ಧಾರವಾಡ ಗ್ರಾಮೀಣ ಪೊಲೀಸರ ಕಾರ್ಯಾಚರಣೆ/ 36 ವರ್ಷದ ಹಿಂದಿನ ಪ್ರಕರಣದ ಆರೋಪಿ ಬಂಧನ/ ಹೊರ ರಾಜ್ಯದಲ್ಲಿ ತಲೆ ಮರಿಸಿಕೊಂಡಿದ್ದ ಆರೋಪಿ/ ಭತ್ತದ ಚೀಲ ಕದ್ದ ಪ್ರಕರಣ
ಧಾರವಾಡ( ಡಿ. 15) ಹೊರ ರಾಜ್ಯದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿಯನ್ನು ಧಾರವಾಡ ಪೊಲೀಸರು ಬಂಧಿಸಿದ್ದಾರೆ. ಆದರೆ ಇದು ಬರೋಬ್ಬರಿ 36 ವರ್ಷದ ಹಿಂದಿನ ಪ್ರಕರಣ. ಶಂಕ್ರಪ್ಪ ಮಹಾದೇವಪ್ಪ ಜೊಡಗೇರಿ ಎಂಬುವರನ್ನು ಬಂಧಿಸಲಾಗಿದೆ.
ಧಾರವಾಡ ತಾಲೂಕಿನ ಎತ್ತಿನಗುಡ್ಡ ಗ್ರಾಮದ ನಿವಾಸಿ ಶಂಕ್ರಪ್ಪ ಮಹಾದೇವಪ್ಪ ಜೊಡಗೇರಿ ಎಂಬುವರನ್ನು ಬಂಧಿಸಲಾಗಿದೆ. ಧಾರವಾಡ ಗ್ರಾಮೀಣ ಪೊಲೀಸರ ಕಾರ್ಯಾಚರಣೆ ನಡೆಸಿದ್ದು ಒಂದು ರೀತಿಯ ದಾಖಲೆಯಾಗಿದೆ.
ಕಾಮದಾಹ ತೀರಿಸಿಕೊಳ್ಳಲು ಹೆತ್ತ ಮಗನನ್ನೇ ಕೊಂದ ತಾಯಿ
ಏನಿದು ಪ್ರಕರಣ: ಮುತಾಲೀಕ ದೇಸಾಯಿ ಎನ್ನುವರ 25 ಭತ್ತದ ಚೀಲ ಕಳುವು ಮಾಡಿದ್ದ ಆರೋಪದ ಇದ್ದವರಲ್ಲಿ ಏಳು ಜನರನ್ನು ಬಂಧಿಸಲಾಗಿತ್ತು. ಆದರೆ ಒಬ್ಬ ಆರೋಪಿ ಮಾತ್ರ ತಪ್ಪಿಸಿಕೊಂಡಿದ್ದ. 8 ಮಂದಿ ಆರೋಪಿಗಳ ಪೈಕಿ 7 ಮಂದಿ ಬಂಧನವಾಗಿತ್ತು.
