Crime News: ಅಮ್ಮ ತನ್ನಿಷ್ಟದ ಅಡುಗೆ ಮಾಡಲಿಲ್ಲವೆಂದು ಮಗಳು ಆತ್ಮಹತ್ಯೆ
Crime News: ತನ್ನಿಷ್ಟದ ಅಡುಗೆ ಮಾಡಲಿಲ್ಲವೆಂದು ತಾಯಿಯೊಂದಿಗೆ ಜಗಳವಾಡಿ 16 ವರ್ಷದ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರಾಖಂಡದಲ್ಲಿ ನಡೆದಿದೆ
ಡೆಹ್ರಾಡೂನ್ (ಸೆ. 17): ತನ್ನಿಷ್ಟದ ಅಡುಗೆ (Food)ಮಾಡಲಿಲ್ಲವೆಂದು ತಾಯಿಯೊಂದಿಗೆ ಜಗಳವಾಡಿ 16 ವರ್ಷದ ಬಾಲಕಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ (Suicide) ಮಾಡಿಕೊಂಡಿರುವ ಘಟನೆ ಉತ್ತರಾಖಂಡದ ಡೆಹ್ರಾಡೂನ್ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಾಲಕಿಯನ್ನು ಡೆಹ್ರಾಡೂನ್‌ನ ರಾಯ್‌ಪುರದ ದಾದಾ ಲಖೋಂಡ್ ನಿವಾಸಿ ಎಂದು ಗುರುತಿಸಲಾಗಿದೆ. ಗುರುವಾರ ರಾತ್ರಿ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಗುರುವಾರ ಬಾಲಕಿ ತನ್ನ ತಾಯಿ ಊಟಕ್ಕೆಂದು ಮಾಡಿದ ಅಡುಗೆ ಬಗ್ಗೆ ಅಸಮಾಧಾನವನ್ನು ವ್ಯಕ್ತಪಡಿಸಿದ್ದಳು ಮತ್ತು ಊಟ ಮಾಡಲು ಸಹ ನಿರಾಕರಿಸಿದ್ದಳು ಎಂದು ಬಾಲಕಿ ಕುಟುಂಬ ಸದಸ್ಯರು ಮತ್ತು ನೆರೆಹೊರೆಯವರ ತಿಳಿಸಿದ್ದಾರೆ. ನಂತರ ಅವಳು ಕೋಣೆಗೆ ಹೋಗಿ ಒಳಗಿನಿಂದ ಬಾಗಿಲು ಹಾಕಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಮೊದಲಿಗೆ ಮನೆಯವರು ಇದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ ಹಲವು ಗಂಟೆಗಳ ಬಲಿಕವೂ ಆಕೆ ಕೊಠಡಿಯಿಂದ ಹೊರಗೆ ಬಾರದೇ ಇದ್ದಾಗ ಆತಂಕಗೊಂಡು ಆಕೆಯನ್ನು ಕರೆದಿದ್ದಾರೆ. ಆಕೆಯ ಕುಟುಂಬದ ಸದಸ್ಯರು ಆಕೆಯ ಕೋಣೆಯ ಬಾಗಿಲು ಬಡಿದು ಬಾಗಿಲು ತೆರೆಯುವಂತೆ ಕೇಳಿಕೊಂಡರೂ ಆಕೆ ಸ್ಪಂದಿಸಿರಲಿಲ್ಲ. ನಂತರ ಬಾಗಿಲು ಒಡೆದು ನೋಡಿದಾಗ ಆಕೆ ಸೀಲಿಂಗ್‌ನಿಂದ ನೇಣು ಬಿಗಿದುಕೊಂಡಿರುವುದು ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಲಾಡ್ಜ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯ ಡೆತ್ ನೋಟ್‌ನಿಂದ ಕಾಣೆಯಾಗಿದ್ದ ಮಹಿಳಾ ಪೇದೆ ಶವ ಪತ್ತೆ
ಕೂಡಲೇ ಕುಟುಂಬಸ್ಥರು ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಆಕೆ ಮೃತಪಟ್ಟಿದ್ದಾಳೆ ಎಂದು ವೈದ್ಯರು ದೃಢಪಡಿಸಿದ್ದಾರೆ. ಇನ್ನು ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.