Asianet Suvarna News Asianet Suvarna News

ದೇಶದಲ್ಲಿ ದಿನಕ್ಕೆ 80 ಕೊಲೆ, 289 ಕಿಡ್ನ್ಯಾಪ್‌, 91 ರೇಪ್‌!

2018ನೇ ಸಾಲಿನಲ್ಲಿ ದೇಶದಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗಿವೆ ಎಂದು ರಾಷ್ಟ್ರೀಯ ಕ್ರೈಂ ಬ್ಯೂರೋ ಮಾಹಿತಿ ಬಿಡುಗಡೆ ಮಾಡಿದೆ. 

Crime in India increasedNCRB Reveal
Author
Bengaluru, First Published Jan 10, 2020, 10:59 AM IST

ನವದೆಹಲಿ [ಜ.10]:  2018ನೇ ಸಾಲಿನಲ್ಲಿ ದೇಶದಲ್ಲಿ ನಡೆದಿರುವ ಅಪರಾಧ ಪ್ರಕರಣಗಳ ಸಂಖ್ಯೆ ನೋಡಿದರೆ ನಡುಕ ಹುಟ್ಟುವುದು ಖಚಿತ. ಏಕೆಂದರೆ ಈ ಸಾಲಿನಲ್ಲಿ ದಿನಕ್ಕೆ ಸರಾಸರಿ 80 ಕೊಲೆ, 289 ಅಪಹರಣ ಹಾಗೂ 91 ಅತ್ಯಾಚಾರ ಪ್ರಕರಣಗಳು ನಡೆದಿವೆ. ಹೌದು. ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೋ (ಎನ್‌ಸಿಆರ್‌ಬಿ) ಬಿಡುಗಡೆ ಮಾಡಿರುವ ದತ್ತಾಂಶಗಳಲ್ಲಿ ಈ ಆತಂಕಕಾರಿ ಅಂಕಿ-ಅಂಶಗಳಿವೆ.

ದೇಶದಲ್ಲಿ 2018ರಲ್ಲಿ 50,74,634 ಕಾಗ್ನಿಜೆಬಲ್‌ ಪ್ರಕರಣಗಳು (ದಂಡಾಧಿಕಾರಿಯ ಅಪ್ಪಣೆ ಇಲ್ಲದೇ ಪೊಲೀಸರು ಬಂಧಿಸಬಹುದಾದ ಪ್ರಕರಣ) ನಡೆದಿವೆ. ಇವುಗಳಲ್ಲಿ 31,32,954 ಭಾರತೀಯ ದಂಡ ಸಂಹಿತೆ (ಐಪಿಸಿ) ಅಡಿ ದಾಖಲಾದ ಪ್ರಕರಣಗಳಾದರೆ 19,41,680 ವಿಶೇಷ ಹಾಗೂ ಸ್ಥಳೀಯ ಕಾನೂನಿನ ಮೂಲಕ ದಾಖಲಾದ ಪ್ರಕರಣಗಳು. 2017ರಲ್ಲಿ ಇದಕ್ಕಿಂತ ಕಮ್ಮಿ ಎಂದರೆ 50,07,044 ಪ್ರಕರಣ ದಾಖಲಾಗಿದ್ದವು.

ಕೊಲೆಗಳು ಶೇ.1.3ರಷ್ಟುಹೆಚ್ಚು:

2018ನೇ ಸಾಲಿನಲ್ಲಿ 29,017 ಕೊಲೆ ಪ್ರಕರಣಗಳು ದಾಖಲಾಗಿವೆ. 2017ರಲ್ಲಿ ಇವುಗಳ ಸಂಖ್ಯೆ 28,653 ಇತ್ತು. ಇದರಿಂದಾಗಿ ಕೊಲೆಗಳ ಸಂಖ್ಯೆಯಲ್ಲಿ ಪ್ರತಿಶತ 1.3ರಷ್ಟುವೃದ್ಧಿಯಾಗಿದೆ. ವಿವಾದಗಳಿಗೆ ಸಂಬಂಧಿಸಿದಂತೆ 9,623 ಕೊಲೆ, ವೈಯಕ್ತಿಕ ದ್ವೇಷಕ್ಕಾಗಿ 3,875 ಕೊಲೆ, ಆಸ್ತಿ ಗಿಟ್ಟಿಸಲು 2,995 ಕೊಲೆಗಳು ನಡೆದಿವೆ.

