Asianet Suvarna News Asianet Suvarna News

ಯಾದಗಿರಿ: ಪಂಚರ್‌ ಅಂಗಡಿ ಯುವಕನಿಗೆ ಜೀವಬೆದರಿಕೆ, ದರ್ಶನ್ ಅಭಿಮಾನಿಯ ಹೆಡೆಮುರಿ ಕಟ್ಟಿದ ಪೊಲೀಸ್‌..!

ಯಾದಗಿರಿಯ ಗಂಗಾನಗರದ ಪಂಚರ್ ಅಂಗಡಿ ಯುವಕ ಅಭಿ ಎಂಬಾತನಿಗೆ ದರ್ಶನ್ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷ ರಾಜು ಕೊಲೆ ಬೆದರಿಕೆ ಹಾಕಿದ್ದನಂತೆ. ಬಾಸ್ ಬಾಸ್ ಎಂದು ಯಾಕೆ ಬಕೆಟ್‌ ಹಿಡಿಯುತ್ತಿರಿ? ಬಕೆಟ್ ಯಾಕ್ ಹಿಡಿತೀರಿ. ತಾಯಿ-ತಂದೆಗೆ ಬಕೆಟ್ ಹಿಡಿಯಿರಿ ಎಂದು ಅಭಿ ಇ‌ನ್ಸ್ಟಾಗ್ರಾಂನಲ್ಲಿ ಪೋಸ್ಟ್‌ವೊಂದನ್ನು ಹಾಕಿದ್ದನು. ಹೀಗಾಗಿ ಅಭಿಗೆ ಕಾಲ್ ಮಾಡಿ ಜೀವಂತವಾಗಿ ಸುಡೋದಾಗಿ ರಾಜು ಬೆದರಿಸಿದ್ದ. ನಿನ್ನ ಮನೆ ಹಾಗೂ ಅಂಗಡಿಗೆ ಬೆಂಕಿ ಹಚ್ಚಬೇಕಾಗುತ್ತದೆ ಎಂದು ಕರೆ ಮಾಡಿ ಹೆದರಿಸಿದ್ದನು. 

Darshan Fan Arrested For Who Life Threat to Young Man in Yadgir grg
Author
First Published Jun 15, 2024, 1:28 PM IST

ಯಾದಗಿರಿ(ಜೂ.15): ನಟ ದರ್ಶನ್ ಅಭಿಮಾನಿಯಿಂದ ಯುವಕನಿಗೆ ಜೀವಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜೀವಬೆದರಿಕೆ ಹಾಕಿದ್ದ ರಾಜುನನ್ನು ಯಾದಗಿರಿ ನಗರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ದರ್ಶನ್ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷ ರಾಜುನನ್ನು ಪೋಲಿಸರು ಬಂಧಿಸಿದ್ದಾರೆ.  ಆಡಿಯೋ ವೈರಲ್ ಆಗ್ತಿದ್ದಂತೆ ಯಾದಗಿರಿ ನಗರ ಠಾಣೆಯ ಪೊಲೀಸರು ಅಲರ್ಟ್ ಆಗಿ ಆರೋಪಿಯನ್ನ ಬಂಧಿಸಿದ್ದಾರೆ. 

ಪ್ರಕರಣದ ಹಿನ್ನಲೆ: 

ಯಾದಗಿರಿಯ ಗಂಗಾನಗರದ ಪಂಚರ್ ಅಂಗಡಿ ಯುವಕ ಅಭಿ ಎಂಬಾತನಿಗೆ ದರ್ಶನ್ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷ ರಾಜು ಕೊಲೆ ಬೆದರಿಕೆ ಹಾಕಿದ್ದನಂತೆ. ಬಾಸ್ ಬಾಸ್ ಎಂದು ಯಾಕೆ ಬಕೆಟ್‌ ಹಿಡಿಯುತ್ತಿರಿ? ಬಕೆಟ್ ಯಾಕ್ ಹಿಡಿತೀರಿ. ತಾಯಿ-ತಂದೆಗೆ ಬಕೆಟ್ ಹಿಡಿಯಿರಿ ಎಂದು ಅಭಿ ಇ‌ನ್ಸ್ಟಾಗ್ರಾಂನಲ್ಲಿ ಪೋಸ್ಟ್‌ವೊಂದನ್ನು ಹಾಕಿದ್ದನು. ಹೀಗಾಗಿ ಅಭಿಗೆ ಕಾಲ್ ಮಾಡಿ ಜೀವಂತವಾಗಿ ಸುಡೋದಾಗಿ ರಾಜು ಬೆದರಿಸಿದ್ದ. ನಿನ್ನ ಮನೆ ಹಾಗೂ ಅಂಗಡಿಗೆ ಬೆಂಕಿ ಹಚ್ಚಬೇಕಾಗುತ್ತದೆ ಎಂದು ಕರೆ ಮಾಡಿ ಹೆದರಿಸಿದ್ದನು. 

ದರ್ಶನ್ ನನ್ನ ಶಿಷ್ಯ ಅಂತ ಹೇಳಿಕೊಳ್ಳೋಕೆ ನಾಚಿಕೆ ಆಗ್ತಿದೆ: ಅಡ್ಡಂಡ ಸಿ ಕಾರ್ಯಪ್ಪ ಟೀಕೆ

ಬಾಸ್ ಅಂದ್ರೂ ಅಷ್ಟೇ, ಡಿ ಬಾಸ್ ಅಂದ್ರೂ ಅಷ್ಟೇ. ಬಾಸ್ ಬಗ್ಗೆ ಮಾತಾಡಿದ್ರೆ ಖಾಲಿಯಾಗ್ತಿದಿ ನೀನು, ಅಂಗಡಿ ಸಮೇತ ಬೆಂಕಿ ಹಚ್ತಾರೆ. ಕೂಡಲೇ ಕ್ಷಮೆ ಕೇಳಿ ವಿಡಿಯೋ ಮಾಡಿ ಹಾಕು. ಹಾಕಿರೋ ವಿಡಿಯೋ ಡಿಲೀಟ್ ಮಾಡು ಎಂದು ದರ್ಶನ್ ಅಭಿಮಾನಿ ಸಂಘದ ಜಿಲ್ಲಾದ್ಯಕ್ಷ ರಾಜು ಬೆದರಿಕೆ ಹಾಕಿದ್ದನು. ಹೀಗಾಗಿ ರಾಜುನನ್ನು ಪೊಲೀಸರು ಬಂಧಿಸಿದ್ದಾರೆ. 

Latest Videos
Follow Us:
Download App:
  • android
  • ios