ಬೈಕ್‌ನ ಹಿಂದೆ ಹಗ್ಗದಲ್ಲಿ ನಾಯಿಯನ್ನು ಕಟ್ಟಿ ಎಳೆದೊಯ್ದ ಇಬ್ಬರು| ಸುರತ್ಕಲ್‌ ಎನ್‌ಐಟಿಕೆ ಸಮೀಪ ನಡೆದ ಘಟನೆ|ನಾಯಿಗೆ ಚಲನವಲನವಿಲ್ಲದ ಕಾರಣ ಅದು ಬದುಕಿರುವ ಸಾಧ್ಯತೆಯೂ ಕಡಿಮೆ|  

ಮಂಗಳೂರು(ಏ.23): ಕೇರಳದ ಮಲಪ್ಪುರಂನಂತೆ ಮಂಗಳೂರಲ್ಲೂ ನಾಯಿಯನ್ನು ವಾಹನಕ್ಕೆ ಕಟ್ಟಿ ಎಳೆದೊಯ್ದ ಅಮಾನವೀಯ ಘಟನೆ ತಡವಾಗಿ ಬೆಳಕಿಗೆ ಬೆಳಕಿಗೆ ಬಂದಿದೆ.

"

ಸುರತ್ಕಲ್‌ ಎನ್‌ಐಟಿಕೆ ಸಮೀಪ ಏ.15ರಂದು ನಡೆದಿರುವ ಘಟನೆಯನ್ನು ಯುವಕರೊಬ್ಬರು ಚಿತ್ರೀಕರಿಸಿದ್ದು, ಅದನ್ನು ಅನಿಮಲ್‌ ಕೇರ್‌ ಟ್ರಸ್ವ್‌ ಜೊತೆ ಹಂಚಿಕೊಂಡಿದ್ದಾರೆ. ಅದರಂತೆ ಸುರತ್ಕಲ್‌ ಠಾಣೆಯಲ್ಲಿ ದೂರು ನೀಡಲಾಗಿದೆ. ಏ.15ರಂದು ರಾತ್ರಿ ಸುಮಾರು 8.30ಕ್ಕೆ ಬೈಕ್‌ನ ಹಿಂದೆ ಹಗ್ಗದಲ್ಲಿ ನಾಯಿಯನ್ನು ಕಟ್ಟಿ ಇಬ್ಬರು (ಒಬ್ಬಾತ ಪಂಚೆ ಧರಿಸಿದ್ದಾನೆ) ಸಾಗುತ್ತಿದ್ದರು. ಅದರ ಹಿಂದೆಯೇ ಇನ್ನೊಂದು ನಾಯಿ ಕೂಡ ಸ್ವಲ್ಪ ದೂರ ಓಡೋಡಿ ಬಂದಿದೆ. 

ಶ್ವಾನಗಳಿಗೂ ಜೀವಿಸುವ ಹಕ್ಕಿದೆ: ಹೈಕೋರ್ಟ್‌

ಹೈವೇಯಲ್ಲಿದ್ದರೆ, ದುಷ್ಕರ್ಮಿಗಳು ಸರ್ವಿಸ್‌ ರಸ್ತೆಯಲ್ಲಿದ್ದರು. ವಿಡಿಯೋದಲ್ಲಿ ನಾಯಿಗೆ ಚಲನವಲನವಿಲ್ಲದ ಕಾರಣ ಅದು ಬದುಕಿರುವ ಸಾಧ್ಯತೆಯೂ ಕಡಿಮೆ. ಈ ವಿಚಾರವನ್ನು ಬಹಿರಂಗ ಪಡಿಸಲು ವಿಡಿಯೋ ಚಿತ್ರೀಕರಿಸಿದ್ದ ಯುವಕರು ಹೆದರಿದ್ದು, ಕೆಲ ದಿನಗಳ ಬಳಿಕವಷ್ಟೇ ಅನಿಮಲ್‌ ಕೇರ್‌ ಟ್ರಸ್ಟ್‌ಗೆ ಕಳುಹಿಸಿದ್ದಾರೆ. ನಾಯಿ ಚಪ್ಪಲಿ ಕಚ್ಚಿದೆ ಎಂಬ ಕಾರಣಕ್ಕೆ ಕೇರಳದ ಮಲಪ್ಪುರಂನಲ್ಲಿ ಇತ್ತೀಚೆಗೆ ವ್ಯಕ್ತಿಯೊಬ್ಬ ಸ್ಕೂಟರ್‌ಗೆ ನಾಯಿಯನ್ನು ಕಟ್ಟಿ ಎಳೆದು ಕೊಂಡುಹೋಗಿದ್ದ. ವೀಡಿಯೋ ವೈರಲ್‌ ಆದ ಬಳಿಕ ಆತನನ್ನು ಬಂಧಿಸಲಾಗಿತ್ತು.