ಧಾರವಾಡ (ಜ. 27)  ಇತ್ತೀಚೆಗೆ ಶೂಟೌಟ್‍ನಲ್ಲಿ ಬರ್ಬರವಾಗಿ  ಹತ್ಯೆಯಾದ ಫ್ರೂಟ್ ಇರ್ಫಾನ್ ಸಾವಿನ ನಂತರ ಇದೀಗ ಆತನ ಮಗನ ಕೃತ್ಯಗಳು ಹೊರ ಬರುತ್ತಿವೆ. 

ಫ್ರೂಟ್ ಇರ್ಫಾನ್ ಪುತ್ರ ಹಣ ನೀಡುವಂತೆ ಕೆಲವರಿಗೆ ಬೆದರಿಕೆ ಹಾಕುತ್ತಿದ್ದಾನೆ ಎಂಬ ಆರೋಪ  ಕೇಳಿಬರುತ್ತಿವೆ. ಕಳೆದ ಎರಡು ದಿನಗಳ ಹಿಂದೆ ಇಲ್ಲಿಯ ಯರಿಕೊಪ್ಪ ಹತ್ತಿರ ಮೊಹಮ್ಮದ ಕುಡಚಿ ಎಂಬುವವರಿಗೆ ಫ್ರೂಟ್ ಇರ್ಫಾನ್ ಪುತ್ರ ಅರಬಾಜ್ ರಿವಾಲ್ವರ್ ತೋರಿಸಿ ತನ್ನ ತಂದೆಯ ಹಣ ನಿನ್ನ ಬಳಿ ಇದೆ. ಅದನ್ನು ನನಗೆ ಕೊಟ್ಟು ಬಿಡು ಎಂದು ಬೆದರಿಕೆ ಹಾಕಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಫ್ರೂಟ್ ಇರ್ಫಾನ್ ಹತ್ಯೆ ಮಾಡಿದ್ದು ಯಾರು? 

ಫ್ರೂಟ್ ಇರ್ಫಾನ್ ಹಾಗೂ ಮೊಹಮ್ಮದ ಕುಡಚಿ ಮೊದಲಿನಿಂದಲೂ ವಿವಿಧ ವ್ಯವಹಾರಗಳಲ್ಲಿ ಪಾಲುದಾರರಾಗಿದ್ದರು ಎನ್ನಲಾಗಿದ್ದು, ಇರ್ಫಾನ್ ಹತ್ಯೆ ನಂತರ ಅದು ಸ್ಥಗಿತವಾಗಿತ್ತು. ಸದ್ಯ ಅರಬಾಜ್ ತನ್ನ ತಂದೆಯ ಸಂಪೂರ್ಣ ಹಣ ನಿಮ್ಮ ಬಳಿಯೇ ಇದೆ. ಅದನ್ನು ಕೊಡಬೇಕೆಂದು ಬೆದರಿಕೆ ಹಾಕಿದ್ದಾನೆ ಎಂದು ತಿಳಿದು ಬಂದಿದೆ.