ಅನ್ಯೋನ್ಯವಾಗಿ ಬದುಕಿ ಸಾವಿನಲ್ಲೂ ಒಂದಾದ ದಂಪತಿ

ಇತ್ತೀಚಿನ ದಿನಗಳಲ್ಲಿ ದಾಂಪತ್ಯ ಎನ್ನುವುದು ಬೇಗನೆ ಮುರಿದು ಹೋಗುತ್ತಿವೆ. ಆದರೆ ಇಲ್ಲೊಂದು ಪ್ರಕರಣದಲ್ಲಿ ಸುದೀರ್ಘ 40 ವರ್ಷಗಳ ದಾಂಪತ್ಯ ಜೀವನ ನಡೆಸಿದ ಆ ದಂಪತಿ  ಇದೀಗ ಸಾವಿನಲ್ಲಿಯೂ ಒಂದಾಗಿದ್ದಾರೆ.  

death did not separate this koppala old  couple gow

ವರದಿ: ದೊಡ್ಡೇಶ್ ಯಲಿಗಾರ್, ಏಷ್ಯಾನೆಟ್ ಸುವರ್ಣ ನ್ಯೂಸ್

ಕೊಪ್ಪಳ  (ನ.3): ಇತ್ತೀಚಿನ ದಿನಗಳಲ್ಲಿ ದಾಂಪತ್ಯ ಎನ್ನುವುದು ಬೇಗನೆ ಮುರಿದು ಹೋಗುತ್ತಿವೆ. ಆದರೆ ಇಲ್ಲೊಂದು ಪ್ರಕರಣದಲ್ಲಿ ಸುದೀರ್ಘ 40 ವರ್ಷಗಳ ದಾಂಪತ್ಯ ಜೀವನ ನಡೆಸಿದ ಆ ದಂಪತಿ ಇದೀಗ ಸಾವಿನಲ್ಲಿಯೂ ಒಂದಾಗಿದ್ದಾರೆ.  ಈ ಗಂಡ ಹೆಂಡತಿ ನಡುವಿನ ಸಂಬಂಧವೇ ಅಂತಹದ್ದು, ಒಬ್ಬರಿಗೊಬ್ಬರು ಬಿಟ್ಟು ಇರಲಾರದ ಸಂಬಂಧ ಈ ಗಂಡ ಹೆಂಡತಿಯದ್ದು. ಅದರಲ್ಲೂ ಈ ಹಿರಿಯರನ್ನು ಕೇಳಬೇಕೆ, ಸುದೀರ್ಘವಾಗಿ ಜೀವನ ಸಾಗಿಸಿದ ದಂಪತಿಗಳ ಜೀವನ ಅಂತ ಹೇಳತಿರದು. ಅವರು ಒಬ್ಬರ ಮೇಲೆ ಮತ್ತೊಬ್ಬರು ಅವಲಂಬನೆಯಾಗಿರುತ್ತಾರೆ. ನೀನು ಸತ್ತರೆ,ನಾನೂ ಸಾಯುತ್ತೇನೆ ಎಂದು ಮಾತನಾಡಿಕೊಳ್ಳುತ್ತಿರುತ್ತಾರೆ. ಈ ಮಾತಿನಂತೆ ಪತ್ನಿ ಹೊನ್ನಮ್ಮ ಸಾವಿನ ಬಳಿಕ ಪತಿ ಶಿವಪ್ಪ ಸಹ ಸಾವನ್ನಪ್ಪಿರುವ ಪ್ರಕರಣ ನಡೆದಿದೆ.

ಅಪರೂಪ ಘಟನೆ:  ಕೊಪ್ಪಳ ಜಿಲ್ಲೆ ಸದಾ ಒಂದಿಲ್ಲೊಂದು ವಿಶೇಷತೆಗಳು ನಡೆದೆ ನಡೆದಿರುತ್ತವೆ.‌  ಅಪರೂಪದಲ್ಲಿ  ಅಪರೂಪ ಎಂಬುವಂತೆ ಘಟನೆಯೊಂದು ನಡೆದಿದೆ. ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಮದಲಗಟ್ಟಿ ಗ್ರಾಮದಲ್ಲಿ ನಡೆದಿದೆ. ಮದಲಗಟ್ಟಿ ಗ್ರಾಮದ ದಂಪತಿಗಳಾದ ಪತ್ನಿ ಹೊನ್ನಮ್ಮ‌ ಮೊದಲು ಮೃತಪಟ್ಟರೆ ಬಳಿಕ ಮೂರು ಗಂಟೆಗಳ ಬಳಿಕ ಪತಿ ಶಿವಪ್ಪ ಮೃತಪಟ್ಟಿದ್ದಾನೆ.

