Asianet Suvarna News Asianet Suvarna News

ಬೆಂಗಳೂರು: ಲೈಂಗಿಕ ಕ್ರಿಯೆಗೆ ಆಹ್ವಾನಿಸಿ ವ್ಯಕ್ತಿಯಿಂದ ಹಣ ಸುಲಿಗೆ

ವೈಟ್‌ಫೀಲ್ಡ್‌ ಸಮೀಪ ನಿವಾಸಿ ಸಂತ್ರಸ್ತನಾಗಿದ್ದು, ಇತ್ತೀಚೆಗೆ ಜೆ.ಪಿ.ನಗರದ 5ನೇ ಹಂತದ ಮನೆಗೆ ಕರೆಸಿಕೊಂಡು ಆರೋಪಿಗಳು ಈ ಕೃತ್ಯ ಎಸಗಿದ್ದಾರೆ. ಈ ಬಗ್ಗೆ ಸಂತ್ರಸ್ತ ನೀಡಿದ ದೂರಿನ ಮೇರೆಗೆ ಎಫ್‌ಐಆರ್‌ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ತನಿಖೆ ಆರಂಭಿಸಿದ ಪೊಲೀಸರು 

Extorting Money From Person by Inviting Them for Sex in Bengaluru grg
Author
First Published Jun 1, 2023, 6:08 AM IST

ಬೆಂಗಳೂರು(ಜೂ.01):  ತನ್ನ ಪತಿ ದುಬೈನಲ್ಲಿದ್ದಾನೆ ಎಂದು ಹೇಳಿ ಮನೆಗೆ ಲೈಂಗಿಕ ಕ್ರಿಯೆಗೆ ಆಹ್ವಾನಿಸಿ ವ್ಯಕ್ತಿಯೊಬ್ಬನಿಂದ ಮಹಿಳೆ ಹಾಗೂ ಆಕೆಯ ತಂಡ ಹಣ ಸುಲಿಗೆ ಮಾಡಿರುವ ಘಟನೆ ಪುಟ್ಟೇನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ವೈಟ್‌ಫೀಲ್ಡ್‌ ಸಮೀಪ ನಿವಾಸಿ ಸಂತ್ರಸ್ತನಾಗಿದ್ದು, ಇತ್ತೀಚೆಗೆ ಜೆ.ಪಿ.ನಗರದ 5ನೇ ಹಂತದ ಮನೆಗೆ ಕರೆಸಿಕೊಂಡು ಆರೋಪಿಗಳು ಈ ಕೃತ್ಯ ಎಸಗಿದ್ದಾರೆ. ಈ ಬಗ್ಗೆ ಸಂತ್ರಸ್ತ ನೀಡಿದ ದೂರಿನ ಮೇರೆಗೆ ಎಫ್‌ಐಆರ್‌ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ತನಿಖೆ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.

ಕೆಲ ದಿನಗಳ ಹಿಂದೆ ಡೇಟಿಂಗ್‌ ಆ್ಯಪ್‌ ಮೂಲಕ ಸಂತ್ರಸ್ತನಿಗೆ ಆರೋಪಿ ಮೆಹರಾ ಹೆಸರಿನ ಮಹಿಳೆ ಪರಿಚಯವಾಗಿದೆ. ಆಗ ಪರಸ್ಪರ ಮೊಬೈಲ್‌ ಸಂಖ್ಯೆಗಳು ವಿನಿಮಿಯವಾಗಿದ್ದು, ಬಳಿಕ ವಾಟ್ಸ್‌ ಆಪ್‌ ಚಾಟಿಂಗ್‌ ಶುರುವಾಗಿದೆ. ಆಗ ‘ನನ್ನ ಗಂಡ ದುಬೈನಲ್ಲಿದ್ದಾನೆ. ನಾನು ಸೆಕ್ಸ್‌ ಮಾಡಲು ಸಂಗಾತಿ ಹುಡುಕಾಡುತ್ತಿದ್ದೇನೆ’ ಎಂದಿದ್ದಾಳೆ. ಈ ಮಾತಿನಿಂದ ವಿಶ್ವಾಸಗೊಂಡ ಸಂತ್ರಸ್ತ, ಆರೋಪಿ ಜತೆ ಲೈಂಗಿಕ ಕ್ರಿಯೆ ನಡೆಸಲು ಇಚ್ಛೆ ವ್ಯಕ್ತಪಡಿಸಿದ್ದಾನೆ. ಆಗ ಆತನಿಂದ ಫೋಟೋ ಪಡೆದ ಆಕೆ, ತನ್ನ ಮನೆಯ ವಿಳಾಸ ಲೋಕೇಷನ್‌ ಶೇರ್‌ ಮಾಡಿದ್ದಾಳೆ. ಅಂತೆಯೇ ಜೆ.ಪಿ.ನಗರ 5ನೇ ಹಂತದಲ್ಲಿರುವ ಸಂತ್ರಸ್ತ ತೆರಳಿದ್ದಾನೆ.

ದೂಧಗಂಗಾದಲ್ಲಿ ಈಜಲು ಹೋಗಿ ಯುವಕ ಸಾವು: ಕಲ್ಲುಕ್ವಾರಿಯಲ್ಲಿ ಇಬ್ಬರು ಬಾಲಕರ ದುರ್ಮರಣ

ಆ ವೇಳೆ ಏಕಾಏಕಿ ಆ ಮನೆಗೆ ನುಗ್ಗಿದ ಮೂವರು ಅಪರಿಚಿತರು, ನಂತರ ಸಂತ್ರಸ್ತನನ್ನು ಬೆಡ್‌ ರೂಂನಲ್ಲಿ ಕೂಡಿ ಹಾಕಿ ಹಲ್ಲೆ ನಡೆಸಿದ್ದಾರೆ. ನಿನ್ನನ್ನು ಬೆತ್ತಲೆಗೊಳಿಸಿ ರಸ್ತೆಯಲ್ಲಿ ಓಡಾಡಿಸುತ್ತೇವೆ. ನಿನ್ನನ್ನು ಮಸೀದಿಗೆ ಕರೆದುಕೊಂಡು ಹೋಗಿ ಮುಂಜಿ ಮಾಡಿಸಿ ಮೆಹರಳೊಂದಿಗೆ ಮದುವೆ ಮಾಡಿಸುತ್ತೇವೆ ಎಂದು ಬೆದರಿಸಿ .3 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದಾರೆ. ಕೊನೆಗೆ .21 ಸಾವಿರವನ್ನು ಫೋನ್‌ ಪೇ ಮೂಲಕ ತಮ್ಮ ಖಾತೆಗೆ ವರ್ಗಾಯಿಸಿಕೊಂಡು ಸಂತ್ರಸ್ತನನ್ನು ಆರೋಪಿಗಳು ಬಿಟ್ಟು ಕಳುಹಿಸಿದ್ದಾರೆ ಎಂದು ಪೊಲೀಸರು ವಿವರಿಸಿದ್ದಾರೆ.

Follow Us:
Download App:
  • android
  • ios