ತುಮಕೂರು: ಮನೆ ಬಿಟ್ಟು ತೆರಳದ ಅತ್ತೆಯ ಬುರುಡೆ ಬಿಚ್ಚಿದ ಸೊಸೆ..!

ತುಮಕೂರು ಜಿಲ್ಲೆಯ ಕುಣಿಗಲ್ ಪಟ್ಟಣದ ಕೆಆರ್‌ಎಸ್ ಆಗ್ರಹಾರದಲ್ಲಿ ನಡೆದ ಘಟನೆ 

Daughter in law Fatally Assaults Mother in law at Kunigal in Tumakuru grg

ತುಮಕೂರು(ನ.05):  ಮನೆ ಬಿಟ್ಟು ತೆರಳದ ಅತ್ತೆಗೆ ಮೇಲೆ ಸೊಸೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ತುಮಕೂರು ಜಿಲ್ಲೆ ಕುಣಿಗಲ್ ಪಟ್ಟಣದ ಕೆಆರ್‌ಎಸ್ ಆಗ್ರಹಾರದಲ್ಲಿ ನಡೆದಿದೆ. ಅತ್ತೆ ಚಿಕ್ಕತಾಯಮ್ಮ ಮೇಲೆ ಕಬ್ಬಿಣದ ಪೈಪ್‌ನಿಂದ ಸೊಸೆ ಸೌಮ್ಯ ಹಲ್ಲೆ ನಡೆಸಿದ್ದಾಳೆ. ಸದ್ಯ ಮಾರಣಾಂತಿಕ ಹಲ್ಲೆಗೆ ಒಳಗಾದ ಅತ್ತೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. 

ಚಿಕ್ಕತಾಯಮ್ಮಗೆ ಶಿವಕುಮಾರ್ ಹಾಗೂ ಎನ್.ಶಂಕರ್ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ. ಎನ್.ಶಂಕರ್ ಪತ್ನಿ ಸೌಮ್ಯ ಬೆಂಗಳೂರಿನ ಶಿವಕುಮಾರ್ ಮನೆಗೆ ತೆರಳುವಂತೆ ಅತ್ತೆಗೆ ಒತ್ತಾಯಿಸುತ್ತಿದ್ದಳಂತೆ. ಸೊಸೆ ಸೌಮ್ಯ ವರ್ತನೆ‌ ಬಗ್ಗೆ ಅಕ್ಕಪಕ್ಕದವರೂ ಕೂಡ ಬುದ್ದಿವಾದ ಹೇಳಿದ್ದರು. ಇದೇ‌ ವಿಚಾರವಾಗಿ ಆರಂಭವಾದ ಜಗಳ ಹಲ್ಲೆಗೆ ತಿರುಗಿದೆ.  

Hassan: ಆಣೆ-ಪ್ರಮಾಣ ಮಾಡಲು ಹೋದ ಇಬ್ಬರು ಸ್ನೇಹಿತರು ನೀರುಪಾಲು

ಸೌಮ್ಯ ಇಬ್ಬರು‌ ಮಕ್ಕಳು ಮನೆಯಿಂದ ಓಡಿ ಬಂದಾಗ ಗಲಾಟೆ ವಿಚಾರ ಬೆಳಕಿಗೆ ಬಂದಿದೆ. ಮನೆಯೊಳಗೆ ಹೋದ ಸ್ಥಳೀಯರಿಗೆ ಅತ್ತೆ ಸೊಸೆ ಜಗಳ ಕಣ್ಣಿಗೆ ಬಿದ್ದಿದೆ. ಜಗಳ ಬಿಡಿಸಿ ಹಲ್ಲೆಗೊಳಗಾಗಿದ್ದ ಅತ್ತೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ತಾಲೂಕು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ‌ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಆದಿ ಚುಂಚನಗಿರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ ಅಂತ ತಿಳಿದು ಬಂದಿದೆ. ಈ ಸಂಬಂಧ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
 

Latest Videos
Follow Us:
Download App:
  • android
  • ios