ಮಗಳ ಅನುಮಾನಾಸ್ಪದ ಸಾವು; ನ್ಯಾಯಕ್ಕಾಗಿ ಎಸ್‌ಪಿ ಕಚೇರಿ ಮುಂದೆ ಕುಟುಂಬಸ್ಥರು ಕಣ್ಣೀರು!
ಮಂಡ್ಯ ಮೂಲದ ಗೃಹಿಣಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರಿನಲ್ಲಿ ನಡೆದಿದೆ.
ಚಿಕ್ಕಮಗಳೂರು (ಜು.17) : ಮಂಡ್ಯ ಮೂಲದ ಗೃಹಿಣಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರಿನಲ್ಲಿ ನಡೆದಿದೆ.
ರುಕ್ಮಿಣಿ (31) ಮೃತ ದುರ್ದೈವಿ. ನಿನ್ನೆ ಮಧ್ಯಾಹ್ನ 12 ಗಂಟೆಗೆ ಸಾವನ್ನಪ್ಪಿರುವ ರುಕ್ಮಿಣಿ.
ಮಗಳ ಸಾವಿನ ಸುದ್ದಿ ತಿಳಿದು ಮಂಡ್ಯದಿಂದ ಬಂದ ರುಕ್ಮಿಣಿ ಕುಟುಂಬಸ್ಥರಿಂದ ಗೋಳಾಟ. ಇದು ಸಾವಲ್ಲ, ಕೊಲೆ ಮಗಳ ಸಾವಿಗೆ ನ್ಯಾಯ ಕೊಡಿಸುವಂತೆ ಎಸ್ಪಿ ಕಚೇರಿ ಮುಂದೆ ಕಣ್ಣೀರಿಟ್ಟ ಕುಟುಂಬ
ಮಂಡ್ಯ ಜಿಲ್ಲೆ ರಾಗಿಮುದ್ದನಹಳ್ಳಿ ಮೂಲದ ರುಕ್ಮಿಣಿ. ಕಳೆದ 13 ವರ್ಷಗಳ ಹಿಂದೆ ಕಡೂರಿನ ಕಣ್ಣನ್ ಗೆ ಮದುವೆ ಮಾಡಿಕೊಟ್ಟಿದ್ದ ಸಂಬಂಧಿಕರು. ಆದರೆ ಮದುವೆ ಆದಾಗಿನಿಂದಲೂ ಅತ್ತೆ-ಮಾವ, ಗಂಡನಿಂದ ಕಿರುಕುಳ ಕೊಡುತ್ತಿದ್ದರೆಂದು ರುಕ್ಷಿಣಿ ಗಂಡ ಕಣ್ಣನ್ ವಿರುದ್ಧ ಕೊಲೆ ಆರೋಪ ಮಾಡುತ್ತಿರುವ ಕುಟುಂಬಸ್ಥರು.
Chikkaballapur: ಕಾಲೇಜಿನ ಹಾಸ್ಟೆಲ್‌ನಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು
ರುಕ್ಮಿಣಿ ಸಾವಿನ ನಂತರ ಹಲ್ಲೆ ಮಾಡಿರುವುದಾಗಿ ಒಪ್ಪಿಕೊಂಡಿರುವ ಕಣ್ಣನ್ ಆಡಿಯೋ ಲಭ್ಯವಾಗಿದೆ. ಆದರೂ ದೂರು ದಾಖಲಿಸಿಕೊಳ್ಳದೇ ಕಡೂರು ಪೊಲೀಸರು ಆತ್ಮಹತ್ಯೆ ಪ್ರಕರಣವೆಂದು ಕೊಲೆ ಕೇಸ್ ಮುಚ್ಚಿಹಾಕಲು ಯತ್ನಿಸಿದ್ದಾರೆ ಆರೋಪ. ಹೀಗಾಗಿ ನ್ಯಾಯಕ್ಕಾಗಿ ಎಸ್‌ಪಿ ಕಚೇರಿ ಮುಂದೆ ಅಂಗಲಾಚುತ್ತಿರುವ ಕುಟಂಬ. ಮಗಳ ಸಾವಿಗೆ ನ್ಯಾಯ ನೀಡುವಂತೆ ಕಣ್ಣೀರಿಟ್ಟ ಕುಟುಂಬ.