ತೀರ್ಥಹಳ್ಳಿಯಲ್ಲಿ ಡಬ್ಬಲ್ ಮರ್ಡರ್: ಹಣಕ್ಕಾಗಿ ಕೂಲಿ ಕಾರ್ಮಿಕರ ಬರ್ಬರ ಕೊಲೆ!
ತೀರ್ಥಹಳ್ಳಿ ಪಟ್ಟಣದ ಸಮೀಪದ ಕುರುವಳ್ಳಿಯ ಪುತ್ತಿಗೆ ಮಠದ ಸಮೀಪದ ವಿಶ್ವಕರ್ಮ ಸಮುದಾಯ ಭವನದೊಳಗೆ ಕೂಲಿ ಕೆಲಸಕ್ಕೆಂದು ಬಂದಿದ್ದ ದಾವಣಗೆರೆ ಕಾರ್ಮಿಕರ ಬರ್ಬರ ಕೊಲೆ ಮಾಡಲಾಗಿದೆ.
ಶಿವಮೊಗ್ಗ (ಮೇ 18): ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಪಟ್ಟಣದ ಸಮೀಪದ ಕುರುವಳ್ಳಿಯ ಪುತ್ತಿಗೆ ಮಠದ ಸಮೀಪದ ವಿಶ್ವಕರ್ಮ ಸಮುದಾಯ ಭವನದೊಳಗೆ ಕೂಲಿ ಕೆಲಸಕ್ಕೆಂದು ಬಂದಿದ್ದ ದಾವಣಗೆರೆ ಕಾರ್ಮಿಕರ ಬರ್ಬರ ಕೊಲೆ ಮಾಡಲಾಗಿದೆ.
ತೀರ್ತಹಳ್ಳಿಯಲ್ಲಿ ಸಮುದಾಯ ಭವನ ಕಟ್ಟಡ ನಿರ್ಮಾಣ ಕಾರ್ಯಕ್ಕೆಂದು ಸಾವಣಗೆರೆ ಜಿಲ್ಲೆಯಿಮದ ಬಂದಿದ್ದ ಕಾರ್ಮಿಕರು ನಿನ್ನೆ ರಾತ್ರಿ ಕುಡಿದ ಮತ್ತಿನಲ್ಲಿ ಹಣದ ವ್ಯವಹಾರದ ವಿಚಾರವಾಗಿ ಗಲಾಟೆ ನಡೆದಿದೆ. ಪಟ್ಟಣದ ಹೊರಭಾಗದಲ್ಲಿ ಕಟ್ಟಡ ನಿರ್ಮಾಣ ಕಾರ್ಯ ನಡೆಯುತ್ತಿದ್ದರೂ ಗಲಾಟೆಯ ವೇಳೆ ಜೋರಾಗಿ ಕೂಗಾಡುತ್ತಿದ್ದುದು, ಸುತ್ತಲಿನ ಮನೆಗಳ ನಿವಾಸಿಗಳು ತಡರಾತ್ರಿ ವೇಳೆ ಕುಡುಕರ ಗಲಾಟೆಯನ್ನು ಲೆಕ್ಕಿಸದೇ ಮಲಗಿದ್ದಾರೆ. ಆದರೆ, ತಡರಾತ್ರಿ ವೇಳೆ ಜಗಳ ತಾರಕಕ್ಕೆ ಏರಿದ್ದು, ಇಬ್ಬರು ಕಾರ್ಮಿಕರ ತಲೆ ಮೇಲೆ ಕಲ್ಲು ಎತ್ತಿಹಾಕಿ ಬರ್ಬರವಾಗಿ ಕೊಲೆ ಮಾಡುವಲ್ಲಿ ಅಂತ್ಯವಾಗಿದೆ.
ತುಂಗಭದ್ರಾ ನದಿ ಕೆಸರಲ್ಲಿ ಸಿಲುಕಿ ಸಹೋದರರ ಸಾವು: ಈಜಲು ಹೋದವರು ನೀರು ಪಾಲಾದರು
ಹಣದ ವಿಚಾರದಲ್ಲಿ ಗಲಾಟೆ ಆರಂಭ: ಘಟನೆ ನಡಟೆದ ಬಳಿಕ ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದು, ತೀರ್ಥಹಳ್ಳಿ ಠಾಣೆಯ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ಮಾಡಿದ್ದಾರೆ. ಮೃತ ಕಾರ್ಮಿಕರನ್ನು ಮಂಜಪ್ಪ (45) ಬೀರಪ್ಪ (46) ಎಂದು ಗುರುತಿಸಲಾಗಿದೆ. ಇವರು ದಾವಣಗೆರೆ ಜಿಲ್ಲೆಯ ಕಾರ್ಮಿಕರು ರಾತ್ರಿ ಕುಡಿದು ಹಣದ ವ್ಯವಹಾರದಲ್ಲಿ ಪರಸ್ಪರ ಗಲಾಟೆ ಮಾಡಿಕೊಂಡಾಗ ಕೊಲೆ ನಡೆದಿದೆ ಎಂದು ತಿಳಿದುಬಂದಿದೆ. ಈ ಘಟನೆ ಕುರಿತಂತೆ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದು, ಯಾರು ಕೊಲೆ ಮಾಡಿದ್ದಾರೆ ಎನ್ನುವುದನ್ನು ಪತ್ತೆಹಚ್ಚಲು ತನಿಖೆ ಆರಂಭಿಸಿದ್ದಾರೆ.
