Asianet Suvarna News Asianet Suvarna News

ಕುಟುಂಬ ಸದಸ್ಯರಿಂದಲೇ ಇಬ್ಬರು ಮಹಿಳೆಯರ ಮೇಲೆ ಬಡಿಗೆಯಿಂದ ಭೀಕರ ಹಲ್ಲೆ!

* ಕುಟುಂಬ ಸದಸ್ಯರಿಂದಲೇ ಇಬ್ಬರು ಮಹಿಳೆಯರ ಮೇಲೆ ಬಡಿಗೆಯಿಂದ ಭೀಕರ ಹಲ್ಲೆ

* ಸೋದರ ಸಂಬಂಧಿಗಳಾಗಿರುವ ಬುಡಕಟ್ಟು ಸಮುದಾಯಕ್ಕೆ ಸೇರಿದ ಮಹಿಳೆಯರು

* ಹಲ್ಲೆ ವಿಡಿಯೋ ವಿಡಿಯೋದಲ್ಲಿ ಸೆರೆ

Family Member Killed Two Woman In Bhopal pod
Author
Bangalore, First Published Jul 5, 2021, 10:13 AM IST
  • Facebook
  • Twitter
  • Whatsapp

ಭೋಪಾಲ್‌(ಜು.05): ಕ್ಷುಲ್ಲಕ ಕಾರಣಕ್ಕೆ ಇಬ್ಬರು ಮಹಿಳೆಯರ ಮೇಲೆ ಕುಟುಂಬ ಸದಸ್ಯರೇ ಬಡಿಗೆಯಿಂದ ಥಳಿಸಿ ಹಲ್ಲೆ ನಡೆಸಿರುವ ಅಮಾನವೀಯ ಘಟನೆಯೊಂದು ಮಧ್ಯಪ್ರದೇಶದ ಧಾರ್‌ ಜಿಲ್ಲೆಯ ಪಿಪಲ್ವಾ ಗ್ರಾಮದಲ್ಲಿ ನಡೆದಿದೆ. ಈ ಭೀಕರ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದ್ದು, ಎಲ್ಲರನ್ನೂ ಬೆಚ್ಚಿಬೀಳಿಸಿದೆ.

ಸೋದರ ಸಂಬಂಧಿಗಳಾಗಿರುವ ಬುಡಕಟ್ಟು ಸಮುದಾಯಕ್ಕೆ ಸೇರಿದ ಮಹಿಳೆಯರು ತಮ್ಮ ತಾಯಿಯ ಸಂಬಂಧಿಕರ ಜೊತೆ ಮಾತನಾಡುತ್ತಿದ್ದರು ಎಂಬ ಕಾರಣಕ್ಕೆ ಸಿಟ್ಟಿಗೆದ್ದ ಕುಟುಂಬ ಸದಸ್ಯರು ಸಾರ್ವಜನಿಕವಾಗಿ ಬಡಿಗೆಯಿಂದ ಹಲ್ಲೆ ನಡೆಸಿದ್ದಾರೆ. ಹಲವು ಮಂದಿ ಈ ಕೃತ್ಯವನ್ನು ಕಣ್ಣಾರೆ ಕಂಡರೂ ತಡೆಯುವ ಯತ್ನವನ್ನು ಮಾಡಿಲ್ಲ. ಜು.22ರಂದು ನಡೆದ ಈ ಘಟನೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ಪೊಲೀಸರು ಘಟನೆಯಲ್ಲಿ ಭಾಗಿಯಾದ ಏಳು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ತಪ್ಪಿಸಿಕೊಳ್ಳಲು ಯತ್ನಿಸಿದ ಓರ್ವ ಮಹಿಳೆಯ ಜಡೆಯನ್ನು ಹಿಡಿದು ಎಳೆದುಕೊಂಡು ಬಂದು ಮನಸೋ ಇಚ್ಛೆ ಥಳಿಸಲಾಗಿದೆ. ಇದರಿಂದ ಆಕೆ ನೋವು ತಾಳಲಾರದೇ ಅರಚಾಡಿದ್ದಾಳೆ. ಮಹಿಳೆಯ ತಾಯಿ ಕೂಡ ಹಲ್ಲೆಯಲ್ಲಿ ಭಾಗಿಯಾಗಿದ್ದು, ಚಪ್ಪಲಿಯಿಂದ ಮಗಳ ಮೇಲೆ ಹಲ್ಲೆ ನಡೆಸಿರುವ ದೃಶ್ಯ ಇನ್ನೊಂದು ವಿಡಿಯೋದಲ್ಲಿ ಸೆರೆಯಾಗಿದೆ.

Follow Us:
Download App:
  • android
  • ios