ಉಡುಪಿ, (ಅ.31): ಇಲ್ಲಿನ ಮಣಿಪುರ ಗ್ರಾಮದ ಕಲ್ಮಂಜೆ ಎಂಬಲ್ಲಿ ರಾಘು ಆರ್.ಬಂಗೇರ (79) ಎಂಬವರು ಶುಕ್ರವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

 ಅವರು ಮಗ ವಿಶ್ವನಾಥ ಬಂಗೇರ ಎಂಬರೊಂದಿಗೆ ವಾಸವಾಗಿದ್ದರು. ಅವರಿಬ್ಬರಿಗೂ ಕೆಲವು ದಿನಗಳ ಹಿಂದೆ ಕೊರೋನಾ ಸೋಂಕು ತಗಲಿದ್ದು, ಚಿಕಿತ್ಸೆಗೆ ಮನೆಯಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. 

ಸಿಹಿ ಸುದ್ದಿ: ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಇಳಿಕೆಯಾಗ್ತಿದೆ ಕೊರೋನಾ ಸೋಂಕಿತರ ಸಂಖ್ಯೆ

ಇದರಿಂದ ಬೇಸತ್ತ ರಾಘು ಬಂಗೇರ ಅವರು ರಾತ್ರಿ, ಮಗ ಮಲಗಿದ ಮೇಲೆ ಮನೆಯ ಪಕ್ಕದ ದನದ ಕೊಟ್ಟಿಗೆಯಲ್ಲಿ ನೈಲಾನ್ ಹಗ್ಗದಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