ಸುಧಾಮೂರ್ತಿ ಹೆಸರು ಬಳಸಿ ವಂಚನೆ, ಇಬ್ಬರು ಮಹಿಳೆಯರ ವಿರುದ್ದ ಜಯನಗರ ಠಾಣೆಯಲ್ಲಿ ದೂರು!
ಸರಳತೆ ಸಾಕಾರಮೂರ್ತಿ ಎಂದೇ ಗುರುತಿಸಿಕೊಂಡಿರುವ ಇನ್ಫೋಸಿಸ್ ಫೌಂಡೇಷನ್ ಮುಖ್ಯಸ್ಥೆ ಸುಧಾಮೂರ್ತಿ ಹೆಸರು ಬಳಲಿ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಕುರಿತು ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಬೆಂಗಳೂರು(ಸೆ.24) ಇನ್ಫೋಸಿಸ್ ಫೌಂಡೇಷನ್ ಚೇರ್ಮೆನ್, ಲೇಖಕಿ ಎಲ್ಲಕ್ಕಿಂತ ಹೆಚ್ಚಾಗಿ ಸರಳತೆಯ ಮೂರ್ತಿ ಎಂದೇ ಹೆಸರಾಗಿರುವ ಸುಧಾಮೂರ್ತಿ ಸಮಾಜಸೇವೆಯನ್ನು ಬಿಡಿಸಿ ಹೇಳಬೇಕಾಗಿಲ್ಲ. ತಮ್ಮ ಫೌಂಡೇಷನ್ ಮೂಲಕ ಮಾತ್ರವಲ್ಲ, ವೈಯುಕ್ತಿತವಾಗಿಯೂ ಸುಧಾಮೂರ್ತಿ ಹಲವರಿಗೆ ನೆರವಾಗಿದ್ದಾರೆ. ತಮ್ಮ ಸಮಾಜ ಸೇವೆಯನ್ನು ನಿರಂತರವಾಗಿ ಮಾಡುತ್ತಿದ್ದಾರೆ. ಆದರೆ ಇದೇ ಸುಧಾಮೂರ್ತಿಗೆ ವಂಚನೆ ನಡೆಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಸುಧಾಮೂರ್ತಿ ಹೆಸರು ಬಳಸಿ ಭಾರಿ ವಂಚನೆ ನಡೆದಿರುವುದು ಬೆಳಕಿಗೆ ಬಂದಿದೆ. ಈ ಕುರಿತು ಸುಧಾಮೂರ್ತಿ ಬೆಂಗಳೂರಿನ ಜಯನಗರ ಪೊಲೀಸ್ ಠಾಣೆಯಲ್ಲಿ ಇಬ್ಬರು ಮಹಿಳೆಯರ ವಿರುದ್ಧ ದೂರು ದಾಖಲಿಸಿದ್ದಾರೆ.
ಅಮರಿಕದ ಕ್ಯಾಲಿಫೋರ್ನಿಯಾದಲ್ಲಿ ಆಯೋಜಿಸಿದ 50ನೇ ಕನ್ನಡ ಕೂಟ ವರ್ಚಾರಣೆ ಕಾರ್ಯಕ್ರಮಕ್ಕೆ ಸುಧಾಮೂರ್ತಿಗೆ ಆಹ್ವಾನ ನೀಡಲಾಗಿತ್ತು. ಎಪ್ರಿಲ್ 5ರಂದು ಸುಧಾಮೂರ್ತಿ ಕಚೇರಿಗೆ ಇಮೇಲ್ ಆಹ್ವಾನ ಬಂದಿದೆ. ಈ ಇಮೇಲ್ ಆಹ್ವಾನಕ್ಕೆ ಎಪ್ರಿಲ್ 26ರಂದು ಸುಧಾಮೂರ್ತಿ ಪ್ರತಿಕ್ರಿಯೆ ನೀಡಿದ್ದಾರೆ. ಕನ್ನಡ ಕೂಟ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಉತ್ತರಿಸಿದ್ದಾರೆ.
ಸರಳ ಉಡುಪಿನ ಕಾರಣಕ್ಕೆ ಸುಧಾಮೂರ್ತಿಗೆ ಹೀಗಂದ್ರಾ ಏರ್‌ಪೋರ್ಟ್ ಅಧಿಕಾರಿಗಳು!
ಬಳಿಕ ಸುಧಾಮೂರ್ತಿ ತಮ್ಮ ಕೆಲಸದಲ್ಲಿ ಮಗ್ನರಾಗಿದ್ದಾರೆ. ಆದರೆ ಆಗಸ್ಟ್ 30ರ ವೇಳೆಗೆ ಕ್ಯಾಲಿಫೋರ್ನಿಯಾ ಕನ್ನಡ ಕೂಟ ಕಾರ್ಯಕ್ರಮದ ಮುಖ್ಯ ಅತಿಥಿ ಡಾ.ಸುಧಾಮೂರ್ತಿ ಅನ್ನೋ ಪೋಸ್ಟರ್ ಎಲ್ಲೆಡೆ ರಾರಾಜಿಲು ಆರಂಭಿಸಿದೆ. ಸುಧಾಮೂರ್ತಿ ಜೊತೆ ಸಂವಾದ ಕಾರ್ಯಕ್ರಮ ಸೇರಿದಂತೆ ಹಲವು ಕಾರ್ಯಕ್ರಮಗಳ ಪೋಸ್ಟರ್ ಹರಿದಾಡಲು ಆರಂಭಿಸಿದೆ. ಅಮೆರಿಕ ಮಿತ್ರರೂ ಸುಧಾಮೂರ್ತಿ ಗಮನಕ್ಕೆ ತಂದಿದ್ದಾರೆ.