ಅಪಹರಣ ಶೇ.10.3 ಅಧಿಕ:

2017ರಲ್ಲಿ 95,893 ಅಪಹರಣಗಳು ನಡೆದಿದ್ದವು. ಇವುಗಳ ಸಂಖ್ಯೆ 2018ರಲ್ಲಿ ಶೇ.10.3ರಷ್ಟುಹೆಚ್ಚಾಗಿವೆ. ಅಂದರೆ 1,05,734 ಅಪಹರಣ ಪ್ರಕರಣಗಳು ನಡೆದಿವೆ. 2016ರಲ್ಲಿ 88,008 ಅಪಹರಣ ಪ್ರಕರಣ ದಾಖಲಾಗಿದ್ದವು. 1,05,734 ಪ್ರಕರಣಗಳಲ್ಲಿ 24,665 ಪುರುಷರ ಅಪಹರಣ ನಡೆದಿದ್ದರೆ, 80,871 ಮಹಿಳೆಯರ ಅಪಹರಣ ನಡೆದಿವೆ. ಈ ಒಟ್ಟು ಸಂಖ್ಯೆಯಲ್ಲಿ ಮಕ್ಕಳ ಅಪಹರಣ ಹೆಚ್ಚಿದೆ. 63,356 ಮಕ್ಕಳ ಅಪಹರಣ (15,250 ಬಾಲಕರು, 48,106 ಬಾಲಕಿಯರು) ನಡೆದಿವೆ.

ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಅತ್ತೆಗೆ ಕಾವು ಕಚ್ಚಿಸಿ ಕೊಲ್ಲಿಸಿದ ಸೊಸೆ...

ಮಹಿಳೆಯರ ವಿರುದ್ಧ ಅಪರಾಧ ಹೆಚ್ಚು:

ಮಹಿಳೆಯರ ವಿರುದ್ಧದ ಅಪರಾಧ ವಿಚಾರದಲ್ಲಿ 2016ರಲ್ಲಿ 3,38,954 ಪ್ರಕರಣ ಹಾಗೂ 2017ರಲ್ಲಿ 3,59,849 ಪ್ರಕರಣ ನಡೆದಿದ್ದವು. ಆದರೆ 2018ರಲ್ಲಿ ಇವುಗಳ ಸಂಖ್ಯೆ 3,78,277ಕ್ಕೇರಿದೆ.

2016ರಲ್ಲಿ 38,947 ಅತ್ಯಾಚಾರ, 2017ರಲ್ಲಿ 32,559 ಅತ್ಯಾಚಾರ ನಡೆದಿದ್ದವು. ಆದರೆ 2018ರಲ್ಲಿ 33,356 ಅತ್ಯಾಚಾರ ಸಂಭವಿಸಿವೆ.

ಅಪರಾಧ ಶೇ.1.3ರಷ್ಟುಹೆಚ್ಚು:

ಒಟ್ಟಾರೆ ಅಪರಾಧ ಪ್ರಕರಣಗಳ ಸಂಖ್ಯೆ (50,07,044) ಗಮನಿಸಿದಾಗ 2017ಕ್ಕಿಂತ ಶೇ.1.3ರಷ್ಟುಇವುಗಳ ಪ್ರಮಾಣ ಹೆಚ್ಚಾಗಿದೆ. ಆದರೆ ಪ್ರತಿ 1 ಲಕ್ಷ ಜನಸಂಖ್ಯೆಗೆ ಹೋಲಿಸಿದಾಗ 2017ರಲ್ಲಿ 388.6 ಪ್ರಕರಣ ನಡೆದಿದ್ದರೆ 2018ರಲ್ಲಿ 383.5 ಪ್ರಕರಣ ನಡೆದಿವೆ.

ಅಪರಾಧ ಅಂಕಿ ಅಂಶ

ಅಪರಾಧ ಕೇಸುಗಳ ಸಂಖ್ಯೆ (2018) ಕೇಸುಗಳ ಸಂಖ್ಯೆ (2017)

ಒಟ್ಟಾರೆ ಅಪರಾಧ 50,74,634 50,07,044

ಕೊಲೆ 29,017 28,653

ಮಹಿಳೆಯರ ವಿರುದ್ಧದ ಅಪರಾಧ 3,78,277 3,59,849

ಅತ್ಯಾಚಾರ 33,356 32,559

ಅಪಹರಣ 1,05,734 95,893

Follow Us:
Download App:
  • android
  • ios