Asianet Suvarna News Asianet Suvarna News

ರೌಡಿ ಪಟಾಲಂ ಕಟ್ಟಿಕೊಂಡು ಬಿಲ್ಡರ್‌ಗಳಿಂದ ಹಣ ವಸೂಲಿ; ಸಿಸಿಬಿ ಪೊಲೀಸರಿಂದ ನಕಲಿ ಆರ್‌ಟಿಐ ಕಾರ್ಯಕರ್ತನ ಬಂಧನ!

ರೌಡಿಶೀಟರ್‌ಗಳ ಗ್ಯಾಂಗ್ ಕಟ್ಟಿಕೊಂಡು ದೊಡ್ಡ ದೊಡ್ಡ ಬಿಲ್ಡರ್‌ಗಳ ಬಳಿ ಹಣ ವಸೂಲಿ ಮಾಡುತ್ತಿದ್ದ ನಕಲಿ ಆರ್‌ಟಿಐ ಕಾರ್ಯಕರ್ತನನ್ನ ಮಾಗಡಿ ರೋಡಿ ಪೊಲೀಸರು ಬಂಧಿಸಿದ್ದಾರೆ.
 

Extortion of money from builders, fake RTI activist Deepak gowda arrested in magadi at bengaluru rav
Author
First Published Feb 1, 2024, 11:45 AM IST

ಮಾಗಡಿ (ಫೆ.1): ರೌಡಿಶೀಟರ್‌ಗಳ ಗ್ಯಾಂಗ್ ಕಟ್ಟಿಕೊಂಡು ದೊಡ್ಡ ದೊಡ್ಡ ಬಿಲ್ಡರ್‌ಗಳ ಬಳಿ ಹಣ ವಸೂಲಿ ಮಾಡುತ್ತಿದ್ದ ನಕಲಿ ಆರ್‌ಟಿಐ ಕಾರ್ಯಕರ್ತನನ್ನ ಮಾಗಡಿ ರೋಡಿ ಪೊಲೀಸರು ಬಂಧಿಸಿದ್ದಾರೆ.
 
ದೀಪಕ್ ಗೌಡ ಮತ್ತು ರೌಡಿಶೀಟರ್ ರಕ್ಷಿತ್ ಬಂಧಿತ ಆರೋಪಿಗಳು. ಇನ್ನೋರ್ವ ಆರೋಪಿ ಶ್ರೀರಾಂಪುರ ಪೊಲೀಸ್ ಠಾಣೆ ರೌಡಿಶೀಟರ್ ಅಜಯ್ ಕುಮಾರ್ ಎಸ್ಕೇಪ್ ಆಗಿದ್ದಾನೆ.

 ಜೈಹಿಂದ್ ಸಂಘಟನೆ ಮುಖ್ಯಸ್ಥ ಎಂದು ಹೇಳಿಕೊಳ್ತಿದ್ದ ನಕಲಿ RTI ಕಾರ್ಯಕರ್ತ ದೀಪಕ್ ಗೌಡ. ಇನ್ನು ರಕ್ಷಿತ್ ತಾವರೆಕೆರೆ ಪೊಲೀಸ್ ಠಾಣೆ ವ್ಯಾಪ್ತಿಯ ರೌಡಿಶೀಟರ್ ಆಗಿದ್ದು ಈ ಹಿಂದೆ RTI ಕಾರ್ಯಕರ್ತ ವೆಂಕಟೇಶ್ ಎಂಬುವರ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದವನು.  ಇಂತಹ ರೌಡಿ ಪಟಾಲಂ ಕಟ್ಟಿಕೊಂಡು ನಗರದ ಅನೇಕ ಬಿಲ್ಡರ್‌ಗಳಿಗೆ ಬೆದರಿಕೆ ಹಾಕಿ ಹಣ ವಸೂಲಿ ಮಾಡುವ ಕಾಯಕ ಮಾಡಿಕೊಂಡಿದ್ದ ದೀಪಕ್ ಗೌಡ. ಬಿಲ್ಡಿಂಗ್ ಸರಿ ಇಲ್ಲ, ರೂಲ್ಸ್ ಪ್ರಕಾರ ಕಟ್ಟಿಲ್ಲ, ಇದನ್ನೆಲ್ಲ ಬಹಿರಂಗ ಮಾಡ್ತೀವಿ ಅಂತ ಬೆದರಿಸಿ ಬಿಲ್ಡರ್‌ಗಳಿಂದ ಹಣಕ್ಕೆ ಬೇಡಿಕೆ ಇಡ್ತಿದ್ದ ಖದೀಮ. 

ಅಂಬೇಡ್ಕರ್ ಭಾವಚಿತ್ರದ ಪೂಜೆಗೆ ಒಲ್ಲೆ ಎಂದ ವಿದ್ಯಾರ್ಥಿ ಮೇಲೆ ಮಾರಣಾಂತಿಕ ಹಲ್ಲೆ!

ಅದೇ ರೀತಿ ವೆಸ್ಟ್ ಆಫ್ ಕಾರ್ಡ್ ರಸ್ತೆಯ ಬಿಂದು ವೆಂಚರ್ಸ್ ಮಾಲೀಕರಿಗೆ ಬೆದರಿಸಿ 80 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ಗ್ಯಾಂಗ್. ಈ ಬಗ್ಗೆ ದೂರು ದಾಖಲಾಗಿತ್ತು. ಆರೋಪಿಗಳ ಮಾಹಿತಿ ಕಲೆಹಾಕಿದ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಸದ್ಯ ಮಾಗಡಿ ರಸ್ತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.

Follow Us:
Download App:
  • android
  • ios