700 ಕೋಟಿ ಆಸ್ತಿ ಒಡತಿಯಾಗಿದ್ರೂ ಸುಧಾಮೂರ್ತಿ, 24 ವರ್ಷದಿಂದ ಒಂದೇ ಒಂದು ಸೀರೆ ಖರೀದಿಸಿಲ್ವಂತೆ!
ಕಾರ್ಯಕ್ರಮಕ್ಕೆ ಹಾಜರಾಗುತ್ತಿಲ್ಲ ಎಂದು ಉತ್ತರ ನೀಡಿದ್ದರೂ, ಕಾರ್ಯಕ್ರಮದ ಅತಿಥಿ ಹಾಗೂ ಸಂವಾದ ಕಾರ್ಯಕ್ರಮ ಸೇರಿದಂತೆ ಇತರ ಕಾರ್ಯಮಗಳಲ್ಲಿ ಅತಿಥಿ ಎಂದು ಹಾಕಿರುವ ಕುರಿತು ಅನುಮಾನ ವ್ಯಕ್ತಪಡಿಸಿದ ಸುಧಾಮೂರ್ತಿ ನೇರವಾಗಿ ಕ್ಯಾಲಿಫೋರ್ನಿಯಾ ಕನ್ನಡ ಕೂಟ ಸಂಪರ್ಕಿಸಿ ಮಾಹಿತಿ ಕೇಳಿದ್ದಾರೆ. ಈ ವೇಳೆ ಲ್ಯಾವಣ್ಯ ಅನ್ನೋ ಮಹಿಳೆ ಸುಧಾಮೂರ್ತಿ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವುದಾಗಿ ಖಚಿತಪಡಿಸಿದ್ದಾರೆ. ಈ ಲಾವಣ್ಯ ಸುಧಾಮೂರ್ತಿ ಟ್ರಸ್ಟ್ ಸದಸ್ಯೆ ಎಂದು ಹೇಳಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ. ಸುಧಾಮೂರ್ತಿ ಟ್ರಸ್ಟ್ ಸದಸ್ಯೆ ಎಂದು ಸುಳ್ಳು ಹೇಳಿ, ಸುಧಾಮೂರ್ತಿ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದಾರೆ ಎಂದು ಸುಳ್ಳು ಹೇಳಿದ್ದಾರೆ. ಇತ್ತ ಆಯೋಜಕರು ಸುಧಾಮೂರ್ತಿ ಅತಿಥಿ ಎಂದು ಪೋಸ್ಟರ್, ಬ್ಯಾನರ್ ಹಾಕಿದ್ದಾರೆ.
ಸುಧಾಮೂರ್ತಿ ವಿಡಿಯೋ ಕಾನ್ಫೆರನ್ಸ್ ಮೂಲಕ ಕಾರ್ಯಕ್ರಮಕ್ಕೆ ಹಾಜರಾಗುವುದಾಗಿ ಖಚಿತಪಡಿಸಿದ್ದಾರೆ ಎಂದು ಲಾವಣ್ಯ ಆಯೋಜಕರಿಗೆ ತಿಳಿಸಿದ್ದಳು. ಈ ಮಾಹಿತಿ ಪಡೆದ ಸುಧಾಮೂರ್ತಿಗೆ ಅಚ್ಚರಿಯಾಗಿದೆ. ತಮ್ಮ ಹೆಸರು ಬಳಿಸಿ ವಂಚನೆ ನಡೆದಿರುವುದು ಬೆಳಕಿಗೆ ಬಂದಿದೆ. ಈ ಕುರಿತು ಹೆಚ್ಚಿನ ಮಾಹಿತಿ ಕಲೆಹಾಕುವಾಗ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಸುಧಾಮೂರ್ತಿ ಅಮೆರಿಕಕ್ಕೆ ಆಗಮಿಸುತ್ತಿದ್ದಾರೆ. ಮೀಟ್ ಅಂಡ್ ಗ್ರೀಟ್ ವಿಥ್ ಸುಧಾಮೂರ್ತಿ ಅನ್ನೋ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಶ್ರುತಿ ಅನ್ನೋ ಮಹಿಳೆ ಅಮೆರಿಕದಲ್ಲಿ ಟಿಕೆಟ್ ಮಾರಾಟ ಮಾಡಿದ್ದಾರೆ. ಒಂದು ಟಿಕೆಟ್‌ಗೆ 40 ಅಮೆರಿಕನ್ ಡಾಲರ್ ಮೊತ್ತ ಚಾರ್ಜ್ ಮಾಡಿದ್ದಾರೆ.
ಸುಧಾಮೂರ್ತಿ ಕಾರ್ಯಕ್ರಮ ಅನ್ನೋ ಕಾರಣಕ್ಕೆ ಟಿಕೆಟ್ ಭರ್ಜರಿಯಾಗಿ ಸೇಲ್ ಆಗಿದೆ. ಎರಡು ವಂಚನೆ ಪ್ರಕರಣಗಳು ಬೆಳಕಿಗೆ ಬಂದಿದೆ. ಹೀಗಾಗಿ ಸುಧಾಮೂರ್ತಿಯವರ ಪರ್ಸನಲ್ ಅಸಿಸ್ಟೆಂಟ್ ಮಮತ ಸಂಜಯ್ ಜಯನಗರ ಪೊಲೀಸ್ ಠಾಣೆಯಲ್ಲಿ ಲಾವಣ್ಯ ಹಾಗೂ ಶ್ರುತಿ ವಿರುದ್ದ ದೂರು ದಾಖಲಿಸಿದ್ದಾರೆ.