* ಕುಟುಂಬವನ್ನೇ ಬಲಿ ಪಡೆದ ಕೊರೊನಾ * ಮನೆಯೊಡತಿ ಕೊರೊನಾಗೆ ಬಲಿ ಖಿನ್ನತೆಯಿಂದ ಕುಟುಂಬದ 3ಜನ ಆತ್ಮಹತ್ಯೆ *ಆನೇಕಲ್ ತಾಲೂಕಿನ ಅತ್ತಿಬೆಲೆಯ ಅಂಬೇಡ್ಕರ್ ಕಲೋನಿಯಲ್ಲಿ ಘಟನೆ * ಸತೀಶ್(40) ಮೋನಿಷ್(19) ಹಾಗೂ (17) ನೇಣಿಗೆ ಶರಣಾದ ದುರ್ದೈವಿಗಳು

ಆನೇಕಲ್(ಜೂ.  30) ಇಡೀ ಕುಟುಂಬವನ್ನೇ ಕೊರೋನಾ ಬಲಿಪಡೆದಿದೆ.  ಮನೆಯೊಡತಿ ಕೊರೊನಾಗೆ ಬಲಿಯಾದ್ದರಿಂದ ಖಿನ್ನತೆಗೆ  ಒಳಗಾಗಿ ಕುಟುಂಬದ ಇನ್ನುಳಿದ ಮೂವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

ಅನೇಕಲ್ ತಾಲೂಕಿನ ಅತ್ತಿಬೆಲೆಯ ಅಂಬೇಡ್ಕರ್ ಕಲೋನಿಯಿಂದ ಪ್ರಕರಣ ವರದಿಯಾಗಿದೆ. ಸತೀಶ್(40) ಮೋನಿಷ್(19) ಹಾಗೂ (17) ನೇಣಿಗೆ ಶರಣಾದ ದುರ್ದೈವಿಗಳು. ಕಳೆದ ತಿಂಗಳು ಮನೆಯೊಡತಿ ಕೊರೊನಾಗೆ ಬಲಿಯಾಗಿದ್ದರು.

ಚಿಕ್ಕಮಗಳೂರು; ಅಕ್ರಮ ಸಂಬಂಧ ಪ್ರಶ್ನೆ ಮಾಡಿದ ಪತ್ನಿಯನ್ನು ನೀರಲ್ಲಿ ಮುಳುಗಿಸಿದ

ಅಂದಿನಿಂದ ಖಿನ್ನತೆಗೊಳಗಾಗಿದ್ದ ಮೂವರು ಸಂಕಷ್ಟ  ಅನುಭವಿಸುತ್ತಿದ್ದರು.  ಮನೆಯಿಂದ ಹೊರಬರಾದ ಹಿನ್ನೆಲೆ ಅಕ್ಕಪಕ್ಕದ ಮನೆಯವರು ಗಮನಿಸಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.