ಚಿತ್ರದುರ್ಗದಲ್ಲಿ ಬಹಿರ್ದೆಸೆಗೆಂದು ತೆರಳಿದ್ದ ತಾಯಿ, ಇಬ್ಬರು ಮಕ್ಕಳು ಸೇರಿ ಮೂವರು ಸಜೀವ ದಹನ
ತಾಯಿ ಮಕ್ಕಳನ್ನು ಬಹಿರ್ದೆಸೆಗೆ ಕರೆದುಕೊಂಡು ಹೋಗಿದ್ದಾಗ, ಮುಳ್ಳಿನ ಗಿಡಗಂಟಿಗಳಿಗೆ ಹೊತ್ತಿಕೊಂಡಿದ್ದ ಬೆಂಕಿಗೆ ಸಿಲುಕಿ ತಾಯಿ, ಇಬ್ಬರು ಮಕ್ಕಳು ಸೇರಿ ಮೂವರು ಸಜೀವ ದಹನವಾಗಿದ್ದಾರೆ.
ಚಿತ್ರದುರ್ಗ (ಮಾ.19): ತನ್ನ ಇಬ್ಬರು ಮಕ್ಕಳನ್ನು ಮಧ್ಯಾಹ್ನದ ವೇಳೆ ಬಹಿರ್ದೆಸೆಗೆಂದು ತಾಯಿ ಹೊರಗೆ ಕರೆದುಕೊಂಡು ಹೋಗಿದ್ದಾಳೆ. ಈ ವೇಳೆ ಬಳ್ಳಾರಿ ಜಾಲಿ ಮುಳ್ಳಿನ ಗಿಡಗಂಟಿಗಳು ಹೊಲದ ಬದುವಿನಲ್ಲಿ ಬೆಳೆದಿದ್ದವು. ಆದರೆ, ಏಕಾಏಕಿ ಮುಳ್ಳಿನ ಗಿಡಗಂಟಿಗಳಿಗೆ ಬೆಂಕಿ ಹೊತ್ತಿಕೊಂಡಿದ್ದು, ಇಬ್ಬರು ಮಕ್ಕಳು ಹಾಊ ತಾಯಿ ಸೇರಿದಂತೆ ಮೂವರು ಸಜೀವ ದಹನವಾಗಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಬಳಿಯ ಗ್ರಾಮದಲ್ಲಿ ನಡೆದಿದೆ.
ಈ ಘಟನೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಮಲ್ಲಸಂದ್ರ ಗ್ರಾಮದಲ್ಲಿ ಮಂಗಳವಾರ ನಡೆದಿದೆ. ಮೃತರನ್ನು ತಾಯಿ ಮಾರಕ್ಕ (24), ಪುತ್ರರಾದ ನಯನ್ (4), ಹರ್ಷವರ್ಧನ (2) ಎಂದು ಗುರುತಿಸಲಾಗಿದೆ. ತಾಯಿ ತನ್ನ ಇಒಬ್ಬರು ಮಕ್ಕಳನ್ನು ಕರೆದುಕೊಂಡು ಬಹಿರ್ದೆಸೆಗೆಂದು ಹೇಳಿ ಗ್ರಾಮದ ಹೊರ ವಲಯಕ್ಕೆ ಕರೆದುಕೊಂಡು ಬಂದಿದ್ದರು. ಈ ವೇಳೆ ಜಮೀನಿನ ಬದುವಿನಲ್ಲಿ ಬೆಳೆಸಲಾಗಿದ್ದ ಮುಳ್ಳಿನ ಗಿಡಗಳ ಬೇಲಿಗೆ ಬೆಂಕಿ ಇಟ್ಟುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಶಂಕೆ ಕೇಳಿಬಂದಿದೆ. ಇನ್ನು ಸ್ವತಃ ತಾಯಿಯೇ ತನ್ನಿಬ್ಬರು ಮಕ್ಕಳನ್ನು ಬೆಂಕಿಗೆ ತಳ್ಳಿ ಕೊನೆಗೆ ತಾನೂ ಬೆಂಕಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಸ್ಥಳೀಯರು ಹೇಳಿದ್ದಾರೆ.
ನಗರ್ತಪೇಟೆ ಹನುಮಾನ್ ಚಾಲೀಸಾ ರ್ಯಾಲಿ, ತೇಜಸ್ವಿ ಸೂರ್ಯ ಮೇಲೆ ಕಾಂಗ್ರೆಸ್ ದೂರು; ವಶಕ್ಕೆ ಪಡೆದ ಪೊಲೀಸ್!