ಬಾಗಲಕೋಟೆಯಲ್ಲಿ ಹಾಡಹಗಲೇ ಚಾಕು ಇರಿದು ಕೊಲೆ: ರಾಜ್ಯದಲ್ಲಿ ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಪ್ರಾಂಗಣದ ಬಳಿ ಚಾಕುವಿನಿಮದ ಇರಿದು ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿರುವ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ. ಹಾಡು ಹಗಲು ಹೊತ್ತಿನಲ್ಲಿಯೇ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯ ಮೇಲೆ ಏಕಾಏಕಿ ದಾಳಿ ಮಾಡಿ ಚಾಕುವಿನಿಂದ ಇರಿಯಲಾಗಿದೆ. ತೀವ್ರ ರಕ್ತಸ್ರಾವ ಉಂಟಾದ ವ್ಯಕ್ತಿ ಸ್ಥಳದಲ್ಲಿಯೇಕುಸಿದು ಬಿದ್ದು ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.
ಹಾಡುಹಗಲೇ ನಡೆದ ಚಾಕು ಇರಿತ ಘಟನೆಯಲ್ಲಿ ಬಸವರಾಜ (55) ಮೃತಪಟ್ಟ ದುರ್ದೈವಿ ಆಗಿದ್ದಾನೆ. ನಗರದ ಎಪಿಎಂಸಿ ಮುಂಭಾಗದಲ್ಲಿ ಬಸವರಾಜ ನಿಂತಿದ್ದಾಗ ಈತನ ಬಳಿ ಚಾಕು ಹಿಡಿದು ಆಗಮಿಸಿದ ಮಹಾಂತೇಶ ಎನ್ನುವ ದುಷ್ಕರ್ಮಿ ಏಕಾಏಕಿ ಚಾಕುವಿನಿಂದ ಇರಿದಿದ್ದಾನೆ. ಇನ್ನು ಕೊಲೆ ಮಾಡಿದ ವ್ಯಕ್ತಿ ಸ್ವತಃ ಬಸವರಾಜನ ಹೆಂಡತಿಯ ತಂಗಿಯ ಗಂಡ (ಸಡಕ) ನಾಗಿದ್ದಾನೆ. ಇನ್ನು ಚಾಕುವನ್ನು ನೇರವಾಗಿ ಎದೆಗೇ ಚುಚ್ಚಿದ್ದು, ರಕ್ತಸ್ರಾವದಲ್ಲಿ ಬಿದ್ದ ಬಸವರಾಜು ಅವರನ್ನು ಸ್ಥಳೀಯರು ಆಸ್ಪತ್ರೆಗೆ ಸಾಗಿಸಲು ಮುಂದಾಗಿದ್ದಾರೆ. ಆಸ್ಪತ್ರೆಗೆ ಸಾಗಿಸುವ ಮಾರ್ಗಮದ್ಯೆ ಸಾವನ್ನಪ್ಪಿದ್ದಾರೆ.
ಬಿಜೆಪಿ ನಾಯಕರ ಶ್ರದ್ಧಾಂಜಲಿ ಬ್ಯಾನರ್ ಹಾಕಿದವರ, ಚರ್ಮ ಸುಲಿದ ಪೊಲೀಸರು!
ಸಂಬಂಧಿಕರ ನಡುವೆ ಕೊಲೆಗೆ ಕಾರಣ ತಿಳಿದುಬಂದಿಲ್ಲ: ಇನ್ನು ತನ್ನ ಪತ್ನಿಯ ಅಕ್ಕನ ಗಂಡ ಬಸವರಾಜು ಅವರ ಮೇಲೆ ಮಹಾಂತೇಶನಿಗೆ ಯಾವ ಕಾರಣಕ್ಕೆ ದ್ವೇಷ ಇತ್ತು ಎಂಬುದು ಇನ್ನೂ ತಿಳಿದುಬಂದಿಲ್ಲ. ಎಪಿಎಂಸಿ ಬಳಿ ನೂರಾರು ಜನರ ಎದುರೇ ಎದೆಗೆ ಚಾಕು ಚುಚ್ಚಿದ ಕೂಡಲೇ ಜನರು ಅವರನ್ನು ಹಿಡಿದುಕೊಳ್ಳಲು ಮುಂದಾಗಿದ್ದು, ಅಲ್ಲಿಂದ ಓಡಿ ಹೋಗಿದ್ದಾನೆ. ಹೀಗಾಗಿ, ಕೊಲೆಗೆ ಕಾರಣವೇನೆಂದು ತಿಳಿದುಬಂದಿಲ್ಲ. ಬಾಗಲಕೋಟೆ ಶಹರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಸ್ಥಳ ಪರಿಶೀಲನೆ ಮಾಡಿದ್ದಾರೆ.