ಬಳ್ಳಾರಿ(ಮಾ.06): ಬೆಂಗಳೂರಿನ ಡಿ.ಜೆ.ಹಳ್ಳಿ ಹಾಗೂ ಕೆ.ಜಿ.ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಳ್ಳಾರಿಯ ಕೇಂದ್ರ ಕಾರಾಗೃಹದಲ್ಲಿ ಕಳೆದ 6 ತಿಂಗಳಿಂದ ಬಂಧಿತರಾಗಿದ್ದ 29 ಆರೋಪಿಗಳು ಶುಕ್ರವಾರ ರಾತ್ರಿ ಬಿಡುಗಡೆಯಾಗಿದ್ದಾರೆ. 

ಈ ವೇಳೆ ಮಾಧ್ಯಮ ಪ್ರತಿನಿಧಿಗಳಿಗೆ ಹೆಚ್ಚಿನ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಆರೋಪಿಗಳು, ‘ಪ್ರಕರಣದಲ್ಲಿ ನಾವು ಭಾಗಿಯಾಗಿಲ್ಲ. ನಾವು ನಿರಪರಾಧಿಗಳಾಗಿದ್ದೇವೆ. ಅಮಾಯಕರಾದ ನಮ್ಮನ್ನು ಬಂಧಿಸಲಾಯಿತು’ ಎಂದಷ್ಟೇ ಹೇಳಿದ್ದಾರೆ. 

ಕೆ.ಜಿ.ಹಳ್ಳಿ ಕೇಸ್‌ ಸಿಬಿಐ ತನಿಖೆಗೆ ಕೋರಿದ್ದ ಉದ್ಯಮಿಗೆ ಲಕ್ಷ ದಂಡ

ಆರೋಪಿಗಳನ್ನು ಕರೆದೊಯ್ಯಲು ಬಂದಿದ್ದ ಪೋಷಕರು ಹಾಗೂ ಸಂಬಂಧಿಕರು ಸಂಭ್ರಮ ಪಟ್ಟರು. ಮೂರು ಸ್ಲೀಪರ್‌ ಕೋಚ್‌ ಬಸ್‌ನಲ್ಲಿ ಆರೋಪಿಗಳನ್ನು ಕರೆದೊಯ್ಯಲು ಆಗಮಿಸಿದ್ದ ಕುಟುಂಬ ಸದಸ್ಯರು, ಊಟ, ಸಿಹಿ ತಿಂಡಿಗಳನ್ನು ತಂದಿದ್ದರು. ಬಸ್‌ ಹತ್ತುತ್ತಿದ್ದಂತೆಯೇ ಆರೋಪಿಗಳನ್ನು ಖುಷಿಯಿಂದ ಸ್ವಾಗತ ಮಾಡಿಕೊಳ್ಳುತ್ತಿರುವ ದೃಶ್ಯ ಇಲ್ಲಿನ ಕೇಂದ್ರ ಕಾರಾಗೃಹದ ಆವರಣದಲ್ಲಿ ರಾತ್ರಿ ಕಂಡು ಬಂತು.