Asianet Suvarna News Asianet Suvarna News

ಬೆಂಗಳೂರು: ಅದ್ಧೂರಿಯಾಗಿ ತಂಗಿ ಮದುವೆ ಮಾಡಲು ಗಾಂಜಾ ಮಾರಲು ಯತ್ನ, ಡ್ರಗ್ ಪೆಡ್ಲರ್ ಬಂಧನ..!

ಪೆಡ್ಲರ್ ಒಬ್ಬರ ಕಾಂಟೆಕ್ಟ್ ಮಾಡಿ ಓರಿಸ್ಸಾಗೆ ಹೋದ ಬದ್ರುದ್ದಿನ್, ಅಲ್ಲಿ ಲಾರಿ ಚಾಲಕನ ಮೂಲಕ ಗಾಂಜಾ ಖರೀದಿ ಮಾಡಿ ಬೆಂಗಳೂರಿಗೆ ಬರುತ್ತಿದ್ದ. ದುರಂತ್ ಎಕ್ಸ್ ಪ್ರೆಸ್ ಟ್ರೈನ್ ಮೂಲಕ ಬರ್ತಿದ್ದಾಗ ಎಸ್.ಎಂ.ಟಿ ರೆಲ್ವೆ ನಿಲ್ದಾಣದಲ್ಲಿ ಪೊಲೀಸರಿಗೆ ಲಾಕ್ ಆದ ಆರೋಪಿ ಬದ್ರುದ್ದಿನ್. 

Drug Peddler Arrested for attempt sale Marijuana in Bengaluru grg
Author
First Published Sep 10, 2024, 12:39 PM IST | Last Updated Sep 10, 2024, 12:39 PM IST

ಬೆಂಗಳೂರು(ಸೆ.10): ಅದ್ಧೂರಿಯಾಗಿ ತಂಗಿ ಮದುವೆ ಮಾಡಲು ಗಾಂಜಾ ಮಾರಲು ಮುಂದಾಗಿದ್ದವನನ್ನ ಪೊಲೀಸರು ಬಂಧಿಸಿದ ಘಟನೆ ಇಂದು(ಮಂಗಳವಾರ) ನಡೆದಿದೆ. ಪುತ್ತೂರು ಮೂಲದ ಬದ್ರುದ್ದಿನ್(25) ಬಂಧಿತ ಆರೋಪಿಯಾಗಿದ್ದಾನೆ. 

ಮೊದಲ ಯತ್ನದಲ್ಲಿಯೇ ಡ್ರಗ್ ಪೆಡ್ಲರ್ ಬದ್ರುದ್ದಿನ್ ಬಾಣಸವಾಡಿ ಪೊಲೀಸರಿಗೆ ಅತಿಥಿಯಾಗಿದ್ದಾನೆ. ಹೊಟೇಲ್‌ನಲ್ಲಿ ಕೆಲಸ ಮಾಡ್ತಿದ್ದ ಬದ್ರುದ್ದಿನ್ ಗೆ ಮನೆ ನಿರ್ವಹಣೆ ಕಷ್ಟವಾಗಿತ್ತು. ಅವಾಗ ಯಾರೋ ಸ್ನೇಹಿತರ ಮೂಲಕ ಗಾಂಜಾ ಮಾರಿ ಹಣ ಮಾಡಬಹುದು ಅಂತ ತಿಳಿದಿದೆ. 

ಡ್ರಗ್ಸ್‌ ಜೊತೆ ಸಿಕ್ಕಿಬಿದ್ದ ಕೇರಳದ ರೂಪದರ್ಶಿ..!

ಹೇಗೋ ಮಾಡಿ ಪೆಡ್ಲರ್ ಒಬ್ಬರ ಕಾಂಟೆಕ್ಟ್ ಮಾಡಿ ಓರಿಸ್ಸಾಗೆ ಹೋಗ್ತಾನೆ. ಅಲ್ಲಿ ಲಾರಿ ಚಾಲಕನ ಮೂಲಕ ಗಾಂಜಾ ಖರೀದಿ ಮಾಡಿ ಬೆಂಗಳೂರಿಗೆ ಬರುತ್ತಿದ್ದನಂತೆ. ದುರಂತ್ ಎಕ್ಸ್ ಪ್ರೆಸ್ ಟ್ರೈನ್ ಮೂಲಕ ಬರ್ತಿದ್ದಾಗ ಎಸ್.ಎಂ.ಟಿ ರೆಲ್ವೆ ನಿಲ್ದಾಣದಲ್ಲಿ ಪೊಲೀಸರಿಗೆ ಲಾಕ್ ಆಗಿದ್ದಾನೆ. 

Latest Videos
Follow Us:
Download App:
  • android
  • ios