ ತಂದೆಯೇ ತನ್ನಿಬ್ಬರು ಅವಳಿ ಮಕ್ಕಳ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ಅಕ್ರಮ ಸಂಬಂಧ ಗೊತ್ತಿದ್ರೂ ಸುಮ್ಮನಿದ್ದ ಗಂಡನನ್ನೇ ಕೊಲ್ಲಿಸಿದ ಪತ್ನಿ: ಜಾನಪದ ಕಲಾವಿದನ ಮಕ್ಕಳು ಅನಾಥ
ಕಾರ್ಗಿಲ್ ಫ್ಯಾಕ್ಟರಿ ಇಂಜಿನಿಯರ್ ಆಗಿದ್ರೂ ಕೊಲೆ ಮಾಡಿದ: ಅದ್ವೈತ್ (04) ಹಾಗೂ ಅನ್ವೀತ್ (04) ಸಾವನ್ನಪ್ಪಿದ ದುರ್ದೈವಿ ಮಕ್ಕಳಾಗಿದ್ದಾರೆ. ಕೌಟುಂಬಿಕ ಕಲಹದ ಬೇಸತ್ತು ಇಬ್ಬರು ಅವಳಿ ಮಕ್ಕಳನ್ನು ಉಸಿರು ಗಟ್ಟಿಸಿ ಕೊಲೆ ಮಾಡಿದ ಪಾಪಿ ತಂದೆ ಅಮರ್ ಕಿತ್ತೂರು (35) ಆಗಿದ್ದಾನೆ. ತನ್ನ ಇಬ್ಬರು ಮಕ್ಕಳನ್ನು ಮನೆಯಲ್ಲಿಯೇ ಬಿಟ್ಟು ಪತ್ನಿ ಜಗಳ ಮಾಡಿಕೊಂಡು ತವರಿಗೆ ಹೋಗಿದ್ದರಿಂದ ಕೋಪಗೊಂಡ ಪತಿರಾಯ ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ. ಕೊಲೆ ಆರೋಪಿ ತಂದೆ ದಾವಣಗೆರೆ ನಗರದ ಆಂಜನೇಯ ಮಿಲ್ ಬಡಾವಣೆಯ ನಿವಾಸಿ ಆಗಿದ್ದಾರೆ. ಆದರೆ, ಈತ ಮೂಲತಃ ಗೋಕಾಕ ನಿವಾಸಿ ಆಗಿದ್ದಾನೆ. ಹರಿಹರದ ಕಾರ್ಗಿಲ್ ಪ್ಯಾಕ್ಟರಿಯಲ್ಲಿ ಕೆಮಿಕಲ್ ಇಂಜಿನೀಯರ್ ಆಗಿದ್ದರಿಂದ ದಾವಣಗೆರೆಯಲ್ಲಿ ಬಂದು ನೆಲೆಸಿದ್ದನು.
ಘಟನೆ ವಿವರ ಹೀಗಿದೆ: ಮನೆಯಲ್ಲಿ ಮಕ್ಕಳು ಆಟವಾಡಿಕೊಂಡು ಇದ್ದಾಗ ಮನೆಯಲ್ಲಿ ಅಮ್ಮ ಇಲ್ಲದ್ದರಿಂದ ನಿಮ್ಮನ್ನು ಹೊರಗೆ ಕರೆದುಕೊಂಡು ಹೋಗುವುದಾಗಿ ಹೇಳಿ ತನ್ನಿಬ್ಬರು ಮಕ್ಕಳನ್ನು ಕಾರಿಸನಲ್ಲಿ ಕೂರಿಸಿಕೊಂಡು ನಿನ್ನೆ ರಾತ್ರಿ ಹಾವೇರಿ ಜಿಲ್ಲೆಯ ರಾಣೆಬೆನ್ನೂರ ತಾಲೂಕಿನ ಚಳಗೆರೆ ಟೋಲ್ ಗೇಟ್ ಬಳಿ ಬಂದಿದ್ದಾನೆ. ಟೋಲ್ ಗೇಟ್‌ನ ಸ್ವಲ್ಪ ದೂರದಲ್ಲಿ ಕಾರು ನಿಲ್ಲಿಸಿ ತನ್ನ ಇಬ್ಬರೂ ಮಕ್ಕಳ ಬಾಯಿಗೆ ಪ್ಲಾಸ್ಟರ್ ಟೇಪ್‌ನಿಂದ ಸುತ್ತಿದ್ದಾನೆ. ನಂತರ, ಮಕ್ಕಳ ಕತ್ತನ್ನು ಹಿಸುಕಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಕೊಲೆ ಮಾಡಿ ಮಕ್ಕಳ ಶವವನ್ನ ಕಾರಿನಲ್ಲಿಯೇ ತಂದಿದ್ದನು.
ನಮ್ಮನ್ನ ಬಳಸ್ಕೊಂಡು ಅಕ್ರಮವಾಗಿ ಹಣ ಗಳಿಸಿರೋ ಜನಾರ್ಧರೆಡ್ಡಿ, ನಮಗೇ ರಣಹೇಡಿಗಳು ಅಂತಾನೆ!
ಪೊಲೀಸರಿಗೆ ಮಾಹಿತಿ ನೀಡಿದ ಸ್ಥಳೀಯರು: ಇನ್ನು ಸಂಜೆ ವೇಳೆ ಮಕ್ಕಳನ್ನು ಕಾರಿನಲ್ಲಿ ಕರೆದುಕೊಂಡು ಹೋಗಿದ್ದ ತಂದೆ ರಾತ್ರಿ ವೇಳೆ ಮಕ್ಕಳ ಶವವನ್ನು ಕಾರಿನಲ್ಲಿ ವಾಪಸ್ ತಂದಿದ್ದರಿಂದ ಸ್ಥಳೀಯರು ನೋಡಿ ಅನುಮಾನ ವ್ಯಕ್ತಪಡಿಸಿದ್ದಾರೆ. ಈ ವೇಳೆ ಒಬ್ಬೊಬ್ಬರಿಗೆ ತಲಾ ಒಂದೊಂದು ಹೇಳಿಕೆ ನೀಡುತ್ತಾ ಜನರನ್ನು ಯಾಮಾರಿಸಿ ಕೊಲೆ ಆರೋಪದಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಆದರೆ, ಮಕ್ಕಳ ಸಾವಿನ ಬಗ್ಗೆ ಸಂಶಯ ಬಂದು ಸ್ಥಳೀಯರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ದಾವಣಗೆರೆ ನಗರದ ವಿದ್ಯಾನಗರ ಪೊಲೀಸರು ತಂದೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ತಾನೇ ಮಕ್ಕಳನ್ನು ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ನಂತರ ಕುಟುಂಬದ ಇತರೆ ಸದಸ್ಯರಿಗೆ ತಿಳಿಸಿದ್ದಾರೆ.