ಇನ್ನು ಕುಟುಂಬದಲ್ಲಿನ ಕಲಹದಿಂದ ಬೇಸತ್ತು ತಾಯಿ ಹೀಗೆ ಮಕ್ಕಳನ್ನು ಕೊಲೆಗೈದು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳುತ್ತಿದ್ದಾರೆ. ಈ ಘಟನೆ ಚಳ್ಳಕೆರೆ ತಾಲೂಕಿನ ತಳಕು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಇನ್ನು ಘಟನಾ ಸ್ಥಳಕ್ಕೆ ಚಳ್ಳಕೆರೆ ಡಿವೈಎಸ್ಪಿ ರಾಜಣ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದಿದ್ದಾರೆ. ಕುಟುಂಬ ಸದಸ್ಯರನ್ನು ವಶಕ್ಕೆ ಪಡೆದು ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಈವರೆಗೆ ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ.
ಹೊಸಪೇಟೆಯಲ್ಲಿ ಬಸ್ ರಿವರ್ಸ್ ತೆಗೆದುಕೊಳ್ಳುವಾಗ ಬಸ್ ಕೆಳಗೆ ಬಿದ್ದು 3 ವರ್ಷದ ಮಗು ಸಾವು: ವಿಜಯನಗರ(ಮಾ.19): ಸಾರಿಗೆ ಬಸ್ ರಿವರ್ಸ್ ತೆಗೆದುಕೊಳ್ಳುವ ವೇಳೆ ಮೂರೂವರಿ ವರ್ಷದ ಬಾಲಕನ ಮೇಲೆ ಬಸ್ ಹರಿದ ಪರಿಣಾಮ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಹೊಸಪೇಟೆ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಇಂದು(ಮಂಗಳವಾರ) ನಡೆದಿದೆ. ಮೃತಪಟ್ಟ ಬಾಲಕನನ್ನ ಕೇಸರಿ ನಂದನ್ ಎಂದು ಗುರುತಿಸಲಾಗಿದೆ. ಬಸ್ ರಿವರ್ಸ್ ತೆಗೆದುಕೊಳ್ಳುವ ವೇಳೆ ಬಸ್ ಹಿಂದೆ ಪ್ಲಾಟ್ ಫಾರಂ ಬಳಿ ಬಾಲಕ ನಿಂತಿದ್ದನು. ಬಸ್ ಹಿಂದೆ ಮಗು ನಿಂತಿದ್ದನ್ನು ನೋಡದೇ ಡ್ರೈವರ್ ರಿವರ್ಸ್ ತೆಗೆದುಕೊಂಡಿದ್ದಾನೆ.ಈ ವೇಳೆ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಜೆಡಿಎಸ್ 2 ಸ್ಥಾನಕ್ಕೆ ಮೈತ್ರಿ ಮಾಡಿಕೊಳ್ಳಬೇಕಾ? ಬಿಜೆಪಿ ಮೈತ್ರಿ ಬಿಟ್ಟುಬಿಡಿ; ಸಿಎಂ ಇಬ್ರಾಹಿಂ ಪುತ್ರ ಫೈಜ್ ಮನವಿ!
ಗಂಗಾವತಿಗೆ ಹೋಗುವ ಪ್ಲಾಟ್ ಫಾರಂನಲ್ಲಿ ಬಾಲಕ ಮತ್ತು ಬಾಲಕನ ಪೋಷಕರು ನಿಂತಿದ್ದರು. ಮೃತ ಬಾಲಕ ಕೇಸರಿ ನಂದನ್ ಹೊಸಪೇಟೆ ತಾಲೂಕಿನ ನಾಗಲಾಪುರ ಗ್ರಾಮದ ರಾಚಪ್ಪ, ಮಲ್ಲಮ್ಮ ದಂಪತಿಗಳ ಪುತ್ರನಾಗಿದ್ದಾನೆ. ಮಲ್ಲಮ್ಮನ ತವರು ಮನೆ ಕೊಪ್ಪಳಕ್ಕೆ ಹೋಗಿ ವಾಪಾಸ್ ನಾಗಲಾಪುರಕ್ಕೆ ತೆರಳಿತ್ತದ್ದ ವೇಳೆ ಈ ಅವಘಡ ಸಂಭವಿಸಿದೆ. ಘಟನೆಗೆ ಸಂಬಂಧಿಸಿದಂತೆ ಸದ್ಯ ಬಸ್ ಚಾಲಕನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಸ್ಥಳಕ್ಕೆ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೊಸಪೇಟೆ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.