ಅನ್ಯೋನ್ಯವಾಗಿ ಜೀವಿಸಿದ್ದ ದಂಪತಿ:  ಇನ್ನು ಮೃತ 65 ವರ್ಷದ ಶಿವಪ್ಪ ಹಾಗೂ 56 ವರ್ಷದ ಹೊನ್ನಮ್ಮ ದಂಪತಿ 45 ವರ್ಷಗಳ ಹಿಂದೆ ಮದುವೆಯಾಗಿದ್ದರು. ಈ ದಂಪತಿಗಳಿಗೆ  ಇಬ್ಬರು ಗಂಡು ಮಕ್ಕಳು, ನಾಲ್ವರು ಹೆಣ್ಣು ಮಕ್ಕಳು ಸೇರಿ 6 ಜನ ಮಕ್ಕಳಿದ್ದು, 25 ಜನ ಮೊಮ್ಮಕ್ಕಳು ಇದ್ದಾರೆ. ಸುದೀರ್ಘ ನಾಲ್ಕೂವರೆ ದಶಕಗಳ ಕಾಲ ಜೀವನ ನಡೆಸಿದ್ದ ಈ ದಂಪತಿ ಜೀವನದಲ್ಲಿ ಎಂತಹದ್ದೇ ಸಂಕಷ್ಟುಗಳು ಎದುರಾದರೂ ಸಹ ಒಂದು ದಿನವೂ ಎದೆಗುಂದಿಲ್ಲ. ಜೊತೆಗೆ ಒಂದು ಬಾರಿಯೂ ಸಹ ಜಗಳ ಮಾಡದೇ ಅನ್ಯೋನ್ಯವಾಗಿ ಜೀವನ ಸಾಗಿಸಿದ್ದರು.‌ ಇದೇ ಕಾರಣಕ್ಕಾಗಿಯೇ ಇದೀಗ ಪತ್ನಿ ಹೊನ್ನಮ್ಮ ಸಾವಿನ ಬಳಿಕ ಪತಿ ಶಿವಪ್ಪ ಸಾವನ್ನಪ್ಪಿದ್ದಾನೆ. 

ಕನಕಪುರ: ಜೀ ನೆಟ್‌ ವರ್ಕ್‌ಗೆ ಕನ್ನ​ಹಾ​ಕಿದ ನಾಲ್ವರ ವಿರುದ್ಧ ಕೇಸ್‌..!

ಮೊದಲು ಪತ್ನಿ- ನಂತರ ಪತಿ ಸಾವು: ಇನ್ನು ಮದಲಗಟ್ಟಿ ಗ್ರಾಮದ ಈ ದಂಪತಿಗಳ ಪೈಕಿ 56 ವರ್ಷದ ಪತ್ನಿ ಹೊನ್ನಮ್ಮ ತಳವಾರ್  ಕಳೆದ ನಾಲ್ಕೈದು ವರ್ಷಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದರು. ಈ ಹಿನ್ನಲೆಯಲ್ಲಿ ಹೊನ್ನಮ್ಮ ಮೃತಪಟ್ಟರು. ಇದರಿಂದ ಆರೋಗ್ಯವಾಗಿಯೇ ಇದ್ದ ಶಿವಪ್ಪ ತೀವ್ರ ಅಘಾತಕ್ಕೆ ಒಳಗಾಗುತ್ತಾರೆ. ಪತ್ನಿ ಹೊನ್ನಮ್ಮ‌ ಸಾವನ್ನಪ್ಪಿದ ಬಳಿಕ ಮೂರೇ ಗಂಟೆಯೊಳಗೆ ಪತಿ ಶಿವಪ್ಪ ಸಾವನ್ನಪ್ಪುವ ಮೂಲಕ ಪತ್ನಿಯ ಜೊತೆಗೆ ಸಾವಿನ ಹಾದಿ ತುಳಿಯುತ್ತಾರೆ.

ಕನಕಪುರ: ಜೀ ನೆಟ್‌ ವರ್ಕ್‌ಗೆ ಕನ್ನ​ಹಾ​ಕಿದ ನಾಲ್ವರ ವಿರುದ್ಧ ಕೇಸ್‌..!

ಇನ್ನು ಪತ್ನಿ-ಪತಿ ಜೊತೆಗೆ ಸಾವನ್ನಪ್ಪಿರುವುದರಿಂದ ಮದಲಗಟ್ಟಿ ಸೇರಿದಂತೆ ಸುತ್ತಮುತ್ತಲಿನ ಜನರೂ ತಂಡೋಪತಂಡವಾಗಿ ಬಂದು ದಂಪತಿಗಳ ಅಂತಿಮ ದರ್ಶನ ಪಡೆಯುತ್ತಿದ್ದಾರೆ. ಇನ್ನು ದಂಪತಿಗಳನ್ನು ಜೊತೆಯಲ್ಲಿಯೇ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಒಟ್ಟಿನಲ್ಲಿ  ಶಿವಪ್ಪ- ಹೊನ್ನಮ್ಮ ದಂಪತಿ  ಸಾವಿನಲ್ಲೂ ಒಂದಾಗುವ ಮೂಲಕ ತಾವು ಬದುಕಿದ್ದಾಗಲೂ ಜೊತೆಗೆ ಬದುಕಿದ್ದೇವೆ, ಕೊನೆಗಾಲದಲ್ಕೂ ಇಬ್ಬರೂ ಕೊನೆಯಾಗುತ್ತೇವೆ ಎಂದು ತೋರಿಸಿಕೊಟ್ಟಿದ್ದಾರೆ.

Latest Videos
Follow Us:
Download App:
  • android
  • ios