* ತೆಂಗಿನಕಾಯಿ ಕೀಳಲು ಬಂದವ ಮಾಡಿದ ಖತರ್‌ ನಾಕ್ ಕೆಲಸ* ಮಹಿಳೆಯ ಸರ ಕಿತ್ತು ಪರಾರಿಯಾಗಿದ್ದ* ತಮಿಳುನಾಡಿನಲ್ಲಿ ಅಡಗಿದ್ದವನ ಸೆರೆ ಹಿಡಿದು ಕರೆದು ತಂದ್ರು

ವರದಿ : ಚೇತನ್ ಮಹಾದೇವ್, ಏಷ್ಯಾನೆಟ್ ಸುವರ್ಣನ್ಯೂಸ್

ಬೆಂಗಳೂರು(ಮಾ. 29) ತೆಂಗಿನಕಾಯಿ (Coconut) ಕೀಳೋಕೆ ಬಂದವನ್ನು ವೃದ್ಧೆಯ ಸರಕಿತ್ತು ಮಲ್ಲೇಶ್ವರಂ ಪೊಲೀಸರ ಅತಿಥಿ ಆಗಿದ್ದಾನೆ.‌ ತಮಿಳುನಾಡು (Tamilnadu) ಕೃಷ್ಣಗಿರಿ ಮೂಲದ ಸಭಾಪತಿ ಬಂಧಿತ‌ ಆರೋಪಿಯಾಗಿದ್ದು ಈತನಿಂದ 60 ಗ್ರಾಂ ಮೌಲ್ಯದ ಚಿನ್ನದ (Gold) ಸರವನ್ನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಕಳೆದ ಹತ್ತು ವರ್ಷಗಳಿಂದ ನಗರದಲ್ಲಿ ವಾಸವಾಗಿದ್ದ. ಗಾರೆಗೆಲಸ, ತೆಂಗಿನಕಾಯಿ‌ ಕೀಳುವುದು ಸೇರಿದಂತೆ ಇನ್ನಿತರ ಸಣ್ಣ-ಪುಟ್ಟ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ. ಮಲ್ಲೇಶ್ವರ (Bengaluru Malleshwaram)ನಿವಾಸಿಯಾಗಿರುವ ವೃದ್ದೆ ನಳಿನಾ ನಾಗರಾಜ್ ಗೆ ಆರೋಪಿಯ ಪರಿಚಯವಾಗಿತ್ತು. ಮೂರು ತಿಂಗಳ ಹಿಂದೆ (Woman) ವೃದ್ದೆಯ ಮನೆಯ ಆವರಣದಲ್ಲಿ ತೆಂಗಿನ ಕಾಯಿ ಕಿತ್ತುಕೊಟ್ಟಿದ್ದ. ಈ ಮೂಲಕ‌ ಅಜ್ಜಿ ವಿಶ್ವಾಸ ಸಂಪಾದಿಸಿದ್ದ. ಇದೇ ನಂಬಿಕೆ ಮೇರೆಗೆ ಮಾರ್ಚ್ 7 ರಂದು ತೆಂಗಿನಕಾಯಿ ಕೀಳುವುದಕ್ಕೆ ವೃದ್ದೆ ಕರೆದಿದ್ದರು.‌

ಇದರಂತೆ ಮನೆಗೆ ಬಂದ ಆರೋಪಿಯು ಮನೆಯಲ್ಲಿ ವೃದ್ದೆ ಹೊರತುಪಡಿಸಿ ಯಾರು ಇಲ್ಲದಿರುವುದನ್ನು ಗಮನಿಸಿದ್ದಾನೆ.‌ ಸಾಲಭಾದೆ ತತ್ತರಿಸಿದ್ದ ಸಭಾಪತಿ ಆಕೆಯ ಮೈಮೇಲಿದ್ದ ಚಿನ್ನದ ಸರ ಮೇಲೆ ಕಣ್ಣು ಹಾಕಿದ್ದ. ಈ ವೇಳೆ ಕೈಯಲ್ಲಿದ್ದ ತೆಂಗಿನ ಕಾಯಿ ಕತ್ತರಿಸುವ ಮಚ್ಚಿನಿಂದ ವೃದ್ದೆಯ ಕತ್ತಿನ ಭಾಗದ ಮೇಲೆ ಹಲ್ಲೆ‌ ನಡೆಸಿದ್ದಾನೆ. 60 ಗ್ರಾಂ ಚಿನ್ನದ ಸರವನ್ನ ಎಗರಿಸಿ ಪರಾರಿಯಾಗಿದ್ದ.. ಮೊಬೈಲ್ ಸ್ವಿಚ್ ಅಫ್ ಮಾಡಿಕೊಂಡು ತಮಿಳುನಾಡಿನಲ್ಲಿ ತಲೆಮರೆಸಿಕೊಂಡಿದ್ದ.

