ದುಬೈ (ಡಿ. 08) ಸಾವು ಬೆನ್ನ  ಹಿಂದೆ ಬರುತ್ತಿದೆ ಎಂದು ಗೊತ್ತಾದರೆ ಮನುಷ್ಯ  ಎಂಥ ಹೋರಾಟಕ್ಕೂ ಸಜ್ಜಾಗುತ್ತಾನೆ. ಅಂಥದ್ದೆ ಒಂದು  ಉದಾಹರಣೆಯನ್ನು ನಿಮ್ಮ  ಮುಂದೆ ಇಡುತ್ತಿದ್ದೇವೆ.

ದುಬೈನಲ್ಲಿ ಪಾರ್ಟಿ ಮಾಡಲು ಹೋಗಿ ಸಮುದ್ರಕ್ಕೆ ಬಿದ್ದ ಭಾರತೀಯ ಮೂಳದ ಯುವಕ ಎರಡು ಗಂಟೆ ಕಾಲ ನಿರಂತರವಾಗಿ ಈಜಿ ದಡ ಸೇರಿದ್ದು ಪ್ರಾಣ ಉಳಿಸಿಕೊಂಡಿದ್ದಾನೆ.

ನಾಸ್ತಿಕತೆ ಮತ್ತು ಲೈಂಗಿಕ ಕ್ರಾಂತಿಯಿಂದ ಬದಲಾದ ರಷ್ಯಾ

ಭಾರತದ ಮೂಲದ ರಜ್ವೀರ್ ವಕಾನಿ(27) ದುಬೈನಲ್ಲಿ ಅನೇಕ ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ.  ಸ್ನೇಹಿತನ ಜನ್ಮದಿನ ಎಂದು ಹಡಗೊಂದನ್ನು ಬಾಡಿಗೆ ಪಡೆದು ಪಾರ್ಟಿ ಆಯೋಜನೆ ಮಾಡಲಾಗಿದೆ. ಪಾರ್ಟಿಯ ಮೋಜಿನಲ್ಲಿದ್ದಾಗ  ಹಡಗಿನ ಮೂರನೇ ಮಹಡಿಗೆ ತೆರಳುವ ಭರದಲ್ಲಿ ಸಮುದ್ರಕ್ಕೆ ಬಿದ್ದಿದ್ದಾನೆ. ಕೂಗಿಕೊಂಡರೂ ಯಾರಿಗೂ ಕೇಳಿಲ್ಲ. 

ಯಾರೂ ಸಹಾಯಕ್ಕೆ ಬರದಿದ್ದಾಗ ದೂರದಲ್ಲೊಂದು ಬೆಳಕು ಕಾಣಿಸಿದೆ. ಆ ಬೆಳಕಿನ ಕಡೆ ಈಜುತ್ತ ಬಂದಿದ್ದಾನೆ. ಮೀನುಗಾರರು ಆತನ ರಕ್ಷಣೆ ಮಾಡಿ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.