ಬೆಂಗಳೂರು(ಏ.25): ಕೊರೋನಾ ಭೀತಿ ಹಿನ್ನೆಲೆಯಲ್ಲಿ ಮನೆಯಿಂದಲೇ ಮದ್ಯ ಖರೀದಿಗೆ ಯತ್ನಿಸಿದ ಗ್ರಾಹಕರೊಬ್ಬರಿಗೆ ಸೈಬರ್‌ ಕಳ್ಳರು ಟೋಪಿ ಹಾಕಿದ್ದಾರೆ.

ವಂಚನೆಗೆ ಒಳಗಾಗಿರುವ ಎಲೆಕ್ಟ್ರಾನಿಕ್‌ ಸಿಟಿಯ ರಾಜರ್ಷಿ ಜೈನ್‌ ಎಂಬುವರು ನೀಡಿದ ದೂರಿನ ಮೇರೆಗೆ ಆರೋಪಿ ಅಮನ್‌ ದೀಪ್‌ ವಿರುದ್ಧ ಆಗ್ನೇಯ ವಿಭಾಗದ ಸಿಇಎನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜನ ಮರಳೋ ಜಾತ್ರೆ ಮರಳೋ: ಜೈ ಶ್ರೀರಾಮ್‌ ಘೋಷಣೆ ಕೂಗಿಸಿ ಚಿನ್ನಾಭರಣ ಎಗರಿಸಿದ..!

ಕೊರೋನಾ ಸೋಂಕಿನ ಭೀತಿಯಿಂದ ಮನೆಯಲ್ಲಿಯೇ ಉಳಿದುಕೊಂಡಿದ್ದ ರಾಜರ್ಷಿ, ಆನ್‌ಲೈನ್‌ನಲ್ಲಿ ಹುಡುಕಾಟ ನಡೆಸಿದಾಗ ಮದ್ಯವನ್ನು ಮನೆಗೆ ತಲುಪಿಸುವುದಾಗಿ ಅಮನ್‌ ದೀಪ್‌ ಜಾಹೀರಾತು ನೀಡಿದ್ದ. ಇದನ್ನು ಗಮನಿಸಿದ ರಾಜರ್ಷಿ, ಆರ್ಡರ್‌ ಮಾಡಿದ್ದರು. ಅದಕ್ಕೆ ಅಮನ್‌ ದೀಪ್‌, ಮುಂಗಡ ಹಣ ಪಾವತಿ ಮಾಡಬೇಕೆಂದು ಹಂತ ಹಂತವಾಗಿ 44,700 ಪಾವತಿ ಮಾಡಿಸಿಕೊಂಡಿದ್ದಾರೆ. ಮತ್ತೆ ಹಣ ಕೇಳಿದಾಗ ಅನುಮಾನ ಬಂದು ರಾಜರ್ಷಿ, ವಾಪಸ್‌ ಹಣ ಕೇಳಿದ್ದಾರೆ. ಅಷ್ಟೊತ್ತಿಗೆ ಆರೋಪಿ ಮೊಬೈಲ್‌ ನಂಬರ್‌ ಸ್ವಿಚ್‌ಆಫ್‌ ಮಾಡಿಕೊಂಡಿದ್ದಾನೆ. ಕೊನೆಗೆ ವಂಚನೆಗೆ ಒಳಗಾಗಿರುವುದು ಖಚಿತವಾಗಿ ಠಾಣೆಗೆ ಬಂದು ದೂರು ನೀಡಿದ್ದಾರೆ.