Asianet Suvarna News

ಪಿಜಿಯಿಂದಲೇ ಲಕ್ಷಾಂತರ ಹಣ ದೋಚಿದ್ದ ಪ್ರಖ್ಯಾತ ವೆಬ್‌ಸಿರೀಸ್ ನಟಿಯರು!

* ಹಣ ಕದ್ದು ಪರಾರಿಯಾಗಿದ್ದ ಇಬ್ಬರು ನಟಿಯರ ಬಂಧನ
* ವೆಬ್ ಸೀರಿಸ್ ನಲ್ಲಿ ಕಾಣಿಸಿಕೊಂಡಿದ್ದರು
* ಕೊರೋನಾ ಕಾರಣಕ್ಕೆ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದರು
* ನಟಿಯರನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ

Crime Patrol actresses arrested for stealing money from PG Mumbai mah
Author
Bengaluru, First Published Jun 18, 2021, 4:07 PM IST
  • Facebook
  • Twitter
  • Whatsapp

ಮುಂಬೈ(ಜೂ. 18)  ಅಪರಾಧ ಜಗತ್ತಿನ ಕತೆಯನ್ನು ಆಧರಿಸಿದ್ದ ವೆಬ್ ಸೀರಿಸ್ ಗಳಲ್ಲಿಅಭಿನಯ ಮಾಡುತ್ತಿದ್ದ ಇಬ್ಬರು ನಟಿಯರನ್ನು ಕಳ್ಳತನದ ಆರೋಪದ ಮೇಲೆ ಬಂಧಿಸಲಾಗಿದೆ.

ಆರ್ಥಿಕ ಬಿಕ್ಕಟ್ಟಿನಿಂದ ಬಳಲುತ್ತಿದ್ದ ನಟಿಯರು ಕಳ್ಳತನಕ್ಕೆ ಇಳಿದಿದ್ದಾರೆ. ಕೆಲ ದಿನಗಳ ಹಿಂದೆ ನಟಿಯರು ಆರೆ ಕಾಲೋನಿಯ ರಾಯಲ್ ಪಾಮ್ ಪ್ರದೇಶಕ್ಕೆ ಶಿಫ್ಟ್ ಆಗಿದ್ದರು, 

ಈ ಇಬ್ಬರು  ನಟಿಯರು ತಮ್ಮ ಸ್ನೇಹಿತೆಯ ಪಿಜಿಯಲ್ಲಿ ವಾಸವಿದ್ದರು. ಮೇ 18 ರಂದು ಅದೇ ಪಿಜಿಯಲ್ಲಿ ವಾಸವಿದ್ದ ಇನ್ನೊಬ್ಬ ಮಹಿಳೆಗೆ ಸೇರಿದ  ಲಾಕರ್ ನಿಂದ 3,28,000 ರೂ. ಅಪಹರಣ ಮಾಡಿಕೊಂಡು ಪರಾರಿಯಾಗಿದ್ದಾರೆ. 

ಬೆಳಗ್ಗೆ ಸೆಕ್ಯೂರಿಟಿ ಗಾರ್ಡ್, ರಾತ್ರಿಯಾದರೆ ಚಾಲಾಕಿ ಕಳ್ಳರು

ಪೊಲೀಸರಿಗೆ ದೂರು ಕೊಟ್ಟ ಹಣ ಕಳೆದುಕೊಂಡ ಮಹಿಳೆ  ನಟಿಯರಾದ ಸುರಭಿ ಸುರೇಂದ್ರ ಲಾಲ್ ಶ್ರೀವಾಸ್ತವ (25) ಮತ್ತು ಮೋಸಿನಾ ಮುಖ್ತಾರ್ ಶೇಖ್ (19) ತನ್ನ ಹಣ ಕದ್ದಿದ್ದಾರೆ ಎಂದು ಅನುಮಾನ ವ್ಯಕ್ತಪಡಿಸಿದ್ದರು. ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿದಾಗ ನಟಿಯರ ಚಲನವಲನ ಕಂಡುಬಂದಿತ್ತು. ಹಣದ ಬಂಡಲ್ ಕೈಯಲ್ಲಿ ಹಿಡಿದುಕೊಂಡು ಸಾಗುವುದು ಸೆರೆಯಾಗಿತ್ತು.

ಕ್ರೈಂ ಪಟ್ರೋಲ್,  ಸಾವಧಾನ್ ಇಂಡಿಯಾದಲ್ಲಿ ಇಬ್ಬರು ನಟಿಸಿದ್ದರು.  ಇಬ್ಬರು  ನಟಿಯರನ್ನು ಬಂಧಿಸಲಾಗಿದ್ದು ಅವರಿಂದ  50,000 ರೂ.  ವಶಕ್ಕೆ ಪಡೆಯಲಾಗಿದ್ದು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.(ಚಿತ್ರ ಕೃಪೆ; ಎಎನ್‌ಐ) 

 

Follow Us:
Download App:
  • android
  • ios