Bengaluru: 20 ಬಾರಿ ಜೈಲಿಗೆ ಹೋದರೂ ಬುದ್ದಿ ಕಲಿಯದ ಕಳ್ಳಿ ಮತ್ತೆ ಅರೆಸ್ಟ್

ವೃದ್ದೆಯ ಮನೆಯವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಮಲ್ಲೇಶ್ವರಂ ಇನ್‌ಸ್ಪೆಕ್ಟರ್ ಚಂದ್ರಶೇಖರ್ ನೇತೃತ್ವದ ತಂಡ ಸಿಸಿಟಿವಿ ಆಧಾರದ ಮೇರೆಗೆ ಆರೋಪಿಯನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಿದೆ.

ಪತ್ನಿಯನ್ನು ನಡು ರಸ್ತೆಯಲ್ಲಿ ಕೊಚ್ಚಿದ್ದ: ಅವಳು ಬುದ್ಧಿವಂತ ಮಹಿಳೆ.. ಕಷ್ಟ ಪಟ್ಟು ದುಡಿಯುತ್ತಿದ್ದವಳು.. ಇದ್ದ ಒಬ್ಬ ಮಗನನ್ನು ಚೆನ್ನಾಗಿ ಬಾಳಿಸಬೇಕು ಎಂದು ಕನಸು ಹೊತ್ತವಳು. ಇಂಥವಳನ್ನು ಪಾಪಿ ಕೊಂದು ಹಾಕಿದ್ದ ಪ್ರಕರಣ ಬೆಳಗಾವಿಯಿಂದ ವರದಿಯಾಗಿತ್ತು.

ಗರ್ಲ್ ಫ್ರೆಂಡ್ ಗಾಗಿ ಸರಗಳ್ಳತನಕ್ಕೆ ಇಳಿದಿದ್ದ:  ಸಂಬಳ ಸಾಕಾಗುತ್ತಿಲ್ಲ ಎಂದು ಸರಗಳ್ಳತನಕ್ಕೆ ಇಳಿದಿದ್ದ. ಗೆಳತಿಯ ಆಸೆ ಪೂರೂಸುವುದಕ್ಕಾಗಿ ಕಳ್ಳತನವನ್ನೇ ಕುಲಕಸುಬು ಮಾಡಿಕೊಂಡಿದ್ದ

 ಸಿವಿಲ್ ಎಂಜಿನಿಯರ್ ತನ್ನ ಐಷಾರಾಮಿ ಜೀವನಕ್ಕೆ ಗೆಳತಿ ಜೊತೆ ಸುತ್ತಾಡಲು ಸರಗಳ್ಳತನಕ್ಕೆ(chain snatching) ಇಳಿದಿದ್ದ ಪ್ರಕರಣ ಮಹಾರಾಷ್ಟದಿಂದ ವರದಿಯಾಗಿತ್ತು. 27 ರ ಹರೆಯದ ಉಮೇಶ್ ಪಾಟೀಲ್ 2015ರಲ್ಲಿ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ಬಳಿಕ ಕಾಂಟ್ರಾಕ್ಟರ್ ಆಗಿ ಕೆಲಸಕ್ಕೆ ಸೇರಿಕೊಂಡಿದ್ದಾರೆ. ಬರುವ ಸಂಬಳದಲ್ಲಿ ತನ್ನ ಖರ್ಚು, ಐಷಾರಾಮಿ ಜೀವನ, ಗೆಳತಿಯ ಖರ್ಚಿ ಸಾಗುತ್ತಿರಲಿಲ್ಲ. ಹೀಗಾಗಿ ಮತ್ತೊಂದು ಕೆಲಸ ಮಾಡುವಷ್ಟು ಶ್ರಮಜೀವಿ ಅಲ್ಲ, ಕೆಲಸ ಬಿಟ್ಟು ಉತ್ತಮ ವೇತನದ ಕೆಲಸ ಹುಡುಕುವಷ್ಟು ಪ್ರತಿಭೆಯೂ ಇರಲಿಲ್ಲ. ಹಾಗಾಗಿ ಸರ ಕಳ್ಳತನಕ್ಕೆ ಇಳಿದು ಪೊಲೀಸರ ಬಲೆಗೆ ಬಿದ್ದಿದ್ದ.