ಕ್ಷೀರ ಸ್ನಾನ ಮಾಡುತ್ತಿದ್ದ ಕೆಲಸಗಾರ/ ಡೇರಿಯನ್ನು ದೇವಲೋಕ  ಎಂದುಕೊಂಡಿದ್ದನೋ/ ಸ್ನಾನ ಮಾಡ್ತಿದ್ದವ ಮತ್ತು ವಿಡಿಯೋ ಮಾಡಿದವ ಇಬ್ಬರ ಬಂಧನ/ ಸಂಸ್ಕರಣೆ ಹಾಲಿನಲ್ಲಿ ಅಭ್ಯಂಜನ ಸ್ನಾನ!

ಟರ್ಕಿ (ನ. 08) ಅಭಿಮಾನಿಗಳು ತಮ್ಮ ನೆಚ್ಚಿನ ನಟರ ಕಟೌಟ್‌ ಗೆ ಹಾಲಿನ ಅಭಿಷೇಕ ಮಾಡುವುದನ್ನು ನೋಡಿರುತ್ತೇವೆ. ಈಗ ಸೇಬಿನ ಹಾರ ಹಾಕುವುದು ಮತ್ತೊಂದು ಫ್ಯಾಷನ್ ಆಗಿ ಹೋಗಿದೆ. ಆದೆ ಇಲ್ಲೊಬ್ಬ ಕೆಲಸಗಾರ ಕ್ಷೀರ ಸ್ನಾನ ಮಾಡುತ್ತಿದ್ದು ಸಿಕ್ಕಿಬಿದ್ದಿದ್ದಾನೆ.

ಆರೋಗ್ಯಕರ ಸಸ್ಯ ಬೆಳೆಯಲು ಅವಧಿ ಮೀರಿದ ಹಾಲು!

ಕ್ಷೀರಸಾಗರದಲ್ಲಿ ಸ್ನಾನ ಮಾಡುತ್ತಿದ್ದ ಡೇರಿ ವರ್ಕರ್ ಕೆಲಸ ಕಳೆದುಕೊಂಡಿದ್ದಾನೆ. ಡೇರಿ ಸಂಸ್ಕರಣೆ ಹಾಲಿನ ಟಬ್ ನಲ್ಲಿ ಸ್ನಾನ ಮಾಡಿದ ಉಗುರ್ ಟುರ್ಗತ್ ಮತ್ತು ವಿಡಿಯೋ ಮಾಡಿದ ಅಸಾಮಿ ಇಬ್ಬರನ್ನು ಬಂಧಿಸಲಾಗಿದೆ.

ಡೇರಿ ಸಂಸ್ಕರಣೆ ಹಾಲನ್ನು ಸ್ನಾನಕ್ಕೆ ಬಳಸಿಕೊಂಡಿದ್ದಾರೆ. ವಿಡಿಯೋ ಸೊಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಕಾನೂನು ಕ್ರಮ ತೆಗೆದುಕೊಳ್ಳಲಾಗಿದೆ.