ಗದಗ(ಫೆ.19): ಹೆತ್ತ ಮಗುವನ್ನೇ ಕೊಂದ ಪಾಪಿ ತಂದೆಗೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮರಣದಂಡನೆ ಶಿಕ್ಷೆ ನೀಡಿ ತೀರ್ಪು ನೀಡಿದೆ. ಅಪರಾಧಿ ಪ್ರಶಾಂತಗೌಡ ಪಾಟೀಲ್‌ನಿಗೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನ್ಯಾಯಾಧೀಶ ರಾಜಶೇಖರ ವಿ ಪಾಟೀಲ್ ಅವರು ಮರಣ ದಂಡನೆ ಶಿಕ್ಷೆ ನೀಡಿದ್ದಾರೆ. 

ಪ್ರಕರಣದ ಹಿನ್ನೆಲೆ: 

ಗದಗ ಜಿಲ್ಲೆಯ ರೋಣ ತಾಲೂಕಿನ ಹುಲ್ಲೂರ ಗ್ರಾಮದ ಪ್ರಶಾಂತಗೌಡ ಪಾಟೀಲ್‌ ಮಹಿಳೆಯೊಬ್ಬಳ ಜೊತೆ ಪ್ರೀತಿಯ ನಾಟಕವಾಡಿ ಮದುವೆಯಾಗಿ ವಂಚನೆ ಮಾಡಿದ್ದ, ಇಬ್ಬರ ಜೋಡಿಗೆ ಮಗು ಕೂಡ ಹುಟ್ಟಿತ್ತು. ಹೀಗಾಗಿ ನೊಂದ ಮಹಿಳೆ ತನಗೆ ಜೀವನಾಂಶ ಬೇಡಿ‌ ಕೋರ್ಟ್ ಮೆಟ್ಟೆಲೇರಿದ್ದರು.

ಕೊರೋನಾ ರೋಗ ಮುಚ್ಟಿಟ್ಟರೆ ಮರಣದಂಡನೆ!

ಇದರಿಂದ ಕುಪಿತಗೊಂಡಿದ್ದ ಅಪರಾಧಿ ಪ್ರಶಾಂತಗೌಡ ಪಾಟೀಲ್‌ ಏ. 6, 2015ರಂದು ತನ್ನ ಒಂದೂವರೆ ವರ್ಷದ ಮಗುವನ್ನೇ ಅಪಹರಿಸಿ ಕತ್ತು ಹಿಸುಕಿ, ಸುಟ್ಟು ಹಾಕಿ ವಿಕೃತಿ ಮೆರೆದಿದ್ದನು. ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದ ಕಾಲಕಾಲೇಶ್ವರ ಗುಡ್ಡದಲ್ಲಿ ಮಗುವನ್ನು ಕೊಲೆ ಮಾಡಿದ್ದನು. ಈ ಸಂಬಂಧ ಗಜೇಂದ್ರಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಮಗುವನ್ನ ಕೊಂದ ತಂದೆಗೆ ನ್ಯಾಯಾಲಯ ಮರಣದಂಡನೆ ಶಿಕ್ಷೆ ನೀಡಿದೆ.