ಪೊಲೀಸ್ ಪರೀಕ್ಷೆಯಲ್ಲಿ ನಕಲಿ ಅಭ್ಯರ್ಥಿ; ಮತ್ತೆ ನಾಲ್ವರ ಬಂಧನ
* ಪೊಲೀಸ್ ಕಾನ್ಸ್‌ಟೇಬಲ್ ಪರೀಕ್ಷೆಯಲ್ಲಿ ನಕಲಿ ಅಭ್ಯರ್ಥಿಗಳ ಹಾಜರು ಪ್ರಕರಣ
* ಸಿಐಡಿಯಿಂದ ನಾಲ್ವರು ಆರೋಪಿಗಳ ಬಂಧನ
* 2020ರ ಸೆಪ್ಟೆಂಬರ್ ಹಾಗೂ ಅಕ್ಟೋಬರ್‌ನಲ್ಲಿ ಕಾನ್ಸ್‌ಟೇಬಲ್ ಹುದ್ದೆಗೆ ನಡೆದಿದ್ದ ಪರೀಕ್ಷೆ
* ಲಿಖಿತ ಮತ್ತು ದೇಹದಾರ್ಢ್ಯ ಪರೀಕ್ಷೆಯಲ್ಲಿ ನಕಲಿ ಅಭ್ಯರ್ಥಿಗಳು ಹಾಜರಾಗಿದ್ದರು
ಬೆಂಗಳೂರು(ಜೂ. 13) ಪೊಲೀಸ್ ಕಾನ್ಸ್‌ಟೇಬಲ್ ಪರೀಕ್ಷೆಯಲ್ಲಿ ನಕಲಿ ಅಭ್ಯರ್ಥಿಗಳ ಹಾಜರು ಪ್ರಕರಣಕ್ಕೆ ಸಂಬಂಧಿಸಿ ಸಿಐಡಿಯಿಂದ ನಾಲ್ವರು ಆರೋಪಿಗಳನ್ನು ಬಂಧಿಸಿದೆ.
ಲಕ್ಷ್ಮಣ ಉದ್ಧಪ್ಪ ಬಂಡಿ, ಭೀಮಪ್ಪ ಮಹಾದೇವ್ ಹುಲ್ಲೋಳಿ, ಲಕ್ಷ್ಮಣ್ ಮತ್ತಪ್ಪ ಪರಣ್ಣವರ್ ಮತ್ತು ಮಲ್ಲಿಕಾರ್ಜುನ ಯಮುನಪ್ಪ ಬಲಣ್ಣನವರ್ ಬಂಧಿತರು. 2020ರ ಸೆಪ್ಟೆಂಬರ್ ಹಾಗೂ ಅಕ್ಟೋಬರ್‌ನಲ್ಲಿ ಕಾನ್ಸ್‌ಟೇಬಲ್ ಹುದ್ದೆಗೆ ಪರೀಕ್ಷೆ ನಡೆದಿತ್ತು.
ಗ್ರಾಮೀಣ ಬ್ಯಾಂಕ್‌ಗಳಲ್ಲಿ ಉದ್ಯೋಗ ಅವಕಾಶ ಇದೆ
ಲಿಖಿತ ಮತ್ತು ದೇಹದಾರ್ಢ್ಯ ಪರೀಕ್ಷೆಯಲ್ಲಿ ನಕಲಿ ಅಭ್ಯರ್ಥಿಗಳು ಹಾಜರಾಗಿದ್ದರು. ಈ ಬಗ್ಗೆ ರಾಜ್ಯದ ವಿವಿಧ ಠಾಣೆಗಳಲ್ಲಿ 21 ಪ್ರಕರಣಗಳು ದಾಖಲಾಗಿದ್ದವು. ನಂತರ ಸಿಐಡಿಗೆ ಪ್ರಕರಣ ವರ್ಗಾವಣೆ ಮಾಡಲಾಗಿತ್ತು.
ಇದುವರೆಗಿನ ತನಿಖೆಯಲ್ಲಿ ಒಟ್ಟು 61 ಆರೋಪಿಗಳ ಬಂಧನವಾಗಿದೆ. ಪರೀಕ್ಷೆಗೆ ಹಾಜರಾಗಿದ್ದ ಐವರು ಕಾನ್ಸ್‌ಟೇಬಲ್ ಗಳನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. ಒಟ್ಟು 1 ಲಕ್ಷದ 54 ಸಾವಿರ ರೂ, ಪೆನ್ ಡ್ರೈವ್ , ಹಾರ್ಡ್ ಡಿಸ್ಕ್, ಮೊಬೈಲ್ಸ್ ವಶಕ್ಕೆ ಪಡೆಯಲಾಗಿದ್ದು ನಾಪತ್ತೆಯಾಗಿರುವ ಪ್ರಮುಖ ಆರೋಪಿಗಳಿಗಾಗಿ ಶೋಧ ಮುಂದುವರಿದಿದೆ.