Asianet Suvarna News Asianet Suvarna News

ಮತ್ತೊಬ್ಬಳು ಇಂಜಿನಿಯರಿಂಗ್ ವಿದ್ಯಾರ್ಥಿನಿ ರೈಲಿಗೆ ಸಿಲುಕಿ ಗಂಭೀರ ಗಾಯ; ಆತ್ಮಹತ್ಯೆ ಯತ್ನ ಶಂಕೆ?

ಇಂಜಿನಿಯರಿಂಗ್ ವಿದ್ಯಾರ್ಥಿಯೋರ್ವಳು ರೈಲಿಗೆ ಸಿಲುಕಿ ಗಂಭೀರವಾಗಿ ಗಾಯಗೊಂಡ ಘಟನೆ ಮಂಡ್ಯ ನಗರದ ಕನಕ ಭವನ ಹಿಂಭಾಗದ ರೈಲ್ವೆ ಟ್ರ್ಯಾಕ್‌ನಲ್ಲಿ ನಡೆದಿದೆ. ಲಾವಣ್ಯ(18), ಗಾಯಗೊಂಡ ವಿದ್ಯಾರ್ಥಿನಿ. ಆತ್ಮಹತ್ಯೆಗೆ ಯತ್ನಿಸಿರುವ ಶಂಕೆಯಿದೆ.

engineering student seriously injured after hit by a train at mandya rav
Author
First Published Jun 21, 2024, 4:06 PM IST

ಮಂಡ್ಯ (ಜೂ.21): ಇಂಜಿನಿಯರಿಂಗ್ ವಿದ್ಯಾರ್ಥಿಯೋರ್ವಳು ರೈಲಿಗೆ ಸಿಲುಕಿ ಗಂಭೀರವಾಗಿ ಗಾಯಗೊಂಡ ಘಟನೆ ಮಂಡ್ಯ ನಗರದ ಕನಕ ಭವನ ಹಿಂಭಾಗದ ರೈಲ್ವೆ ಟ್ರ್ಯಾಕ್‌ನಲ್ಲಿ ನಡೆದಿದೆ.

ಲಾವಣ್ಯ(18), ಗಾಯಗೊಂಡ ವಿದ್ಯಾರ್ಥಿನಿ. ಆತ್ಮಹತ್ಯೆಗೆ ಯತ್ನಿಸಿರುವ ಶಂಕೆಯಿದೆ. ರಕ್ತಸಿಕ್ತಗೊಂಡು ಬಿದ್ದಿದ್ದ ವಿದ್ಯಾರ್ಥಿನಿಯನ್ನ ರೈಲ್ವೆ ಪೊಲೀಸರೇ ಮೈಸೂರಿನ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಚಿಕಿತ್ಸೆ ಮುಂದುವರಿದಿದ್ದು ವಿದ್ಯಾರ್ಥಿನಿ ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದಾಳೆ.

ಮಂಡ್ಯದ ಪಿಇಎಸ್ ಇಂಜಿನಿಯರಿಂಗ್ ಕಾಲೇಜಿಲ್ಲಿ ಬಿಇ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ. ಇಂದು ಬೆಳಗ್ಗೆ ಕಾಲೇಜಿಗೆ ಬಂದಿದ್ದಾಳೆ. ಮಧ್ಯಾಹ್ನದ ವೇಳೆಗೆ ರೈಲಿಗೆ ಸಿಲುಕಿ ವಿದ್ಯಾರ್ಥಿನಿ ಸ್ಥಿತಿ ಗಂಭೀರವಾಗಿತ್ತು. ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನಿಸಿರಬಹುದು ಎಂದು ಶಂಕಿಸಲಾಗಿದ್ದು. ಘಟನೆ ಸಂಬಂಧ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

 

Big breaking: ಹಾಸನದಲ್ಲಿ ಹಾಡಹಗಲೇ ಗುಂಡು ಹಾರಿಸಿ ಉದ್ಯಮಿಗಳ ಸಾವು; ಒಂದು ಕೊಲೆ, ಮತ್ತೊಂದು ಆತ್ಮಹತ್ಯೆ

ತುಮಕೂರಿನಲ್ಲೂ ವಿದ್ಯಾರ್ಥಿನಿ ಆತ್ಮಹತ್ಯೆ:

ತುಮಕೂರಿನ ತಿಪಟೂರು ರೈಲ್ವೆ ನಿಲ್ದಾಣದಲ್ಲೂ ಕಾಲೇಜು ವಿದ್ಯಾರ್ಥಿನಿ ರೈಲಿಗೆ ಸಿಲುಕಿ ಪ್ರಾಣಬಿಟ್ಟಿದ್ದಳು. ವರ್ಷಿಣಿ ಟಿಎಸ್ 19 ವರ್ಷದ ಮುಗ್ಧ ವಿದ್ಯಾರ್ಥಿನಿ ಪ್ರಾಣ ಕಳೆದುಕೊಂಡಳು. ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲ್ಲೂಕಿನ ದೇವರಹಳ್ಳಿ ನಿವಾಸಿ ಸುರೇಶ್ ಎಂಬುವರ ಪುತ್ರಿಯಾಗಿದ್ದ ವರ್ಷಿಣಿ ನಗರದ ಕಲ್ಪತರು ಕಾಲೇಜಿನಲ್ಲಿ ಬಿ ಎ ವ್ಯಾಸಂಗ ಮಾಡುತ್ತಿದ್ದಳು. ಆದರೆ ಇದಕ್ಕಿದ್ದಂತೆ ರೈಲಿಗೆ ಸಿಲುಕಿ ಪ್ರಾಣ ಕಳೆದುಕೊಂಡಳು. ಇದೀಗ ಮಂಡ್ಯ ವಿದ್ಯಾರ್ಥಿನಿಯೂ ರೈಲಿಗೆ ಸಿಲುಕಿ ಗಂಭೀರ ಗಾಯಗೊಂಡು ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದಾಳೆ. 

Latest Videos
Follow Us:
Download App:
  • android
  • ios